ಬೆಂಗಳೂರು: ಹೆಚ್ಚಿನ ದರಕ್ಕೆ ರೈಲ್ವೆ ಟಿಕೆಟ್ ಮಾರುತ್ತಿದ್ದ 10 ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಬಂಧಿತರ ಬಳಿ 7 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್ಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರು 27 IRCTC IDಗಳ ಮೂಲಕ E ಟಿಕೆಟ್ ಬುಕ್ ಮಾಡ್ತಿದ್ದರು. ಇವುಗಳನ್ನು ತುರ್ತು ಸಂದರ್ಭದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡ್ತಿದ್ದರು ಎಂದು ಹೇಳಲಾಗಿದೆ.
ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಕೆಂಗೇರಿ, ಚಿಕ್ಕಪೇಟೆ, ಮಾಗಡಿ ರಸ್ತೆ, ತಾವರೆಕೆರೆ, ರಾಮನಗರ ಹಾಗೂ
ರಾಮಮೂರ್ತಿನಗರದಲ್ಲಿ ದಾಳಿ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ, ರೈಲ್ವೆ ಕಾಯ್ದೆಯಂತೆ ಪೊಲೀಸರು 10 ಪ್ರಕರಣ ದಾಖಲಿಸಿದ್ದಾರೆ.
ಲಿಂಗೈಕ್ಯ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗ್ತಿದ್ದ ಜೈವಿಕವನಕ್ಕೆ ಕಿಡಿಗೇಡಿಗಳಿಂದ ಬೆಂಕಿ