ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತರಗತಿಯ ಇಬ್ಬರು ಶಿಕ್ಷಕರಿಂದ ನಿರಂತರ ಕಿರುಕುಳವನ್ನು ಅನುಭವಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಸೂಸೈಡ್ ನೋಟ್ನಲ್ಲಿ ಅವರ ಹೆಸರು ಬರೆದಿಟ್ಟು ಫಿನಾಯಿಲ್ ಸೇವಿಸಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಅವನು ತನ್ನ ಶಾಲೆಯ ಇಬ್ಬರು ಶಿಕ್ಷಕರನ್ನು ದೂಷಿಸಿ ಸೂಸೈಡ್ ನೋಟ್ ಬರೆದಿಟ್ಟಿದ್ದಾನೆ. ರಶ್ಮಿ ಟೀಚರ್, ಮತ್ತೋರ್ವ ಶಿಕ್ಷಕರು ತನಗೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಆತ ಬರೆದಿದ್ದಾನೆ.
ಶುಕ್ರವಾರ ಮಗು ಶಾಲೆಯಿಂದ ಮರಳಿದ ಬಳಿಕ ಈ ಘಟನೆ ನಡೆದಿದೆ. ಇಬ್ಬರು ಶಿಕ್ಷಕರ ಮೇಲೆ ಆರೋಪ ಹೊರಿಸಿರುವ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮಗು ಮತ್ತು ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಆರಂಭವಾಗಿದೆ.
ಇದನ್ನೂ ಓದಿ: ಮಂಗಳೂರು: ಪತ್ನಿ, ಮಗನನ್ನು ಕೊಂದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ
ಮಾಹಿತಿ ಪ್ರಕಾರ, ಮಗುವನ್ನು ಒಂಬತ್ತನೇ ತರಗತಿಯ ವಿದ್ಯಾರ್ಥಿ ಮಾನವೇಂದ್ರ ಎಂದು ಗುರುತಿಸಲಾಗಿದೆ. ಮಾನವೇಂದ್ರ ಮಧ್ಯ ಪ್ರದೇಶದ ಗ್ವಾಲಿಯರ್‌ನ ಕೇಂದ್ರೀಯ ವಿದ್ಯಾಲಯ ನಂ. 2ರಲ್ಲಿ ಓದುತ್ತಿದ್ದ. ಪೋಷಕರ ಪ್ರಕಾರ, ಮಾನವೇಂದ್ರನನ್ನು ಶಿಕ್ಷಕರು ಒಂದು ವರ್ಷದಿಂದ ಪೀಡಿಸುತ್ತಿದ್ದರು. ಮಾನವೇಂದ್ರ ಶುಕ್ರವಾರ ಶಾಲೆಯಿಂದ ಮನೆಗೆ ಮರಳಿದ ಬಳಿಕ ಈ ಘಟನೆ ನಡೆದಿದೆ. ತೀವ್ರ ಸುಸ್ತಾಗಿದ್ದ ಆತ ನಂತರ ವಾಂತಿ ಮಾಡಲು ಪ್ರಾರಂಭಿಸಿದ. ತಾಯಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆಗ ಆತ ಫಿನಾಯಿಲ್ ಕುಡಿದಿದ್ದು ಗೊತ್ತಾಗಿದೆ.
ತನ್ನ ಶಿಕ್ಷಕರಾದ ರಶ್ಮಿ ಗುಪ್ತಾ ಮತ್ತು ದಿವಾಕರ್ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಮಾನವೇಂದ್ರ ಸೂಸೈಡ್ ಪತ್ರದಲ್ಲಿ ಆರೋಪಿಸಿದ್ದಾನೆ. ನನ್ನ ಆತ್ಮಹತ್ಯೆಗೆ ಅವರಿಬ್ಬರೇ ಕಾರಣ ಎಂದಿದ್ದಾಣೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ