ಬೆಂಗಳೂರು: ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೇಪ್ ಕೇಸ್ ದಾಖಲಿಸುವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಸಂಗೀತಾ ಗೋಪಾಲ್ ಎಂಬಾಕೆಯ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯರಿಂದ ದೂರು ದಾಖಲಿಸಲಾಗಿದೆ.
ಬ್ಯಾಂಕ್ ಅಧಿಕಾರಿಗಳ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿದ ಸಂಗೀತಾ ಗೋಪಾಲ್ ಮಹಿಳೆಯಾಗಿ ಈ ರೀತಿ ದರ್ಪ ತೋರಿರೋದು ಸರಿಯಲ್ಲ. ಮಹಿಳಾ ಹಕ್ಕು ಹಾಗೂ ಕಾನೂನಿನ ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ, ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಪ್ರಿಯಾ ಆರ್ಯ ದೂರು ನೀಡಿದ್ದಾರೆ.
ಸಾಲ ವಸೂಲಾತಿಗೆ(ರಿಕವರಿ) ಬಂದ ಬ್ಯಾಂಕ್ ಅಧಿಕಾರಿಗಳಿಗೆ ಸಂಗೀತಾ ಗೋಪಾಲ್ ಧಮ್ಕಿ ಹಾಕಿದ್ದ ವಿಡಿಯೋ ಈ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದ ಹಾಗೆ, CCBಯಿಂದ ಬಂಧಿತನಾಗಿರುವ ಡ್ರಗ್ ಪೆಡ್ಲರ್ ರಾಹುಲ್ಗೆ ಸಂಗೀತಾ ಗೋಪಾಲ್ ಆಪ್ತೆಯಾಗಿರುವುದು ತಿಳಿದುಬಂದಿದೆ.
Published On - 5:15 pm, Mon, 7 September 20