ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ: ಕೇವಲ 500 ರೂ.ಗಾಗಿ ಕಾರ್ಮಿಕನ ಕೊಲೆ

ಕೇವಲ 500 ರೂಪಾಯಿಗಾಗಿ ಗಾಂಜಾ ಅಮಲಿನಲ್ಲಿದ್ದ ನಾಲ್ವರು ಯುವಕರು ಕೂಲಿ ಕಾರ್ಮಿಕನ ಇರಿದು ಹತ್ಯೆ ಮಾಡಿರುವಂತಹ ಘಟನೆ ಅಶೋಕ ನಗರದ ತುಂಗಾ ಚಾನೆಲ್​​ ಬಳಿ ನಡೆದಿದೆ. ಆ ಮೂಲಕ ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿ ಮೀರಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ: ಕೇವಲ 500 ರೂ.ಗಾಗಿ ಕಾರ್ಮಿಕನ ಕೊಲೆ
ಕೊಲೆಯಾದ ವ್ಯಕ್ತಿ, ದೊಡ್ಡಪೇಟೆ ಪೊಲೀಸ್ ಠಾಣೆ
Image Credit source: tv9 kannada
Edited By:

Updated on: Oct 04, 2026 | 6:37 PM

ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ
  • ಕೇವಲ 500 ರೂಪಾಯಿಗಾಗಿ ಕೂಲಿ ಕಾರ್ಮಿಕನ ಹತ್ಯೆಗೈದ ಯುವಕರು
  • ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು

ಶಿವಮೊಗ್ಗ, ಅಕ್ಟೋಬರ್​​ 04: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಗಾಂಜಾ ಅಮಲಿನಲ್ಲಿದ್ದ ನಾಲ್ವರು ಯುವಕರು ವ್ಯಕ್ತಿಯೊಬ್ಬನ ಬಳಿ ಹಣಕ್ಕಾಗಿ ಪೀಡಿಸಿದ್ದು, ಕೇವಲ 500 ರೂ ಕೊಡಲು ನಿರಾಕರಿಸಿದ್ದಕ್ಕೆ ಆತನನ್ನು ಡ್ರ್ಯಾಗನ್‌ನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಶೋಕ ನಗರದ ತುಂಗಾ ಚಾನೆಲ್ ಬಳಿ ನಿನ್ನೆ ರಾತ್ರಿ ನಡೆದಿದೆ. ಅಮಾಯಕ ಕೂಲಿ ಕಾರ್ಮಿಕನ ಕೊಲೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ.

ನಡೆದಿದ್ದೇನು?

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಶಿವಮೊಗ್ಗದ ಅಶೋಕ ನಗರದ ತುಂಗಾ ಚಾನೆಲ್ ಬಳಿ ಎರಡು ಬೈಕ್​​ನಲ್ಲಿ ಬಂದ ನಾಲ್ವರು ಯುವಕರು, ಗಾಂಜಾ ಅಮಲಿನಲ್ಲಿದ್ದರು. ಈ ವೇಳೆ ಯುವಕರ ಕಣ್ಣು ಮಹ್ಮದ್ ಅಲಿ ಮೇಲೆ ಬಿದ್ದಿದೆ. ಆತ ಕೈಯಲ್ಲಿ 500 ರೂ ಹಿಡಿದುಕೊಂಡಿದ್ದ. ಇದನ್ನು ಗಮನಿಸಿದ ಯುಕವರು ಆತನ ಬಳಿ ತೆರಳಿ ಹಣಕ್ಕಾಗಿ ಪೀಡಿಸಿದ್ದಾರೆ.

500 ರೂ.ಗಾಗಿ ವ್ಯಕ್ತಿಯ ಜೀವ ತೆಗೆದ ಯುವಕರು 

ಕೂಲಿ ಮಾಡಿಕೊಂಡು ಜೀವನ ನಡೆಸಿದ್ದ ಮಹ್ಮದ್ ಅಲಿ, ತನ್ನ ಬಳಿಯಿದ್ದ 500 ರೂ ನೋಟು ನೀಡಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಡ್ರ್ಯಾಗನ್​ನಿಂದ ಮಹ್ಮದ್​ಗೆ ಇರಿದಿದ್ದಾರೆ. ಆತನ ಬಳಿಯಿದ್ದ 500 ರೂ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಹ್ಮದ್ ರಕ್ತಸಿಕ್ತವಾಗಿ ಒದ್ದಾಡಿ ರಸ್ತೆ ಪಕ್ಕದಲ್ಲೇ ಪ್ರಾಣ ಬಿಟ್ಟಿದ್ದ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿದೆ.

ಶಿವಮೊಗ್ಗದಲ್ಲಿ ಹೆಚ್ಚಾದ ಗಾಂಜಾ ಹಾವಳಿ

ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ದಿನೇದಿನೇ ಜಾಸ್ತಿಯಾಗುತ್ತಿದೆ. ಗಾಂಜಾಗೆ ಯುವ ಪಿಳಿಗೆ ಬಲಿಪಶು ಆಗುತ್ತಿದೆ. ನಿರುದ್ಯೋಗ ಯುವಕರು ಗಾಂಜಾಕ್ಕೆ ದಾಸರಾಗುತ್ತಿದ್ದು, ಕ್ರೈಂಗಳ ಸಂಖ್ಯೆ ಕೂಡ  ಜಾಸ್ತಿಯಾಗುತ್ತಿವೆ. ಚಿಗರು ಮೀಸೆಯ ಯುವಕರು ಗಾಂಜಾ ಸೇವಿಸಿ ರೌಡಿಸಂ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಹಣದ ಕೊರತೆ ಆಗುತ್ತಿದ್ದಂತೆ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಜೀವ ಬೆದರಿಕೆ ಹಾಕಿ ವಸೂಲಿಗಿಳಿದಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಲ್ಲಿ ಹೊಡೆದಾಡಿಕೊಂಡ ಕಾರ್ಮಿಕರು, 8 ಆರೋಪಿಗಳ ಬಂಧನ: ಉತ್ತರಹಳ್ಳಿಯಲ್ಲಿ ಪುಂಡಾಟ ಮೆರೆದಿದ್ದ 11 ಆರೋಪಿಗಳ ಸೆರೆ

ಗಾಂಜಾ ಅಮಲಿನಲ್ಲಿ ಹಣಕ್ಕಾಗಿ ಕೂಲಿ ಕಾರ್ಮಿಕನ ಹತ್ಯೆ ಮಾಡಿದ್ದು ನಗರದಲ್ಲಿ ಆತಂಕ ಸೃಷ್ಟಿಸಿದೆ.  ನಗರದಲ್ಲಿ ಬೇರುಬಿಟ್ಟಿರುವ ಗಾಂಜಾ ದಂಧೆಗೆ ಪೊಲೀಸರು ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಏಕೆ ಮುಂದಾಗಿಲ್ಲ ಎನ್ನುವುದು ಮಾತ್ರ ಜನ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ.

Shivamogga Crime News: ಹಣಕ್ಕಾಗಿ ಗಾಂಜಾ ವ್ಯಸನಿಗಳಿಂದ ಕೊಲೆ ಆರೋಪ.. ಮಹಮದ್ ಅಲಿ ಸಹೋದರನ ಭಾವುಕ ಮಾತು| #TV9D

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:32 pm, Sun, 4 October 26

Basavaraj Yaraganavi
Loading...
Unable to load recommendations.
Follow Us