CPIM ಶಕ್ತಿ ಪ್ರದರ್ಶನ: ನಾಳೆ ಬಾಗೇಪಲ್ಲಿಯಲ್ಲಿ ಹಾರಾಡಲಿದೆ ಕೆಂಬಾವುಟ, ಕೇರಳ ಸಿಎಂ ಪಿಣರಾಯ್ ವಿಜಯನ್ ಆಗಮನ

GV Sriramareddy: ಶ್ರೀರಾಮರೆಡ್ಡಿ ನಿಧನದ ನಂತರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಮುಳುಗಿದ ಹಡಗು ಎನ್ನುವ ಮನಃಸ್ಥಿತಿ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಅಲರ್ಟ್ ಆಗಿರುವ ಸಿಪಿಐಎಂ ಪಕ್ಷದ ರಾಜ್ಯ ಹಾಗೂ ದೇಶದ ನಾಯಕರು ನಾಳೆ ಬಾಗೇಪಲ್ಲಿ ಪಟ್ಟಣದಲ್ಲಿ ರಾಜ್ಯಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದಾರೆ.

CPIM ಶಕ್ತಿ ಪ್ರದರ್ಶನ: ನಾಳೆ ಬಾಗೇಪಲ್ಲಿಯಲ್ಲಿ ಹಾರಾಡಲಿದೆ ಕೆಂಬಾವುಟ,  ಕೇರಳ ಸಿಎಂ ಪಿಣರಾಯ್ ವಿಜಯನ್ ಆಗಮನ
ನಾಳೆ ಬಾಗೇಪಲ್ಲಿಯಲ್ಲಿ ಹಾರಾಡಲಿದೆ ಕೆಂಬಾವುಟ, ಕೇರಳ ಸಿಎಂ ಪಿಣರಾಯ್ ವಿಜಯನ್ ಆಗಮನ
TV9kannada Web Team

| Edited By: sadhu srinath

Sep 17, 2022 | 5:59 PM

ಚಿಕ್ಕಬಳ್ಳಾಪುರ: ಒಂದಲ್ಲ, ಎರಡಲ್ಲ, ಮೂರು ಬಾರಿ ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಿಪಿಐಎಂ CPI (M) ಪಕ್ಷದ ಅಭ್ಯರ್ಥಿಯನ್ನು ಶಾಸಕರನ್ನಾಗಿ ಮಾಡಿಕೊಳ್ಳುವುದರ ಮೂಲಕ ಇಡೀ ರಾಜ್ಯವೇ ಬಾಗೇಪಲ್ಲಿಯತ್ತ (Bagepalli) ತಿರುಗಿ ನೋಡುವಂತೆ ಮಾಡಿದ್ದ ಸಿಪಿಐಎಂ ಪಕ್ಷ ಕಳೆದ 15 ವರ್ಷಗಳಿಂದ ಸೊರಗಿದೆ. ಇನ್ನು ಸಿಪಿಐಎಂನಿಂದ 2 ಬಾರಿ ಶಾಸಕರಾಗಿದ್ದ ಜಿ.ವಿ. ಶ್ರೀರಾಮರೆಡ್ಡಿ (GV Sriramareddy) ನಿಧನರಾದ ಮೇಲೆ ಕ್ಷೇತ್ರದಲ್ಲಿ ಪಕ್ಷವೇ ಇಲ್ಲ ಎನ್ನುವಂತಾಗಿದೆ. ಇದರಿಂದ ಅಲರ್ಟ್ ಆಗಿರುವ ಸಿಪಿಐಎಂ ಪಕ್ಷ ನಾಳೆ ಬಾಗೇಪಲ್ಲಿ ಶಕ್ತಿಪ್ರದರ್ಶನ ಮಾಡಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ (Pinarayi Vijayan) ಸೇರಿದಂತೆ ಪಕ್ಷದ ಕೇಂದ್ರ ನಾಯಕರು ಆಗಮಿಸಲಿದ್ದಾರೆ.

ಅದೊಂದು ಕಾಲವಿತ್ತು… ‘ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವೆಂದರೆ ಸಿಪಿಐಎಂ, ಸಿಪಿಐಎಂ ಅಂದರೆ ಜಿ.ವಿ.ಶ್ರೀರಾಮರೆಡ್ಡಿ!’ ಎನ್ನುವಂತಿತ್ತು. ರಾಜ್ಯದಲ್ಲೇ ಸಿಪಿಐಎಂ ಪಕ್ಷದಿಂದ ಶಾಸಕರಾಗಿದ್ದು ಇದೇ ಬಾಗೇಪಲ್ಲಿಯಲ್ಲಿ. ಇನ್ನು ಪಕ್ಷದ ಆಶಯಗಳಿಗೆ ತಕ್ಕಂತೆ ಜಿ.ವಿ. ಶ್ರೀರಾಮರೆಡ್ಡಿ ವಿಧಾನಸಭೆಯ ಒಳಗೆ ಹಾಗೂ ಹೊರಗೆ ದೀನದಲಿತರು, ಬಡವರು, ಕಾರ್ಮಿಕರು, ಗುತ್ತಿಗೆ ನೌಕರರು ಸೇರಿದಂತೆ ಗುತ್ತಿಗೆ ನೌಕರರ ಪರ ಹೋರಾಟ, ಪ್ರತಿಭಟನೆ ಸೇರಿದಂತೆ ಬಯಲುಸೀಮೆಯ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಅವಿರತ ಶ್ರಮಿಸಿದ್ದರು.

ಶ್ರೀರಾಮರೆಡ್ಡಿ ಇಲ್ಲದ ಸಿಪಿಐಎಂ ಮುಳುಗಿದ ಹಡಗು ಎನ್ನುವ ಮನಃಸ್ಥಿತಿ-ಪರಿಸ್ಥಿತಿ:

ಪಕ್ಷದೊಳಗಿನ ಅಸಮಾಧಾನ, ಭಿನ್ನಮತ ಸ್ಪೋಟಿಸಿ ಪಕ್ಷದಿಂದ ಹೊರಬಂದಿದ್ದು ಇತಿಹಾಸ. ನಂತರ ಪ್ರಜಾ ಸಂಘರ್ಷ ಸಮಿತಿಯ ಸಂಘಟನೆಯಲ್ಲಿ ತೊಡಗಿರುವಾಗಲೇ ನಿಧನರಾಗಿದ್ದು ಇತಿಹಾಸ. ಶ್ರೀರಾಮರೆಡ್ಡಿ ನಿಧನದ ನಂತರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಮುಳುಗಿದ ಹಡಗು ಎನ್ನುವ ಮನಃಸ್ಥಿತಿ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಅಲರ್ಟ್ ಆಗಿರುವ ಸಿಪಿಐಎಂ ಪಕ್ಷದ ರಾಜ್ಯ ಹಾಗೂ ದೇಶದ ನಾಯಕರು ನಾಳೆ ಬಾಗೇಪಲ್ಲಿ ಪಟ್ಟಣದಲ್ಲಿ ರಾಜ್ಯಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದಾರೆ.

ನಾಳೆ ನಡೆಯಲಿರುವ ಸಿಪಿಐಎಂನ ರಾಜಕೀಯ ಸಮಾವೇಶಕ್ಕೆ ಕೇರಳ ಮುಖ್ಯಮಂತ್ರಿ, ಕಾಮ್ರೆಡ್ ಪಿಣರಾಯ್ ವಿಜಯನ್, ಕೇಂದ್ರದ ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿ, ಜಿವಿ.ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಬಸವರಾಜು ಸೇರಿದಂತೆ ಪಕ್ಷದ ಪ್ರಮುಖರು ಆಗಮಿಸಿ ಕೆಂಬಾವುಟ ಹಾರಿಸಲಿದ್ದಾರೆ. ಈಗಾಗಲೇ ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು, ಗಲ್ಲಿಗಳು ಕೆಂಬಾವುಟದಿಂದ ಸಿಂಗರಿಸಿಕೊಂಡಿವೆ.

ಜಿ.ವಿ.ಶ್ರೀರಾಮರೆಡ್ಡಿ ಪಕ್ಷ ತೊರೆದು ನಿಧನರಾದ ನಂತರ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಪ್ರಭಾವಿಗಳು ಇಲ್ಲ. ಆದರೆ ಗುಡಿಬಂಡೆ, ಬಾಗೇಪಲ್ಲಿ ಅಂದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಸಿಪಿಐಎಂ ಪಕ್ಷದ ಕಾರ್ಯಕರ್ತರಿದ್ದಾರೆ. ಇದರಿಂದ ಮತ್ತೇ ಸಿಪಿಐಎಂ ಪಕ್ಷದ ಬಾವುಟ ಹಾರಿಸಲು ಯೋಜನೆ ರೂಪಿಸಿರುವ ರಾಜ್ಯ ಹಾಗೂ ಕೇಂದ್ರ ನಾಯಕರು, ಕ್ಷೇತ್ರದಲ್ಲಿರುವ ಕಾರ್ಮಿಕರು, ದುಡಿಯುವ ವರ್ಗ ಸೇರಿದಂತೆ ದೀನದಲಿತರನ್ನು ಒಂದುಗೂಡಿಸಿ ಪಕ್ಷದತ್ತ ಸೆಳೆಯಲು ಮುಂದಾಗಿದ್ದಾರೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada