ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಕೇಸ್ ನಲ್ಲಿ ಸೆಲೆಬ್ರೆಟಿಗಳು, ಉದ್ಯಮಿ, ರಾಜಕಾರಣಿಗಳ ಪುತ್ರರೇ ಲಾಕ್ ಆಗಿ ಸಾಲು ಸಾಲು ಸಿಸಿಬಿ ಮುಂದೆ ಡ್ರಿಲ್ ನಡೆಸಿದ್ದರು. ಆ ಬಳಿಕ ಕೋವಿಡ್ ನಂತರ ಕೆಲ ಸಮಯ ಸುಮ್ಮನಾಗಿದ್ದ ಸಿಲಿಕಾನ್ ಸಿಟಿ ಮಾದಕ ಜಗತ್ತು ಮತ್ತೆ ತಲೆಯೆತ್ತುತ್ತಿದೆ. ಬೆಂಗಳೂರು ಸಿಟಿ ಒಳಗೆ ಆಯೋಜನೆಗೊಳ್ಳುತ್ತಿದ್ದ ರೇವ್ ಪಾರ್ಟಿ ಇದೀಗ ಬೆಂಗಳೂರು ಹೊರವಲಯಕ್ಕೆ ಶಿಫ್ಟ್ ಆಗಿದ್ದು, ಸ್ಯಾಂಡಲ್ವುಡ್ ಕೇಸ್ ನಲ್ಲಿ ಲಾಕ್ ಆದವ್ರೆ ಈಗಲೂ ಯುವಕ- ಯುವತಿಯರಿಗೆ ನಶೆ ಏರಿಸುವ ರೇವ್ ಪಾರ್ಟಿ ಗಳನ್ನ, ಪೇಜ್ 3 ಪಾರ್ಟಿಗಳನ್ನ ಆಯೋಜಿಸ್ತಿದ್ದರಾ ಅನ್ನೋ ಅನುಮಾನವನ್ನು ಇತ್ತೀಚೆಗಿನ ಕೆಲ ಘಟನಾವಳಿಗಳು ಪುಷ್ಟೀಕರಿಸ್ತಿವೆ.
ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಮುಂದುವರೆದ ಭಾಗವಾಗ್ತಿದೆಯಾ ಬೆಂಗಳೂರು ಹೊರವಲಯದ ರೇವ್ ಪಾರ್ಟಿ…!
ಯೆಸ್… ಸಿಸಿಬಿ ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದ ದೇವನಹಳ್ಳಿಯ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ ಠಾಣಾ ವ್ಯಾಪ್ತಿಗೆ ಈ ಹಿಂದೆ ಒಳಪಟ್ಟಿದ್ದ ಜೇಡ್ ವಿಲ್ಲಾ- 735 ಮೇಲೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ರು. ಸಿಸಿಬಿ ದಾಳಿ ವೇಳೆ ಬಳ್ಳಾರಿ ಮೂಲದ ಉದ್ಯಮಿ ಅಂಕಿತ್ ಜೈನ್ ಸೇರಿದಂತೆ 8 ಜನ ಆರೋಪಿಗಳನ್ನ ಬಂಧಿಸಿ, ವೀಸಾ ಪಾಸ್ ಪೋರ್ಟ್ ಹಾಜರುಪಡಿಸದ ವಿದೇಶಿ ಮೂಲದ 6 ಯುವತಿಯರ ರಕ್ಷಣೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇದೇ ಮಾದರಿ ಡ್ರಗ್ಸ್ ಪಾರ್ಟಿ ಗಳನ್ನ ಈ ಹಿಂದೆ ಸ್ಯಾಂಡಲ್ವುಡ್ ಡ್ರಗ್ ಕೇಸ್ ನಲ್ಲಿ ಸಿಸಿಬಿ ಪೊಲೀಸರಿಗೆ ಲಾಕ್ ಆಗಿದ್ದ ಜೇಡ್ ವಿಲ್ಲಾ -735 ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಕೂಡ ತಗ್ಲಾಕೊಂಡಿರೋದು ಸ್ಯಾಂಡಲ್ವುಡ್ ಡ್ರಗ್ ಡೀಲ್ ನ ಮುಂದುವರೆದ ಭಾಗವಾಗಿದೆಯಾ ಅನ್ನೋದನ್ನ ಸಾಬೀತು ಪಡಿಸುವಂತಿದೆ.
ಸಿಸಿಬಿ ಖಚಿತ ಮಾಹಿತಿ ಮೇರೆಗೆ ಸೆಪ್ಟಂಬರ್ 6 ರ ತಡರಾತ್ರಿ ಈ ಹಿಂದೆ ಬಿಐಎಎಲ್ ಏರ್ಪೋರ್ಟ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದ ಸಾದಹಳ್ಳಿ ಜೇಡ್ ವಿಲ್ಲಾ 735 ವಿಲ್ಲಾ ಮೇಲೆ ದಾಳಿಮಾಡಿದ್ದರು. ದಾಳಿ ವೇಳೆ ಸಿಸಿಬಿ ಪೊಲೀಸರಿಗೆ ಯಾವುದೇ ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗ್ತಿದೆ.
ಬೆಂಗಳೂರು ಹೊರವಲಯದ ಜೇಡ್ ವಿಲ್ಲಾ -375 ಮೇಲೆ ಸಿಸಿಬಿ ದಾಳಿ ಪ್ರಕರಣ ಸಂಬಂಧಿಸಿದಂತೆ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧಿತನಾದ ಎ1 ಆರೋಪಿ ಉದ್ಯಮಿ ಅಂಕಿತ್ ಜೈನ್, ಬಳ್ಳಾರಿ ಮೂಲದ ಉದ್ಯಮಿ. ಅಂಕಿತ್ ಜೈನ್ ದುಬೈನಲ್ಲಿ 2 ಐಶಾರಾಮಿ ನಿವಾಸಗಳ ಒಡೆಯನಾಗಿದ್ದಾನೆ. ದೇಶ-ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುವ ಉದ್ಯಮಿ ಅಂಕಿತ್ ಜೈನ್, ಜೇಡ್ -375 ವಿಲ್ಲಾ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಪಾರ್ಟಿ ಪಾರ್ಟನರ್ ಆಗಿ ರೇವ್ ಪಾರ್ಟಿ ಗಳನ್ನ ಆಯೋಜಿಸ್ತಿದ್ದ ಅನ್ನೋ ಗಂಭೀರ ಆರೋಪ ಕೂಡ ಕೇಳಿಬರ್ತಿದೆ.
ಹಲವು ಬಾರಿ ಡ್ರಗ್ಸ್ ಪಾರ್ಟಿ, ರೇವ್ ಪಾರ್ಟಿ, ಪೇಜ್ 3 ಪಾರ್ಟಿಗಳನ್ನ ಆಯೋಜನೆ ಮಾಡಿರುವ ಸಾಧ್ಯತೆಗಳಿದ್ದು, ಸಿಸಿಬಿ ತನಿಖೆಯಿಂದಷ್ಟೇ ಮತ್ತಷ್ಡು ಮಾಹಿತಿ ಹೊರಬರಬೇಕಿದೆ. ಹಲವು ಬಾರಿ ಅಂಕಿತ್ ಜೈನ್ ಹೆಸರು ಕೇಳಿ ಬಂದಿದ್ದರೂ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಲು ಎದುರು ನೋಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಂಕಿತ್ ಜೈನ್ ಬರುವಿಕೆಗಾಗಿ ಕಾದು ಕುಳಿತಿದ್ದ ಸಿಸಿಬಿ ಪೊಲೀಸರು ಅಂಕಿತ್ ಜೈನ್ ಜೇಡ್ ವಿಲ್ಲಾ 735 ಗೆ ಅಂದು ರಾತ್ರಿ ರೇವ್ ಪಾರ್ಟಿಗೆ ಎಂಟ್ರಿಯಾಗ್ತಿದ್ದಂತೆ ಲಾಕ್ ಮಾಡಿದ್ದಾರೆ ಎನ್ನಲಾಗ್ತಿದೆ.
ಆದರೆ ದೇವನಹಳ್ಳಿ ಸಮೀಪದ ಸಾದಹಳ್ಳಿ ಜೇಡಿ ವಿಲ್ಲಾ -375 ರೇವ್ ಪಾರ್ಟಿಯ ಸುತ್ತ ಅನುಮಾನದ ಹುತ್ತಾ ಹುಟ್ಟಿಕೊಂಡಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಉದ್ಯಮಿಗಳ ಮೊಬೈಲ್ ಎಕ್ಸ್ ಚೇಂಜ್ ವೇಳೆ ಡೀಲ್ ಆರೋಪ ಕೇಳಿಬಂದಿದೆ. ರೇಡ್ ಮಾಡಿದ ಪೊಲೀಸ್ ಕಾನ್ಸ್ ಸ್ಟೇಬಲ್ ಗಳಿಗೆ ಲಕ್ಷ- ಲಕ್ಷ ಹಣದ ಆಮಿಷ ಆರೋಪವಿದ್ದು, ರೇಡ್ ವೇಳೆ ಸೀಜ್ ಮಾಡಲಾದ ಉದ್ಯಮಿಯೊಬ್ಬರ 2 ಮೊಬೈಲ್ ಎಕ್ಸ್ ಚೇಂಜ್ ಶಂಕೆ ವ್ಯಕ್ತವಾಗಿದೆ. ಡಾಟಾ ರಿಟ್ರೀವ್ ಮಾಡುವ ಉದ್ದೇಶದಿಂದ ಆ ಉದ್ಯಮಿ ಬಳಿ ಇದ್ದ ಮೊಬೈಲ್ ಸೀಜ್ ಮಾಡಲು ಮುಂದಾಗಿತ್ತು ಸಿಸಿಬಿ.
ಆಗ ಉದ್ಯಮಿ ಜತೆಗೆ ಪೊಲೀಸ್ ಕಾನ್ಸ್ ಸ್ಟೇಬಲ್ ಗಳ ಡೀಲ್ ಆರೋಪ ಕೇಳಿಬಂದಿದೆ. ಮೇಲಿಂದ ಮೇಲೆ ಹಲವು ರೇವ್ ಪಾರ್ಟಿ, ಪೇಜ್ 3 ಪಾರ್ಟಿ ಗಳ ಆಯೋಜಿಸಿದ್ದ ಶಂಕೆ ಹಿನ್ನೆಲೆ ಡ್ರಗ್ಸ್ ಸೇರಿದಂತೆ ಮಾದಕ ವಸ್ತು, ಮಾನವ ಕಳ್ಳಸಾಕಣೆ ಕುರಿತು ಮಾಹಿತಿ ಸಂಗ್ರಹಕ್ಕೆ ಸಿಸಿಬಿ ಯತ್ನಿಸಿತ್ತು. ಇನ್ನು, ಬಂಧಿತ ಉದ್ಯಮಿ ಜತೆಗೆ ಡೀಲ್ ಕುದುರಿಸಿದ್ದ ಪೊಲೀಸ್ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಟಿವಿನೈನ್ ನಲ್ಲಿ ಜೇಡಿ ವಿಲ್ಲಾ- 375 ರೇವ್ ಪಾರ್ಟಿ ವರದಿ ಇಂಪ್ಯಾಕ್ಟ್
ಬೆಂಗಳೂರು ಹೊರವಲಯದಲ್ಲಿ ಜೇಡ್ ವಿಲ್ಲಾ – 375 ರೇವ್ ಪಾರ್ಟಿ ಕೇಸ್ ವಿಸ್ತೃತ ವರದಿ ಹಿನ್ನೆಲೆ ರೇವ್ ಪಾರ್ಟಿಯಲ್ಲಿ ಬಳ್ಳಾರಿ ಮೂಲದ ಪ್ರಭಾವಿ ಉದ್ಯಮಿ ಭಾಗಿಯಾಗಿದ್ದ ಸುದ್ದಿಯನ್ನು ಟಿವಿ ನೈನ್ ಬಿತ್ತರಿಸಿತ್ತು. ಟಿವಿ ನೈನ್ ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳಿಗೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಬುಲಾವ್ ನೀಡಿದ್ದಾರೆ. 3 ಗಂಟೆಗಳಿಗೂ ಹೆಚ್ಚು ಕಾಲ ಮೀಟಿಂಗ್ ನಡೆಸಿದ್ದಾರೆ.
ಸಿಸಿಬಿಯ 25 ಇನ್ಸ್ ಪೆಕ್ಟರ್, 5 ಎಸಿಪಿ, ಇಬ್ಬರು ಡಿಸಿಪಿ ಸೇರಿದಂತೆ ಜಂಟಿ ಪೊಲೀಸ್ ಆಯುಕ್ತರಾದಿಯಾಗಿ ಮೀಟಿಂಗ್ ನಡೆಸಿದ್ದಾರೆ. ಪ್ರಕರಣ ಸಂಬಂಧ ಇನ್ ಫ್ಯಾಂಟ್ರಿ ರಸ್ತೆ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮೀಟಿಂಗ್ ನಡೆಸಿ ಸೆಪ್ಟೆಂಬರ್ 6 ರ ಮಿಡ್ ನೈಟ್ ರೇವ್ ಪಾರ್ಟಿ, ಸಿಸಿಬಿ ರೇಡ್ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪ್ರಕರಣದ ಗಂಭೀರತೆ ಅರಿತು ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತು ಉನ್ನತ ಪೊಲೀಸ್ ಮೂಲಗಳಿಂದ ಟಿವಿನೈನ್ ಗೆ ಮಾಹಿತಿ ಲಭ್ಯವಾಗಿದ್ದುಇಡೀ ಪ್ರಕರಣವನ್ನು ಖುದ್ದು ತನಿಖೆ ನಡೆಸುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಹೆಗಲಿಗೆ ಕೇಸ್ ವಹಿಸಲಾಗಿದೆ. ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸೇರಿದಂತೆ ಯಾರದ್ದೇ ಕೈವಾಡವಿದ್ದರೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮತ್ತೆ ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದಲ್ಲಿ ಚಿಗುರೊಡೆಯಲು ಆರಂಭಿಸಿರುವ ಡ್ರಗ್ಸ್ ಧಂದೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈ ಮಧ್ಯೆ, ರೇವ್ ಪಾರ್ಟಿ ಆಯೋಜಿಸಿದ್ದ ಜೇಡ್ ವಿಲ್ಲಾ 735 ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಎಸ್ಕೇಪ್ ಆಗಿದ್ದು, ಪತ್ತೆಗಾಗಿ ಸಿಸಿಬಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ವರದಿ: ಶಿವಪ್ರಸಾದ್ ಬಿ.