ಬೆಂಗಳೂರು ಗ್ರಾಮಾಂತರ: ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ, ಮಗನೇ ದೊಡ್ಡಪ್ಪನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (56) ಮೃತ ರ್ದುದೈವಿ. ಹೌದು ಮೇ.10 ರಂದು ನಡೆದಿದ್ದ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ(ಮೇ.13) ಹೊರಬಿದ್ದಿದೆ. ಅದರಂತೆ ಕಳೆದ ರಾತ್ರಿ ಚುನಾವಣೆಯಲ್ಲಿ ಓಟ್ ಹಾಕಿಲ್ಲ ಎನ್ನುವ ವಿಚಾರಕ್ಕೆ ಮೃತ ಕೃಷ್ಣಪ್ಪ ಹಾಗೂ ಸಹೋದರ ಗಣೇಶಪ್ಪ ನಡುವೆ ಗಲಾಟೆಯಾಗಿದೆ. ಇದನ್ನ ಗಮನಿಸಿದ ಗಣೆಶಪ್ಪನ ಮಗ ಆದಿತ್ಯಾ ಎಂಬವವನು ದೊಡ್ಡಪ್ಪನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ಬಿಗಿದುಕೊಂಡು ವ್ಯಕ್ತಿ ಸಾವು
ಚಾಮರಾಜನಗರ: ನೇಣು ಬಿಗಿದುಕೊಂಡು ಬಿಗಿದುಕೊಂಡು ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದ ಮುಡಿಗುಂಡ ಸೇತುವೆ ಕೆಳಗೆ ನಡೆದಿದೆ. ಹೌದು ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸಿದ್ದರಾಜು ಮೃತ ವ್ಯಕ್ತಿ. ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೇಮ ವಿವಾಹ, ಪರ ಪುರುಷನೊಂದಿಗೆ ಪತ್ನಿ ಪರಾರಿ: ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ
ಆನೇಕಲ್(ಬೆಂಗಳೂರು): ತಂದೆಯೊಬ್ಬ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಆನೇಕಲ್ನ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ನಡೆದಿದೆ. ಬಿಟಿಎಂ ಬಡಾವಣೆ ನಿವಾಸಿ ಹರೀಶ್ ( 35) ಪ್ರಜ್ವಲ್(6) ರಿಷಬ್(4) ಮೃತರು. ಮೇ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಶೋಕಿ ಜೀವನಕ್ಕೆ ಬೇಸತ್ತು ತನ್ನಿಬ್ಬರ ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮೊದಲು ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಕಾಲ್ ಮಾಡಿದ್ದಾನೆ. ತಾನು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಪತ್ನಿಗೆ ಕೊಡಿ ಎಂದು ಹೇಳಿದ್ದ. ಕೂಡಲೇ ಹರೀಶ್ ಇರುವ ಲೊಕೇಷನ್ ಹುಡುಕಾಡಿದ್ದು, ಕೊನೆಗೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:Tunisha Sharma: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಹೆಚ್ಚಿತು ಅನುಮಾನ
2007ರಲ್ಲಿ ಅಕ್ಕನ ಮಗಳು ಅನನ್ಯಗಳ ಜೊತೆ ಪ್ರೇಮ ವಿವಾಹವಾಗಿತ್ತು. ವಿವಾಹದ ಬಳಿಕ ಪತ್ನಿಯ ಹೈ ಫೈ ಜೀವನದಿಂದ ಗಲಾಟೆಯಾಗಿತ್ತು. 2015ರಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಸಹ ಮಾಡಲಾಗಿತ್ತು. ಆದರೂ ಜಗಳ ಮಾತ್ರ ನಡೆಯುತ್ತಲೇ ಇತ್ತು. ಹರೀಶ್ ತಮ್ಮ ಪೋಷಕರ ಮನೆ ಬಿಟ್ಟು ಪ್ರತ್ಯೇಕ ಮನೆ ಮಾಡಿದ್ದ. ಇದಾದ ಕೆಲವೇ ದಿನಗಳಲ್ಲಿ ಪತ್ನಿ ಅನನ್ಯ ಮನೆ ಬಿಟ್ಟು ಪರ ಪುರುಷನೊಂದಿಗೆ ಪರಾರಿಯಾಗಿದ್ದಳು. ಇದರಿಂದ ತಬ್ಬಲಿಯಾದ ಮಕ್ಕಳನ್ನು ಹರೀಶ್ ಪೋಷಣೆ ಮಾಡುತ್ತಿದ್ದ. ಆದರೂ ಪತ್ನಿ ಪದೇ ಪದೇ ಹಣಕ್ಕೆ ಬೇಡಿಕೆ. ನೀಡದಿದ್ದರೆ ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳು. ಕೆಲಸದ ಜೊತೆ ಮಕ್ಕಳ ಪೋಷಣೆ ಬಗ್ಗೆ ಹರೀಶ್ ಮನನೊಂದಿದ್ದ. ಕೊನೆಗೆ ತನ್ನಿಬ್ಬರ ಮಕ್ಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ