ಹಾಸನ, ಜೂ.05: ಹಾಸನ(Hassan)ದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯ ಹೇಮಾವತಿನಗರದಲ್ಲಿ ಇಂದು(ಜೂ.05) ಬೆಳಿಗ್ಗೆ ರೌಡಿ ಶೀಟರ್ ಚೈಲ್ಡ್ ರವಿ(45) ಎಂಬಾತನ ಭೀಕರ ಕೊಲೆ(Murder) ನಡೆದಿದೆ. ಬೆಳಿಗ್ಗೆ 7 ಗಂಟೆ 55 ನಿಮಿಷಕ್ಕೆ ಬಂದ ಬಿಳಿ ಬಣ್ಣದ ಸ್ಯಾಂಟ್ರೋ ಕಾರು, ಎದುರಿನಿಂದ ಬಲ ಭಾಗದಲ್ಲಿ ಬರುತ್ತಿದ್ದ ರವಿಯ ಆಕ್ಟೀವ್ ಹೊಂಡಾಗೆ ಗುದ್ದಿದೆ. ಬಳಿಕ ಆತ ನೆಲಕ್ಕೆ ಬಿದ್ದ ಬಿಳುತ್ತಿದ್ದಂತೆ ಹಂತಕರು ಅಟ್ಯಾಕ್ ಮಾಡಿ ಮಾರಾಕಾಸ್ತ್ರಗಳಿಂದ ಮನಸೋ ಇಚ್ಚೆ ಹೊಡೆದು ಹತ್ಯೆ ಮಾಡಿದ್ದಾರೆ.
ಇನ್ನು ಮೃತ ಚೈಲ್ಡ್ ರವಿ, ಮೂರು ಕೊಲೆ, ಅತ್ಯಾಚಾರ ಹಾಗೂ ದರೋಡೆ ಪ್ರಕರಣದ ಆರೋಪಿಯಾಗಿದ್ದ. ಇಂದು ಮುಂಜಾನೆ ಮನೆಗೆ ನೀರು ತರಲು ಹೋಗಿದ್ದಾಗ ದಾರಿ ಮದ್ಯೆ ಅಡ್ಡಗಟ್ಟಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಪೆನ್ಷನ್ ಮೊಹಲ್ಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರವಿ ಮೇಲೆ ಅಟ್ಯಾಕ್ ಆಗುವಾಗ ಅಲ್ಲಿಯೇ ಇದ್ದ ಶಾಲಾ ಮಕ್ಕಳು ಹಾಗೂ ಜನರು, ಜೀವ ಭಯದಿಂದ ಓಡಿ ಹೋಗಿದ್ದಾರೆ. ಇನ್ನು ಈ ಭಯಾನಕ ಹತ್ಯೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆಗಿಳಿದಿದ್ದಾರೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಕಂಬದದೇವರಹಟ್ಟಿ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಲಾಗಿದೆ. ರಂಗಪ್ಪ(48) ಮೃತ ರ್ದುದೈವಿ. ಇನ್ನು ಹತ್ಯೆ ಬಳಿಕ ಕೊಲೆ ಆರೋಪಿ ಪರಾರಿಯಾಗಿದ್ದು, ಈವರೆಗೂ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Wed, 5 June 24