ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಮತ್ತೋರ್ವ ಆರೋಪಿ ಪ್ರಶಾಂತ್ ರಂಕಾನನ್ನು CCB ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಪ್ರಶಾಂತ್ ರಂಕಾ ಇಂದಿರಾನಗರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ FIRನಲ್ಲಿ ಪ್ರಶಾಂತ್ ರಂಕಾನ A4 ಆರೋಪಿ ಎಂದು ಲಿಸ್ಟ್ ಮಾಡಲಾಗಿದೆ. ಜೊತೆಗೆ, ಈತ ಮತ್ತೊಬ್ಬ ಆರೋಪಿ ರವಿಶಂಕರ್‌ಗೆ ಆಪ್ತನಾಗಿದ್ದನಂತೆ.
ಪ್ರಶಾಂತ್ ರಂಕಾ ಡ್ರಗ್ಸ್ ಪೂರೈಕೆ ಮತ್ತು ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತಿದ್ದು ಈತ ರಾಗಿಣಿ ಹಾಗೂ ರವಿಶಂಕರ್ ಭಾಗಿಯಾಗುತ್ತಿದ್ದ್ದ ಪಾರ್ಟಿಗಳಲ್ಲೂ ಭಾಗಿಯಾಗಿದ್ದನಂತೆ. ಹೀಗಾಗಿ, ಪ್ರಶಾಂತ್ ರಂಕಾನ ವಶಕ್ಕೆ ಪಡೆದಿರುವ CCB ತಂಡವು ಆತನ ಬಳಿಯಿದ್ದ 3 ಮೊಬೈಲ್‌ಗಳನ್ನು ಸಹ ವಶಕ್ಕೆ ಪಡೆದಿದೆ.