Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಂದ ಯುವಕ; ಕಾರಣ?

ಭದ್ರಾವತಿಯಲ್ಲಿ ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಯುವಕನೋರ್ವ ಮರ್ಡರ್ ಮಾಡಿದ್ದಾನೆ. ಅಜ್ಜಿಯು ಜೀವ ಉಳಿಸಿಕೊಳ್ಳಲು ಪರದಾಡಿದ್ದಾಳೆ. ಆದ್ರೆ, ರಾಕ್ಷಸನಂತೆ ಯುವಕನು ಮಚ್ಚಿನಿಂದ ಅಜ್ಜಿ ಹತ್ಯೆ ಮಾಡಿದ್ದಾನೆ. ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ನಡೆದ ಈ ಕೊಲೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದರು. ಅಜ್ಜಿ ಬರ್ಬರ ಹತ್ಯೆ ಕುರಿತು ಒಂದು ವರದಿ ಇಲ್ಲಿದೆ.

ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಕೊಚ್ಚಿ ಕೊಂದ ಯುವಕ; ಕಾರಣ?
ಆರೋಪಿ, ಮೃತ ಅಜ್ಜಿ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 05, 2024 | 5:26 PM

ಶಿವಮೊಗ್ಗ, ಜೂ.05: ಇದೇ ಜೂ. 3ರ ಬೆಳ್ಳಂ ಬೆಳಗ್ಗೆ ಭದ್ರಾವತಿ(Bhadravathi)ಯ ಅರಳ್ಳಿಹಳ್ಳಿ ಗ್ರಾಮದಲ್ಲಿ ವೃದ್ದೆಯೊಬ್ಬರ ಬರ್ಬರ ಹತ್ಯೆ ನಡೆದಿತ್ತು. ಆ ದಿನ ಬೆಳಗ್ಗೆ ಗ್ರಾಮದ ವೃದ್ದೆ ಫಜಲುನ್ನಿಸಾ(74), ಮನೆ ಬಳಿ ಇರುವ ಕೊಟ್ಟಿಗೆಗೆ ಹೋಗಿ ಹಸುವಿಗೆ ಆಹಾರ ನೀಡಲು ತೆರೆಳಿದ್ದಳು. ಹಸುವಿಗೆ ಆಹಾರ ಕೊಟ್ಟು ವಾಪಸ್ ಬರುವಾಗ ಅದೇ ಬೀದಿಯ ಮಂಜುನಾಥ್ (45) ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗುತ್ತಿದ್ದನು. ಇದನ್ನು ನೋಡಿದ ಅಜ್ಜಿಯು ಯಾಕೇ ಕೈಯಲ್ಲಿ ಮಚ್ಚು ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ವಿಚಲಿತನಾದ ಮಂಜುನಾಥ್ ಅಜ್ಜಿಯ ಮೇಲೆ ಕೋಪಗೊಂಡು, ಕೈಯಲ್ಲಿರುವ ಮಚ್ಚು ಹಿಡಿದುಕೊಂಡು ಅಜ್ಜಿಯ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾನೆ.

ಇತನ ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳಲು ಅಜ್ಜಿಯು ಹಸುವಿನ ಕೊಟ್ಟಿಗೆಯಿಂದ ಸುಮಾರು ಎರಡ್ಮೂರು ಮನೆ ದೂರ ಗೀತಮ್ಮ ಎನ್ನುವವರ ಮನೆಯ ಒಳಗೆ ಹೋಗುತ್ತಾರೆ. ಈ ನಡುವೆ ಗೀತಮ್ಮಳ ಮೇಲೆ ಹಲ್ಲೆಗೆ ಮಂಜುನಾಥ್ ಮಂದಾಗುತ್ತಾನೆ. ಆದರೆ,  ಗೀತಮ್ಮ ಆತನಿಗಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾಳೆ. ಸಿಕ್ಕ ವೃದ್ಧೆಯನ್ನು ಗೀತಮ್ಮಳ ಮನೆಯ ಒಳಗೆ ನುಗ್ಗಿ ಮಂಜುನಾಥ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲಿಂದ ಮಚ್ಚು ಸಮೇತ ಎಸ್ಕೇಪ್ ಆಗುತ್ತಾನೆ.

ಇದನ್ನೂ ಓದಿ:ಹಾಸನದಲ್ಲಿ ನಟೋರಿಯಸ್ ರೌಡಿ ಶೀಟರ್ ಭೀಕರ ಹತ್ಯೆ; ಭಯಾನಕ ಕೊಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಇನ್ನು ಆರೋಪಿ ಪರಾರಿಯಾಗುತ್ತ ಕೊಲೆ ಮಾಡಿದ ಮಚ್ಚನ್ನು ಪಕ್ಕದ ಬೀದಿಯಲ್ಲಿ ಬಚ್ಚಿಡುತ್ತಾನೆ. ಇದನ್ನು ನೋಡಿದ ಗ್ರಾಮಸ್ಥರು ಮಂಜುನಾಥ್​ಗೆ ಧರ್ಮೇದೇಟು ಕೊಟ್ಟು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಮಂಜುನಾಥ್ ಏಕಾಏಕಿ ವೃದ್ಧೆಯನ್ನು ಮರ್ಡರ್ ಮಾಡಿದ್ದು ಯಾಕೆ? ಎನ್ನುವುದು ಆರಂಭದಲ್ಲಿ ಯಾರಿಗೂ ಗೊತ್ತಾಗಿಲ್ಲ.

ಅಜ್ಜಿಯನ್ನ ಕೊಂದಿದ್ದೇಕೆ ಗೊತ್ತಾ?

ಈ ಕುರಿತು ಪೊಲೀಸರು ತನಿಖೆ ಶುರು ಮಾಡಿದಾಗ, ‘ಮಂಜುನಾಥ್ ಕಳೆದ ಎರಡು ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತನಿಗೆ ಮದುವೆ ಆಗಿಲ್ಲ. ತಂದೆ ತೀರಿ ಹೋಗಿದರೆ, ತಾಯಿ ಒಬ್ಬಳೇ ಇದ್ದಾಳೆ. ಈ ನಡುವೆ ಗ್ರಾಮದಲ್ಲಿ ಮಂಜುನಾಥ್ ಹುಚ್ಚಾಟ ದಿನೇ ದಿನೇ ಜಾಸ್ತಿ ಆಗಿತ್ತು. ಯುವತಿಯರಿಗೆ ಮತ್ತು ಮಹಿಳೆಯರ ಜೊತೆ ಈತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಅರೆ ನಗ್ನನಾಗಿ ಓಡಾಡಿಕೊಂಡು ಯುವತಿಯರಿಗೆ ಮತ್ತು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದನು. ಇನ್ನು ಗ್ರಾಮದ ಓರ್ವ ಕಾಲೇಜ್ ಯುವತಿಯ ಜೊತೆ ಕೆಲ ದಿನಗಳ ಹಿಂದೆ ಅಸಭ್ಯವಾಗಿ ವರ್ತನೆ ಮಾಡಿದ್ದನು. ಗ್ರಾಮಸ್ಥರು ಮಾನಸಿಕ ಅಸ್ವಸ್ಥನ ತಾಯಿಗೆ ಕರೆದು ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:ಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ

ಪ್ರಶ್ನೆ ಮಾಡಿದ್ದೇ ತಪ್ಪಾಗಿತ್ತು

ಬಳಿಕ ಮಂಜುನಾಥ್ ನಿರಂತರವಾಗಿ ಮದ್ಯ ಸೇವಿಸಿ ತನ್ನ ಮಾನಸಿಕ ಸಿಮೀತ ಕಳೆದುಕೊಂಡಿದ್ದ. ಕುಡಿದ ಅಮಲಿನಲ್ಲಿ ಆತ ಆಡಿದ್ದೇ ಆಟ ಎನ್ನುವಂತೆ ಗ್ರಾಮದಲ್ಲಿ ಹುಚ್ಚಾಟ ಮಾಡುತ್ತಿದ್ದನು. ಜೂ. 3 ರಂದು ಮಂಜುನಾಥ್ ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗಿದ್ದನ್ನು ವೃದ್ದೆಯು ಪ್ರಶ್ನೆ ಮಾಡಿದ್ದೇ ತಪ್ಪಾಗಿತ್ತು. ವೃದ್ಧೆಯನ್ನು ಅಟ್ಟಾಡಿಸಿಕೊಂಡು ಮಂಜುನಾಥ್ ಹತ್ಯೆ ಮಾಡಿದ್ದನು. ಸದ್ಯ ಈತನ ಮಾನಸಿಕ ಅಸ್ವಸ್ಥನೋ ಅಥವಾ ನಾಟಕ ಮಾಡುತ್ತಾನೆಯೋ ಎನ್ನುವ ಸಂದೇಹವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ವೃದ್ದೆಯ ಕೊಲೆ ಮಾಡಿರುವ ಮಂಜುನಾಥ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಹಾಗೂ ಮೃತಳ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ವಿನಾಕಾರಣ ವೃದ್ದೆಯನ್ನು ಅಟ್ಟಾಡಿಸಿಕೊಂಡು ವ್ಯಕ್ತಿಯು ಹತ್ಯೆ ಮಾಡಿದ್ದಾನೆ. ಈ ಕೊಲೆಯ ಬಳಿಕ ಗ್ರಾಮಸ್ಥರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹಂತಕನ ಬಂಧನವಾಗಿದೆ. ಆದ್ರೆ ,ಆತ ಮಾನಸಿಕ ಅಸ್ವಸ್ಥನೆಂದು ಮತ್ತೆ ವಾಪಸ್ ಬಂದರೆ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ವೃದ್ದೆ ಕೊಲೆ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆಯಾಗುವ ಮೂಲಕ ಮೃತನ ಕುಟುಂಬಕ್ಕೆ ನ್ಯಾಯಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 5 June 24