ಬೆಂಗಳೂರು: ಖಾಸಗಿ ಕಂಪನಿಯ ಡಿಸ್ಟ್ರಿಬ್ಯೂಟರ್ ಒಬ್ಬನ ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಗ್ಯಾಂಗ್ನ ಪುಲಿಕೇಶಿನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮ್ಮದ್ ಇಷಾದ್ , ಪರ್ವೇಶ್, ಅಫ್ನಾನ್ ಪಾಷಾ ಮತ್ತು ಮಹಮ್ಮದ್ ಇಷಾಕ್ ಬಂಧಿತ ಆರೋಪಿಗಳು.
ಕಂಪನಿಯ ಮಾಜಿ ನೌಕರನಾಗಿದ್ದ ಆರೋಪಿ ಮಹಮ್ಮದ್ ಇಷಾಕ್ ಅದೇ ಕಂಪನಿಯ ಡಿಸ್ಟ್ರಿಬ್ಯೂಟರ್ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ. ಹೀಗಾಗಿ, ಆತನನ್ನ ಅಡ್ಡಗಟ್ಟಿದರೆ ಲಕ್ಷಾಂತರ ರೂಪಾಯಿ ದೋಚಬಹುದು ಎಂದು ನಾಲ್ವರು ಪ್ಲಾನ್ ಮಾಡಿದ್ದರು.
ಅಂತೆಯೇ, ಕೆಲ ದಿನಗಳ ಹಿಂದೆ ಡಿಸ್ಟ್ರಿಬ್ಯೂಟರ್ ಕಾರಿಗೆ ಬೈಕ್ನಲ್ಲಿ ಅಡ್ಡಗಟ್ಟಿ ಆತನಿಂದ 45 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಆರೋಪಿಗಳನ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಬಂಧಿತರಿಂದ 38 ಲಕ್ಷ ರೂಪಾಯಿ ನಗದು ಸಹ ವಶಪಡಿಸಿಕೊಂಡಿದ್ದಾರೆ.
Published On - 1:56 pm, Sun, 26 July 20