Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ

ಹುಬ್ಬಳ್ಳಿಯ ಮಾರುತಿ ನಗರದ ಸೆಕೆಂಡ್ ಕ್ರಾಸ್ ಬಳಿ ಖಾಸಗಿ ಆಸ್ಪತ್ರೆ ಹತ್ತಿರ, ಮೇ 25 ರಂದು ಸಾಯಂಕಾಲ ಕ್ಷುಲ್ಲಕ ಕಾರಣಕ್ಕೆ ಎಲಿಜಿಬತ್ ಎಂಬ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲೇ ಅರೆ ಬೆತ್ತಲೆಗೊಳಿಸಿ ಎಂಟು ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ
ಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 29, 2024 | 6:16 PM

ಹುಬ್ಬಳ್ಳಿ, ಮೇ 29: ನೇಹಾ ಮತ್ತು ಅಂಜಲಿ ಕೊಲೆ (murders) ನಡೆದ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ. ಎರಡು ಕೊಲೆಗಳ ನಡೆದ ಬಳಿಕ ಹುಬ್ಬಳ್ಳಿಯಲ್ಲಿ (Hubballi) ಕಾನೂನು ಸುವ್ಯವಸ್ಥೆ ಸರಿ ಇದೆಯಾ ಅನ್ನೋ ಪ್ರಶ್ನೆ ಮೂಡಿತ್ತು. ಅಂಜಲಿ ಕೊಲೆಯಾದ ಬಳಿಕ ನಾಲ್ಕು ಪೊಲೀಸರ ಅಮಾನತ್ತು ಆಗಿದ್ದಾರೆ. ಇಷ್ಟಾದರೂ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸರಿದಾರಿಗೆ ಬರೋ ತರಹ ಕಾಣುತ್ತಿಲ್ಲ. ಏಕೆಂದರೆ ಹಾಡು ಹಗಲೆ ಓರ್ವ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ.

ಹುಬ್ಬಳ್ಳಿಯ ಮಾರುತಿ ನಗರದ ಸೆಕೆಂಡ್ ಕ್ರಾಸ್ ಬಳಿ ಖಾಸಗಿ ಆಸ್ಪತ್ರೆ ಹತ್ತಿರ, ಮೇ 25 ರಂದು ಸಾಯಂಕಾಲ ಕ್ಷುಲ್ಲಕ ಕಾರಣಕ್ಕೆ ಎಲಿಜಿಬತ್ ಎಂಬ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲೇ ಅರೆ ಬೆತ್ತಲೆಗೊಳಿಸಿ ಎಂಟು ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ ಕಾಳೆ, ಸಾಗರ, ನಾಗರತ್ನ, ಪೂಜಾ, ಸೀನು, ರೇಣುಕಾ, ಶಾಂತಮ್ಮಾ ಹಾಗೂ ರಾಜೇಶ್ವರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೇಹಾ ಹಿರೇಮಠ ತಂದೆಯನ್ನು ಚೇಸ್ ಮಾಡಿದ ಆಟೋ ಚಾಲಕ, ಮುಂದೇನಾಯ್ತು ನೋಡಿ

ಇನ್ನು ಎಲಿಜಿಬತ್ ಮಹಿಳೆ ಹಲ್ಲೆ ಮಾಡಿದವರಲ್ಲಿ ಮಾರುತಿ ನಗರದ‌ ನಿವಾಸಿ ರಾಜೇಶ್ವರಿ ಎಂಬವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನ ಇನ್ನೂ ಪತ್ತೆ ಮಾಡಿಲ್ಲ. ಯಾಕೆ ಎಂಬುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅವಮಾನ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖಿಸಿಲಾಗಿದೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಐಪಿಸಿ 323, 324, 307, 341, 504, ಹಾಗೂ 506 ಅಡಿಯಲ್ಲಿ ಎಂಟು ಜನರ ವಿರುದ್ದ ದೂರು ದಾಖಲಾಗಿದೆ.

ಹು-ಧಾ ಪಾಲಿಕೆ ಸದಸ್ಯನ ಕೊಲೆ ಯತ್ನ ಕೇಸ್: ಪಕೀರ ವೇಷ ಧರಿಸಿ 8 ವರ್ಷದಿಂದ ನಾಪತ್ತೆಯಾದವ ಅರೆಸ್ಟ್

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ಆರೀಫ್​ ಭದ್ರಾಪುರ ಕೊಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 8 ವರ್ಷಗಳ ಬಳಿಕ ಆರೋಪಿಯನ್ನು ಹುಬ್ಬಳ್ಳಿಯ ಶಹರ ಪೊಲೀಸರಿಂದ ಬಂಧಿಸಲಾಗಿದೆ. ಸೈಫ್ ಅಲಿ ಬಾಂಬೆ ಬಂಧಿತ ವ್ಯಕ್ತಿ. ಆರೋಪಿ ಇಷ್ಟು ವರ್ಷ ಫಕೀರನ ವೇಷ ಧರಿಸಿ ದೇಶಾದ್ಯಂತ ತಿರುಗುತ್ತ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಹೆಗ್ಗಣಗಳ ಕಾಟ ತಪ್ಪಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ವ್ಯಕ್ತಿ

2016ರಲ್ಲಿ ಆರೀಫ್ ಕೊಲೆ ಕೇಸ್​ನಲ್ಲಿ ಸೈಫ್ ಅಲಿ ಅರೆಸ್ಟ್ ಆಗಿದ್ದ. ಬಳಿಕ ಅದೇ ವರ್ಷದಲ್ಲಿ ಕೋರ್ಟ್​ನಿಂದ ಜಾಮೀನು ಪಡೆದು ನಾಪತ್ತೆಯಾಗಿದ್ದ. ಜಾಮೀನು ಪಡೆದು ಬಳಿಕ ಫಕೀರನ ವೇಷ ಧರಿಸಿ ತಲೆಮರೆಸಿಕೊಂಡಿದ್ದ. ಸದ್ಯ ಆತನನ್ನು ಪತ್ತೆ ಹಚ್ಚಿರುವ  ಹುಬ್ಬಳ್ಳಿಯ ಶಹರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.