Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಗ್ಗಣಗಳ ಕಾಟ ತಪ್ಪಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ವ್ಯಕ್ತಿ

ಇತ್ತೀಚಿಗೆ ಚಿತ್ರ-ವಿಚಿತ್ರ ಪ್ರಕರಣಗಳು ಪೊಲೀಸ್​ ಠಾಣೆಯಲ್ಲಿ ದಾಖಲಾಗುತ್ತಿವೆ. ಪಕ್ಕದ ಮನೆಯಲ್ಲಿನ ಹೆಗ್ಗಣಗಳ ಕಾಟದಿಂದ ಮುಕ್ತಿ ನೀಡಿ ಎಂದು ಹುಬ್ಬಳ್ಳಿಯ ಆನಂದನಗರ ನಿವಾಸಿಯೊಬ್ಬರು ಹಳೆ ಹುಬ್ಬಳ್ಳಿಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೆಗ್ಗಣಗಳ ಕಾಟ ತಪ್ಪಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ವ್ಯಕ್ತಿ
ದೂರುದಾರ ಅನಿಲ್​ ಮುಂಡರಗಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:May 29, 2024 | 9:59 AM

ಹುಬ್ಬಳ್ಳಿ, ಮೇ 29: ಇತ್ತೀಚಿಗೆ ಜನರು ವಿಚಿತ್ರ ಕಾರಣಗಳಿಗಾಗಿ ಪೊಲೀಸ್​ ಠಾಣೆ (Police Station) ಮೆಟ್ಟಿಲೇರುತ್ತಿದ್ದಾರೆ. ಹೆಗ್ಗಣಗಳಿಂದ (Bandicoot) ಮುಕ್ತಿ ನೀಡುವಂತೆ ಹಳೆ ಹುಬ್ಬಳ್ಳಿಯ (Old Hubballi) ಆನಂದ ನಗರ ನಿವಾಸಿ ಅನಿಲ್ ಮುಂಡರಗಿ ಎಂಬುವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಅನಿಲ್ ಮುಂಡರಗಿ ಅವರ ಪಕ್ಕದ ಮನೆಯಲ್ಲಿನ ಹಗ್ಗೆಣಗಳಿಂದ ನಮಗೆ ನೆಮ್ಮದಿ ಹಾಳಾಗಿದೆ. ಹೆಗ್ಗಣಗಳು ನಮ್ಮ ಮನೆಯಲ್ಲಿನ ಗ್ಯಾಸ್ ಪೈಪ್ ಲೈನ್, ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಎಲ್ಲೆಂದರಲ್ಲಿ ನೆಲ ಅಗೆದು ಮಣ್ಣು ಹೊರ ಹಾಕುತ್ತಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ರಂಧ್ರಗಳು ಬಿದ್ದಿವೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರತಿದಿನ 15 ರಿಂದ 20 ಹೆಗ್ಗಣಗಳು ಕಾಟ ಕೊಡುತ್ತಿವೆ. ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಸಿಲಿಂಡರ್ ಸೋರಿಕೆಯಾಗಿ ಅನಾಹುತವಾದರೆ ಯಾರು ಹೊಣೆ ಎಂದು ಅನೀಲ್​ ಅವರು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ಕೊಠಡಿಗಳು

ದೂರು ಆಧರಿಸಿ ಪೊಲೀಸರು ಅನಿಲ್​ ಅವರ ಪಕ್ಕದ ಮನೆಯ ಮಾಲೀಕ ಸಿದ್ದು ಅಂಗಡಿ ಎಂಬುವರನ್ನು ಕರೆಯಿಸಿ, ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಣಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಇನ್ನು ಅನೀಲ್​ ಅವರ ಪಕ್ಕದ ಮನೆಯಲ್ಲಿ ಯಾರೂ ವಾಸಿಸುವುದಿಲ್ಲ.

ಹೀಗಾಗಿ ಅಲ್ಲಿ ಹೆಗ್ಗಣಗಳು ಬೀಡು ಬಿಟ್ಟಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಅನಿಲ ಮುಂಡರಗಿ ನೆರೆಹೊರೆಯವರು ಹೇಳಿದ್ದಾರೆ. ಯಾವುದೇ ಕ್ರಮ ಆಗದೇ ಇದ್ದಲ್ಲಿ ಮತ್ತೆ ಪೊಲೀಸರ ಮೊರೆ ಹೋಗೋದಾಗಿ ಅನಿಲ್ ಮುಂಡರಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Wed, 29 May 24

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ