ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?

Chikkaballapur Police: ಮಾಹಿತಿ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್, ಡಿ.ವೈ.ಎಸ್ಪಿ ವಿ.ಕೆ. ವಾಸುದೇವ್ ಜಿಲ್ಲೆಯಾದ್ಯಂತ ನಾಕಾ ಬಂದಿ ಮಾಡಿ, ಪರಿಶೀಲನೆಗೆ ಸೂಚನೆ ನೀಡಿದರು. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ ನಿನ್ನೆ ತಡರಾತ್ರಿ ವಾಹನಗಳ ಪರಿಶೀಲನೆ ವೇಳೆ ಫಾರೂಕ್ ಕಾರು ಬರುವ ಮಾಹಿತಿ ಲಭ್ಯವಾಗಿದೆ.

ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?
ಆಂಧ್ರ ಬ್ಯಾಂಕಿನ 56 ಲಕ್ಷ ರೂ ಕದ್ದು ಎಸ್ಕೇಪ್ ಆಗ್ತಿದ್ದ ಖದೀಮ, ಬಾಗೇಪಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ! ಮುಂದೇನು?
TV9kannada Web Team

| Edited By: sadhu srinath

Sep 17, 2022 | 4:21 PM

ಚಿಕ್ಕಬಳ್ಳಾಪುರ: ಬ್ಯಾಂಕ್ ನ ಹಣವನ್ನು ಎ.ಟಿ.ಎಂ ಗಳಿಗೆ ತುಂಬಿಸಬೇಕಾದ ಸಿಬ್ಬಂದಿಯೊಬ್ಬ, ಸ್ವತಃ ತಾನೆ ಹಣವನ್ನು ಖಾಸಗಿ ವಾಹನಕ್ಕೆ ಶಿಫ್ಟ್​​ ಮಾಡಿ ಬರೋಬ್ಬರಿ 56 ಲಕ್ಷ ರೂಪಾಯಿ ನಗದು ಜೊತೆ ಪರಾರಿಯಾಗುತ್ತಿದ್ದ. ಆದರೆ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಹಣ ಹಾಗೂ ಕಾರನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ (Chikkaballapur Police).

ಆಂಧ್ರ ಪ್ರದೇಶದ ಕಡಪ ನಗರದ ಎಸ್.ಬಿ.ಐ ಬ್ಯಾಂಕ್ ಗೆ (Kadapa SBI ATM) ಸೇರಿದ ಹಣವನ್ನು ಸಿ.ಎಂ.ಎಸ್ ಕಂಪನಿಯು ಎ.ಟಿ.ಎಂ ಗಳಿಗೆ ತುಂಬಿಸುವ ಗುತ್ತಿಗೆ ಪಡೆದಿದೆ. ಹಣ ಸಾಗಿಸುವ ವಾಹನದ ಚಾಲಕನಾಗಿದ್ದ ಫಾರೂಕ್ ಎನ್ನುವಾತ ಸ್ವತಃ ತಾನೆ ಕಡಪದಲ್ಲಿ ಬೇರೊಂದು ಕಾರನ್ನು ತರಿಸಿ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಹಣ ಶಿಫ್ಟ್ ಮಾಡಿದ್ದಾನೆ. ನಂತರ ಕಂಪನಿಯ ವಾಹನವನ್ನು ಅಲ್ಲಿಯೇ ಬಿಟ್ಟು 56 ಲಕ್ಷ ರೂಪಾಯಿ ನಗದು ಜೊತೆ ಎಸ್ಕೇಪ್ ಆಗಿದ್ದಾನೆ.

ಇದನ್ನರಿತ ಕಡಪ ಪೊಲೀಸರು ತನಿಖೆ ನಡೆಸುತ್ತಿದ್ದ ಸಮಯದಲ್ಲಿಯೇ… ಇತ್ತ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ… ಫಾರೂಕ್ ಚಲಾಯಿಸುತ್ತಿದ್ದ ಎಪಿ39, ಎಚ್.ಜಿ 3109 ಟಾಟಾ ಇಟಿಯಸ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಪೊಲೀಸರನ್ನು ನೋಡಿದ ಆರೋಪಿ ಫಾರೂಕ್ ಸ್ಥಳದಲ್ಲೆ ಹಣ ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು (Bagepalli Police) ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 53 ಲಕ್ಷ 50 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.

ಪ್ರಕರಣ ಬಯಲಾಗಿದ್ದು ಹೇಗೆ!?

ನಿನ್ನೆ ದಿನ ಆಂಧ್ರದ ಕಡಪದಲ್ಲಿ ಬ್ಯಾಂಕ್ ಹಣವನ್ನು ಸಿ.ಎಂ.ಎಸ್ ಕಂಪನಿಯ ವಾಹನ ಚಾಲಕ ಫಾರೂಕ್ ವಾಹನವನ್ನು ಬಿಟ್ಟು ಬೇರೊಂದು ವಾಹನದಲ್ಲಿ ಹಣ ಸಮೇತ ಪರಾರಿಯಾಗಿದ್ದ, ಕಡಪ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಫಾರೂಕ್ ಹಾಗೂ ಆತ ಬಳಸಿದ್ದ ಕಾರಿನ ನಂಬರ್ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಆಂಧ್ರದಲ್ಲಿ ನಾಕಾ ಬಂದಿ ಮಾಡಿ, ಪರಿಶೀಲನೆ ನಡೆಸಿದರೂ ಫಾರೂಕ್ ಹಾಗೂ ಆತ ಬಳಸಿದ್ದ ಕಾರು ಪತ್ತೆಯಾಗಿರಲಿಲ್ಲ. ಇದ್ರಿಂದ ಸಿಸಿಟಿವಿ ದೃಶ್ಯ ಹಾಗೂ ಕಾರಿನ ನಂಬರ್ ಹಾಗೂ ದಾಖಲಾದ ಪ್ರಕರಣದ ದೂರನ್ನು ಸಾಮಾಜಿಕ ಜಾಲತಾಣ ಹಾಗೂ ಆಂಧ್ರ ಕರ್ನಾಟಕ ಗಡಿನಾಡು ಪೊಲೀಸರ ವಾಟ್ಸಪ್ ಗ್ರೂಪ್ ಗಳಿಗೆ ಹಂಚಿಕೊಂಡು ಪತ್ತೆಗೆ ಮಾಹಿತಿ ನೀಡಲು ವಿನಂತಿಸಿದ್ದರು.

ತಕ್ಷಣ ಮಾಹಿತಿ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್, ಡಿ.ವೈ.ಎಸ್ಪಿ ವಿ.ಕೆ. ವಾಸುದೇವ್ ಜಿಲ್ಲೆಯಾದ್ಯಂತ ನಾಕಾ ಬಂದಿ ಮಾಡಿ, ಪರಿಶೀಲನೆಗೆ ಸೂಚನೆ ನೀಡಿದರು. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ ನಿನ್ನೆ ತಡರಾತ್ರಿ ವಾಹನಗಳ ಪರಿಶೀಲನೆ ವೇಳೆ ಫಾರೂಕ್ ಕಾರು ಬರುವ ಮಾಹಿತಿ ಲಭ್ಯವಾಗಿದೆ. ಇದ್ರಿಂದ ಬಾಗೇಪಲ್ಲಿ ಪೊಲೀಸ್ ಇನ್ಸ್​ಪೆಕ್ಟರ್ ನಾಗರಾಜ್ ಮತ್ತವರ ಸಿಬ್ಬಂದಿ ಫಾರೂಕ್ ಕಾರನ್ನು ಬೆನ್ನಟ್ಟಿದ್ದಾರೆ. ಆಗ ಟೋಲ್ ನಿಂದ ಅನತಿ ದೂರದಲ್ಲಿ ಕಾರನ್ನು ಬಿಟ್ಟು ಫಾರೂಕ್ ಪರಾರಿಯಾಗಿದ್ದಾನೆ.

ಸದ್ಯ ಕಾರು ಹಾಗೂ ಹಣ ಬಾಗೇಪಲ್ಲಿ ಪೊಲೀಸರ ವಶದಲ್ಲಿದೆ. ಚಿಕ್ಕಬಳ್ಳಾಪುರ ಪೊಲೀಸರು ಇದೀಗ ಆಂಧ್ರ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳ ನಿರೀಕ್ಷೆಯಲ್ಲಿದ್ದು ನ್ಯಾಯಾಲಯದ ಮೂಲಕ ಹಣವನ್ನು ಆಂಧ್ರ ಪೊಲೀಸರಿಗೆ ಒಪ್ಪಿಸುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ ತಿಳಿಸಿದ್ದಾರೆ – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಪುರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada