ರಾಗಿಣಿಗೆ ಇಂದೂ ಇಲ್ಲ ಜಾಮೀನು ಭಾಗ್ಯ, ಇನ್ನೂ 3 ದಿನ ಜೈಲೇ ಗತಿ

|

Updated on: Sep 16, 2020 | 1:17 PM

[lazy-load-videos-and-sticky-control id=”maB5IIXix9g”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದೂ ಸಹ ಜಾಮೀನು ಸಿಗಲಿಲ್ಲ. ಪ್ರಕರಣದಲ್ಲಿ ಹೊಸ ಎಸ್​ಪಿಪಿಗಳ ನೇಮಕ ಮಾಡಿರುವ ಹಿನ್ನೆಲೆಯಿಂದಾಗಿ NDPS ವಿಶೇಷ ಕೋರ್ಟ್ ಸೆ.19 ಕ್ಕೆ ವಿಚಾರಣೆ ಮುಂದೂಡಿದೆ. ಜೊತೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಹೊಸ ಅಭಿಯೋಜಕರು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ರಾಗಿಣಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಇಲ್ಲದಂತ್ತಾಗಿದೆ. ಇನ್ನೂ ಮೂವರ ಜಾಮೀನು ಅರ್ಜಿ ವಿಚಾರಣೆಯೂ ಮುಂದೂಡಿಕೆ.. ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ […]

ರಾಗಿಣಿಗೆ ಇಂದೂ ಇಲ್ಲ ಜಾಮೀನು ಭಾಗ್ಯ, ಇನ್ನೂ 3 ದಿನ ಜೈಲೇ ಗತಿ
Follow us on

[lazy-load-videos-and-sticky-control id=”maB5IIXix9g”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದೂ ಸಹ ಜಾಮೀನು ಸಿಗಲಿಲ್ಲ.

ಪ್ರಕರಣದಲ್ಲಿ ಹೊಸ ಎಸ್​ಪಿಪಿಗಳ ನೇಮಕ ಮಾಡಿರುವ ಹಿನ್ನೆಲೆಯಿಂದಾಗಿ NDPS ವಿಶೇಷ ಕೋರ್ಟ್ ಸೆ.19 ಕ್ಕೆ ವಿಚಾರಣೆ ಮುಂದೂಡಿದೆ. ಜೊತೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಹೊಸ ಅಭಿಯೋಜಕರು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ರಾಗಿಣಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಇಲ್ಲದಂತ್ತಾಗಿದೆ.

ಇನ್ನೂ ಮೂವರ ಜಾಮೀನು ಅರ್ಜಿ ವಿಚಾರಣೆಯೂ ಮುಂದೂಡಿಕೆ..

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧಿತರಾಗಿರುವ ರಾಹುಲ್ ತೋನ್ಸೆ, ವಿನಯ್ ಕುಮಾರ್, ಶಿವಪ್ರಕಾಶ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಜಾಮೀನು ಅರ್ಜಿಯ ವಿಚಾರಣೆಯನ್ನು NDPS ವಿಶೇಷ ಕೋರ್ಟ್ ಸೆಪ್ಟೆಂಬರ್ 19ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

Published On - 12:03 pm, Wed, 16 September 20