ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಾ? ಹಾಗಿದ್ರೆ ಎಚ್ಚರ! ಹಾಡಹಗಲೇ ಮನೆಗೆ ನುಗ್ಗಿ ದರೋಡೆ, ಓರ್ವ ಅರೆಸ್ಟ್

| Updated By: ಆಯೇಷಾ ಬಾನು

Updated on: Jan 18, 2024 | 9:32 AM

ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಗೌರಮ್ಮ ಎಂಬುವವರ ಮನೆಯಲ್ಲಿ ದರೋಡೆ ಮಾಡಿ ಈ ಗ್ಯಾಂಗ್ ಎಸ್ಕೇಪ್ ಆಗಿತ್ತು. ಗೌರಮ್ಮ ಅವರು ತಮ್ಮ ಮೊಮ್ಮಕ್ಕಳನ್ನು ಟ್ಯೂಷನ್​ಗೆ ಬಿಟ್ಟು ಮನೆಗೆ ಬಂದಾಗ ಕಳ್ಳರ ಗ್ಯಾಂಗ್ ವೃದ್ಧೆಯ ಮೇಲೆ ಅಟ್ಯಾಕ್ ಮಾಡಿ ಹಿಂಬದಿಯಿಂದ ಹಿಡಿದು ಕೈ ಕಾಲು ಕಟ್ಟಿ ಬಾಯಿಗೆ ಮಂಕಿ ಕ್ಯಾಪ್ ತುರುಕಿ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದರು.

ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಾ? ಹಾಗಿದ್ರೆ ಎಚ್ಚರ! ಹಾಡಹಗಲೇ ಮನೆಗೆ ನುಗ್ಗಿ ದರೋಡೆ, ಓರ್ವ ಅರೆಸ್ಟ್
ಬಂಧನ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜ.18: ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಾ ಹಾಗಿದ್ರೆ ಎಚ್ಚರ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್​ ಮಾಡಿ ಹಣ, ಚಿನ್ನ ಕಳ್ಳತನ (Theft) ಮಾಡುವ ಗ್ಯಾಂಗ್ ಪತ್ತೆಯಾಗಿದೆ. ಒಂಟಿಯಾಗಿರೋ ಮಹಿಳೆಯರು-ವೃದ್ಧರೇ ಈ ಕಳ್ಳರ ಟಾರ್ಗೆಟ್. ಇತ್ತೀಚೆಗೆ ವೃದ್ಧೆ ಮೇಲೆ ಹಲ್ಲೆ ಮಾಡಿ ಹಣ ಹಾಗೂ ಒಡವೆ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಕಳ್ಳರು ಹಗಲೆಲ್ಲಾ ಓಡಾಡಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಳ್ಳತನಕ್ಕೆ ನುಗ್ಗುತ್ತಾರೆ. ಇವರ ಕಳ್ಳತನಕ್ಕೆ ಯಾರಾದ್ರು ಅಡ್ಡ ಬಂದ್ರೆ ಅವರ ಮೇಲೆ ಹಲ್ಲೆ (Assault) ನಡೆಸುತ್ತಾರೆ.

ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಗೌರಮ್ಮ ಎಂಬುವವರ ಮನೆಯಲ್ಲಿ ದರೋಡೆ ಮಾಡಿ ಈ ಗ್ಯಾಂಗ್ ಎಸ್ಕೇಪ್ ಆಗಿತ್ತು. ಗೌರಮ್ಮ ಅವರು ತಮ್ಮ ಮೊಮ್ಮಕ್ಕಳನ್ನು ಟ್ಯೂಷನ್​ಗೆ ಬಿಟ್ಟು ಮನೆಗೆ ಬಂದಾಗ ಕಳ್ಳರ ಗ್ಯಾಂಗ್ ವೃದ್ಧೆಯ ಮೇಲೆ ಅಟ್ಯಾಕ್ ಮಾಡಿ ಹಿಂಬದಿಯಿಂದ ಹಿಡಿದು ಕೈ ಕಾಲು ಕಟ್ಟಿ ಬಾಯಿಗೆ ಮಂಕಿ ಕ್ಯಾಪ್ ತುರುಕಿ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದರು. 15 ಗ್ರಾಂ ತೂಕದ ನೆಕ್ಲೆಸ್, 12 ಗ್ರಾಂ ತೂಕದ ಚಿನ್ನದ ಸರ, 4.5 ಗ್ರಾಂನ ಚಿನ್ನದ ಉಂಗುರ, 8 ಗ್ರಾಂ‌ ತೂಕದ ಚಿನ್ನದ ಓಲೆ ಸೇರಿ ಒಟ್ಟು 120 ಗ್ರಾಂ ಚಿನ್ನದ ಒಡವೆ ಕಳ್ಳತನವಾಗಿತ್ತು. ಜೊತೆಗೆ 100 ಗ್ರಾಂ ಬೆಳ್ಳಿ, 50 ಸಾವಿರ ನಗದು ಲೂಟಿ ಮಾಡಿ ಖದೀಮರು ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮುಂದುವರಿದ ಹಿಂದೂ ಮುಸ್ಲಿಂ ಸಂಘರ್ಷ: ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ

ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ಮೂವರಿಗೆ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಲಾಗಿದೆ. ಹಿಂದೂ ದೇವರ ಹೆಸರಿನಲ್ಲಿ ಇರುವ ನಾಮಫಲಕ ತೆರವು ಸಂಘರ್ಷ ಏರ್ಪಟ್ಟಿತ್ತು. ನಾಮಫಲಕ ತೆರವು ವಿರೋಧಿಸಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ನಡೆಸಿದ್ದಕ್ಕೆ ಕಾರ್ಯಕರ್ತರಿಗೆ ದುಬೈನಿಂದ ವಿಡಿಯೋ ಕಾಲ್ ಮಾಡಿ ಮೂವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಿಂದೂ ಕಾರ್ಯಕರ್ತರಾದ ಹರೀಶ್​​​, ದೆಯಾ, ಮಹೇಶ್​​​​​ಗೆ ಅನ್ಯಕೋಮಿನ ಯುವಕ ಧಮ್ಕಿ ಹಾಕಿದ್ದು, ಜಾಲಿ ಪಟ್ಟಣದ ಗುರುಗಳನ್ನು ಮುಟ್ಟಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಮುಕ್ತಾರ್ ಮೊಹಮ್ಮದ್ ಕೊಟ್ಟಿಕೋಡಿ ಬೆದರಿಕೆ ಹಾಕಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ