AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪರಮೇಶ್ವರ್ ಹೆಸ್ರೇಳಿ IMAಯಿಂದ 5ಕೋಟಿ ಪಡೆದಿದ್ದ PA ರಮೇಶ್, ಶೋಕಿ ಜೀವನಕ್ಕೆ ಮಾರುಹೋಗಿದ್ದ!’

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಸುತ್ತ ಅನುಮಾನದ ಸುಳಿ ಸುಂಟರಗಾಳಿಯಂತೆ ಸುಳಿಯುತ್ತಿದೆ. ಈ ಹಿಂದೆ, ಐಟಿ ಅಧಿಕಾರಿಗಳ ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗುತ್ತಿತ್ತು. ಆದರೆ ಈಗ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ವಿಚಾರಗಳನ್ನ ಶೋಧಿಸಿರುವ ಪೊಲೀಸರು ರಮೇಶ್ ಪ್ರಮುಖವಾಗಿ 3 ಪ್ರಕರಣಗಳಲ್ಲಿ ಸಿಲುಕಿದ್ದ ಎಂದು ಪತ್ತೆ ಹಚ್ಚಿದ್ದಾರೆ. ಪರಮೇಶ್ವರ್ ಪಿಎ ರಮೇಶ್ ತಾನು ಎಸಗಿದ್ದ ತಪ್ಪುಗಳಿಂದ ಬೆದರಿದ್ದ. ನಮ್ಮ ಈ ತನಿಖಾ ಮಾಹಿತಿಯಿಂದ […]

'ಪರಮೇಶ್ವರ್ ಹೆಸ್ರೇಳಿ IMAಯಿಂದ 5ಕೋಟಿ ಪಡೆದಿದ್ದ PA ರಮೇಶ್, ಶೋಕಿ ಜೀವನಕ್ಕೆ ಮಾರುಹೋಗಿದ್ದ!'
ಸಾಧು ಶ್ರೀನಾಥ್​
|

Updated on:Oct 17, 2019 | 5:14 PM

Share

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಸುತ್ತ ಅನುಮಾನದ ಸುಳಿ ಸುಂಟರಗಾಳಿಯಂತೆ ಸುಳಿಯುತ್ತಿದೆ. ಈ ಹಿಂದೆ, ಐಟಿ ಅಧಿಕಾರಿಗಳ ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗುತ್ತಿತ್ತು. ಆದರೆ ಈಗ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ.

ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ವಿಚಾರಗಳನ್ನ ಶೋಧಿಸಿರುವ ಪೊಲೀಸರು ರಮೇಶ್ ಪ್ರಮುಖವಾಗಿ 3 ಪ್ರಕರಣಗಳಲ್ಲಿ ಸಿಲುಕಿದ್ದ ಎಂದು ಪತ್ತೆ ಹಚ್ಚಿದ್ದಾರೆ. ಪರಮೇಶ್ವರ್ ಪಿಎ ರಮೇಶ್ ತಾನು ಎಸಗಿದ್ದ ತಪ್ಪುಗಳಿಂದ ಬೆದರಿದ್ದ. ನಮ್ಮ ಈ ತನಿಖಾ ಮಾಹಿತಿಯಿಂದ ಕುಟುಂಬದವರಿಗೆ ನೋವಾಗಬಹುದು. ಆ ನೋವು ನಮಗೂ ಇದೆ. ಆದರೆ ಸತ್ಯ ಹೊರಬರಲೇ ಬೇಕಿದೆ. ಇನ್ನೂ ಸಾಕಷ್ಟು ಮಂದಿ ರಮೇಶ್ ನಂತೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಎಚ್ಚೆತ್ತುಕೊಳ್ಳಲಿ ಎಂಬುದೇ ನಮ್ಮ ಕಳಕಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣ 1: ಪರಮೇಶ್ವರ್ ಹೆಸರಲ್ಲಿ IMA ಸಂಸ್ಥೆಯಿಂದ ಪಡೆದ ಹಣವೇ ಉರುಳು ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಅವರ ಹೆಸರನ್ನು ಪಿಎ ರಮೇಶ್ ದುರ್ಬಳಕೆ ಮಾಡಿದ್ದಾಗಿ ತಿಳಿದು ಬಂದಿದೆ. ಬಹು ಕೋಟಿ ವಂಚನೆ ಮಾಡಿದ್ದ ಐಎಂಎ ಪ್ರಕರಣದಲ್ಲಿ ರಮೇಶ್, ಪರಮೇಶ್ವರ್ ಹೆಸರು ಬಳಸಿ ಐಎಂಎ ಸಂಸ್ಥೆಯಿಂದ 5 ಕೋಟಿ ರೂ ಪಡೆದಿದ್ದ. ಈ ವಿಚಾರವನ್ನು ಐಟಿ ಅಧಿಕಾರಿಗಳು ಮನೆಯಿಂದ ವಶಪಡಿಸಿಕೊಂಡಿರುವ ರಮೇಶ್ ಡೈರಿಯಲ್ಲಿ ಪತ್ತೆಯಾಗಿದೆ.

ಪ್ರಕರಣ 2: ಹೇಗಿದ್ದವನು ಹೇಗಾದೆ! ಬಡತನದಿಂದ ಬಂದಿದ್ದ ರಮೇಶ್ ಹಣ ಬರುತ್ತಿದ್ದಂತೆ ಬದಲಾಗಿದ್ದ. ನಾನಾ ಹವ್ಯಾಸಗಳು, ಖಯಾಲಿಗಳನ್ನು ರೂಢಿಸಿಕೊಂಡಿದ್ದ ರಮೇಶ್ ತನ್ನ ಮೊಬೈಲ್​ನಲ್ಲಿ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ. ತಾನು ಕ್ಲಬ್ ಗಳ ಬೆಡ್ ರೂಂನಲ್ಲಿರುವ ಖಾಸಗಿ ವಿಡಿಯೋಗಳನ್ನ ತನ್ನ ಸ್ನೇಹಿತರಿಗೆ ತೋರಿಸಿ.. ತಾನು ಹೇಗಿದ್ದವನು! ಹೇಗಾದೆ!? ಎಂದು ಬೀಗುತ್ತಿದ್ದನಂತೆ. ರಮೇಶ್ ಮೊಬೈಲ್ಅನ್ನು ಐಟಿ ಅಧಿಕಾರಿಗಳು ಪಡೆದು ಡಾಟಾ ಸಂಗ್ರಹಿಸಿದಾಗ ಇವೆಲ್ಲ ಬೆಳಕಿಗೆ ಬಂದಿದೆ.

ಪ್ರಕರಣ 3: ಎರಡು ಕೋಟಿ ಹಣದ ಲೆಕ್ಕ ಮಾತ್ರ ಸಿಕ್ಕಿತು ರಮೇಶ್ ಮನೆಯಲ್ಲಿ ಐಟಿ ದಾಳಿಯ ವೇಳೆ ಐಟಿಗೆ 2 ಕೋಟಿ ಹಣ ಸಿಕ್ಕಿತ್ತು. ಆ ಹಣಕ್ಕೆ ಐಟಿ ವಿಚಾರಣೆ ವೇಳೆ ಲೆಕ್ಕ ಕೊಡುವ ಸವಾಲು ರಮೇಶ್ ಮುಂದಿತ್ತು. ಅದಲ್ಲದೆ, ಐಟಿಗೆ ಬೇರೆ ಬೇರೆ ಆಸ್ತಿಗಳ ಕಾಗದ ಪತ್ರ, ದಾಖಲಾತಿಗಳೂ ಸಿಕ್ಕಿದ್ದವು. ಇವುಗಳಿಗೆಲ್ಲ ಲೆಕ್ಕ ಕೊಡುವ ಸ್ಥಿತಿಯಲ್ಲಿ, ರಮೇಶ್ ಇರಲಿಲ್ಲ.

ಈ ಮೂರು ವಿಚಾರಗಳಿಂದ ಬಹಳ ಹೆದರಿದ್ದ ರಮೇಶ್, ಐಟಿ ಅಧಿಕಾರಿಗಳು ಈ ಎಲ್ಲಾ ವಿಚಾರವನ್ನು ಬಹಿರಂಗಗೊಳಿಸುತ್ತಾರೆ. ತಾನು ಡಿಕೆ ಶಿವಕುಮಾರ್ ಮಾದರಿಯಲ್ಲೇ ಜೈಲು ಪಾಲಾಗುತ್ತೇನೆ. ತಾನು, ತನ್ನ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತೆ ಎಂದು ಹೆದರಿ ಸಾವಿಗೆ ಶರಣಾಗುವಂತೆ ಮಾಡಿತ್ತು ಎಂದು ವಿಶ್ವಸನೀಯ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Published On - 4:52 pm, Thu, 17 October 19

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ