Uttar Pradesh: ಈಜುಕೊಳದ ಬಳಿ ಮಕ್ಕಳ ಎದುರೇ ಗುಂಡಿಕ್ಕಿ ತಂದೆಯ ಹತ್ಯೆ
ಸ್ವಿಮಿಂಗ್ ಪೂಲ್ ಬಳಿ ಮಕ್ಕಳ ಎದುರೇ ದುಷ್ಕರ್ಮಿಯೊಬ್ಬ ತಂದೆಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಸಾರ್ವಜನಿಕ ಈಜುಕೊಳದ ಬಳಿ ವ್ಯಕ್ತಿಯೊಬ್ಬನನ್ನು ಮಕ್ಕಳ ಎದುರೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ವರದಿಗಳ ಪ್ರಕಾರ ಮೀರತ್ನ ಲೋಹಿಯಾನಗರ ಪ್ರದೇಶದ ಸಾರ್ವಜನಿಕ ಈಜುಕೊಳದ ಬಳಿ ಘಟನೆ ನಡೆದಿದೆ.
ಅರ್ಷದ್ ಹಾಗೂ ಈಗ ತಲೆಮರೆಸಿಕೊಂಡಿರುವ ಆರೋಪಿಗಳಾದ ಬಿಲಾಲ್ ಹಾಗೂ ಡಾನಿಶ್ ನಡುವೆ ಜಗಳ ನಡೆದು ಎರಡು ದಿನಗಳ ಬಳಿಕ ಈ ಆಘಾತಕಾರಿ ಘಟನೆ ನಡೆದಿದೆ. ಭದನಾ ಸ್ವಿಮ್ಮಿಂಗ್ಪೂಲ್ನಲ್ಲಿ ಎಲ್ಲರೆದುರೇ ಕೊಲೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಅರ್ಷದ್ ಮಕ್ಕಳೊಂದಿಗೆ ಈಜಾಡುತ್ತಿದ್ದ ವೇಳೆ ಈತನನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ.
ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ವಿಡಿಯೋ:
UP – मेरठ में Live मर्डर का Video –
स्विमिंग पूल में नहाने गए 25 वर्षीय अरशद की गोली मारकर हत्या। आरोपी बिलाल और दानिश फरार हैं। दोनों पक्षों में 2 दिन पहले कोई विवाद हुआ, उसी के चलते ये हत्या हुई।
🚨 Sensitive Visual 🚨 pic.twitter.com/YI5y6pTfIS
— Sachin Gupta (@SachinGuptaUP) June 5, 2024
ಮೃತ ವ್ಯಕ್ತಿ ಹಾಗೂ ಆರೋಪಿಯ ನಡುವೆ ಇತ್ತೀಚೆಗೆ ನಡೆದಿದ್ದ ಜಗಳವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ತಲೆಗೆ ಗುರಿಯಿಟ್ಟ ಕಾರಣ ಅರ್ಷದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ