ನೇಹಾ ಹಿರೇಮಠ ತಂದೆಯನ್ನು ಚೇಸ್ ಮಾಡಿದ ಆಟೋ ಚಾಲಕ, ಮುಂದೇನಾಯ್ತು ನೋಡಿ
ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಅವರ ತಂದೆ, ಕಾಂಗ್ರೆಸ್ ಕಾರ್ಪೋರೆಟರ್ ನಿರಂಜನ ಹಿರೇಮಠ ಅವರನ್ನು ಆಟೋವೊಂದು ಚೇಸ್ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಆಟೋ ಚಾಲಕ ಸುಮಾರು ಒಂದು ಕಿಲೋ ಮೀಟರ್ ವರೆಗೂ ನಿರಂಜನ ಹಿರೇಮಠ ಅವರ ಕಾರು ಫಾಲೋ ಮಾಡಿಕೊಂಡು ಹೋಗಿದ್ದಾನೆ.
ಹುಬ್ಬಳ್ಳಿ, (ಮೇ 28): ಕೊಲೆಯಾದ ನೇಹಾ ಅವರ ತಂದೆ, ಕಾಂಗ್ರೆಸ್ ಕಾರ್ಪೋರೆಟರ್ ನಿರಂಜನ ಹಿರೇಮಠ(neha hiremath Father Niranjan) ಅವರನ್ನು ಆಟೋವೊಂದು ಚೇಸ್ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. KA-25,EE-6476 ನಂಬರಿನ ಆಟೋ ಇಂದು (ಮೇ 28) ಹುಬ್ಬಳ್ಳಿಯ ಟೆಂಡ್ಯೂರ್ ರಸ್ತೆಯಲ್ಲಿ ನಿರಂಜನ ಹಿರೇಮಠ ಅವರ ಕಾರನ್ನು ಫಾಲೋ ಮಾಡಿಕೊಂಡು ಹೋಗಿದೆ. ಸುಮಾರು ಒಂದು ಕಿಲೋ ಮೀಟರ್ ವರೆಗೂ ಫಾಲೋ ಮಾಡಿಕೊಂಡು ಹೋಗಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು. ಬಳಿಕ ನಿರಂಜನ್ ಅವರು ಕಾರು ನಿಲ್ಲಿಸಿ ಆಟೋವನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಆಟೋ ಚಾಲಕ ಪಾನಮತ್ತನಾಗಿರುವುದು ಕಂಡುಬಂದಿದೆ. ಬಳಿಕ ಸ್ಥಳೀಯರು ಆಟೋ ಚಾಲಕನಿಗೆ ಗೂಸಾ ನೀಡಿ ವಿದ್ಯಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 28, 2024 03:46 PM
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
