ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ಯುವತಿಗಾಗಿ ಪಾಗಲ್ ಪ್ರೇಮಿಯಾದ ಅಭಿಷೇಕ್ ಗೌಡ ರಾಜಾಜಿನಗರ ಏರಿಯಾದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್.
ಕಳೆದ ಕೆಲವು ವರ್ಷಗಳಿಂದ ನರ್ಮದಾಳನ್ನ ಡೀಪಾಗಿ ಲವ್ ಮಾಡ್ತಿದ್ದನಂತೆ. ಆದರೆ ಇತ್ತೀಚೆಗೆ, ಯುವತಿ ತನ್ನ ಸಂಬಂಧಿಕನ ಜೊತೆ ಸಲಿಗೆಯಿಂದ ವರ್ತಿಸುತ್ತಿದ್ದಳಂತೆ. ಇದರಿಂದ ಸಿಟ್ಟಾದ ಅಭಿ ಈ ಬಗ್ಗೆ ಪ್ರಶ್ನಿಸಲು ನಿನ್ನೆ ನರ್ಮದಾಳನ್ನು ತನ್ನ ರೂಂಗೆ ಕರೆದೊಯ್ದಿದ್ದ. ಈ ವಿಚಾರವಾಗಿ ಅವಳ ಜೊತೆ ಜಗಳ ಆರಂಭಿಸಿದ್ದ ಆರೋಪಿ, ನಂತರ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಚಾಕುವಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತು ಹಾಗೂ ಹೊಟ್ಟೆಗೆ ಇರಿದು ಕೊಲೆಗೈದಿದ್ದಾನೆ. ಕೃತ್ಯವೆಸಗಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಆರೋಪಿಯನ್ನ ಹಿಡಿಯಲು ಬಲೆ ಬೀಸಿದರು. ಕೊನೆಗೆ ರಾಜಾಜಿನಗರದ ಪೊಲೀಸರ ನೆರವಿನಿಂದ ಅಭಿಷೇಕ್ ಗೌಡನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published On - 6:01 pm, Tue, 14 July 20