ನೀನೇನಾ ಲ್ಯಾಪ್‌ಟಾಪ್ ಕಳ್ಳ ಎಂದು ಕೇಳಿದ್ದಕ್ಕೆ.. 2ನೇ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡ ಆರೋಪಿ!

|

Updated on: Mar 19, 2021 | 10:44 PM

ಕೆಲಸಕ್ಕಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್ ಕದ್ದಿದ್ದ ಭದ್ರತಾ ಸಿಬ್ಬಂದಿಯೊಬ್ಬ ವಿಚಾರಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲು ಮುರಿದುಕೊಂಡ ಘಟನೆ ತಲಘಟ್ಟಪುರದಲ್ಲಿ ನಡೆದಿದೆ. ಆರೋಪಿ ಕಚೇರಿಯ 2ನೇ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡಿದ್ದಾನೆ.

ನೀನೇನಾ ಲ್ಯಾಪ್‌ಟಾಪ್ ಕಳ್ಳ ಎಂದು ಕೇಳಿದ್ದಕ್ಕೆ.. 2ನೇ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡ ಆರೋಪಿ!
ಜಪ್ತಿ ಮಾಡಲಾದ ಲ್ಯಾಪ್​ಟಾಪ್​ಗಳು (ಎಡ); ಬಂಧಿತ ಆರೋಪಿ (ಬಲ)
Follow us on

ಬೆಂಗಳೂರು: ಕೆಲಸಕ್ಕಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್ ಕದ್ದಿದ್ದ ಭದ್ರತಾ ಸಿಬ್ಬಂದಿಯೊಬ್ಬ ವಿಚಾರಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲು ಮುರಿದುಕೊಂಡ ಘಟನೆ ತಲಘಟ್ಟಪುರದಲ್ಲಿ ನಡೆದಿದೆ. ಆರೋಪಿ ಕಚೇರಿಯ 2ನೇ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡಿದ್ದಾನೆ. ಒಡಿಶಾದ ಋಷಿಕೇಶ್‌ ಪರಾರಿಯಾಗಲು ಯತ್ನಿಸಿ ಕಾಲು ಮುರಿದುಕೊಂಡ ಸೆಕ್ಯೂರಿಟಿ ಗಾರ್ಡ್!

ಋಷಿಕೇಶ್​ ತಲಘಟ್ಟಪುರದ ಸಿಟಿಡಿಐ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಅಂದ ಹಾಗೆ, ಈ ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ರಿಪೇರಿ ಮಾಡಲಾಗುತ್ತಿತ್ತು. ಹೀಗಾಗಿ, ಕಂಪನಿಯಲ್ಲಿ ಯಾರೂ ಇಲ್ಲದಿದ್ದಾಗ ಈತ ಲ್ಯಾಪ್‌ಟಾಪ್ ಕದ್ದಿದ್ದಾನೆ. ಅದು ಒಂದಲ್ಲ, ಎರಡಲ್ಲ ಸ್ವಾಮಿ, ಬರೋಬ್ಬರಿ 38ಕ್ಕೂ ಹೆಚ್ಚು ಲ್ಯಾಪ್‌ಟಾಪ್ ಕಳವು ಮಾಡಿದ್ದಾನೆ. ಅಷ್ಟೇ ಅಲ್ಲ, ಕದ್ದ ಮಾಲ್​ನ ಮುಬಾರಕ್‌ ಎಂಬಾತನಿಗೆ ತಲಾ 5 ಸಾವಿರದಂತೆ ಮಾರಿಬಿಟ್ಟಿದ್ದಾನೆ.

ಬೈ ದಿ ಬೈ, ಮುಬಾರಕ್ ಸ್ಕ್ರ್ಯಾಪ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುತ್ತಿದ್ದ. ಕಂಪನಿಗೆ ಮುಬಾರಕ್ ಭೇಟಿ ನೀಡಿದ್ದಾಗ ಇಬ್ಬರಿಗೂ ಪರಿಚಯವಾಗಿದೆ. ಆಗ ಮುಬಾರಕ್​ ಲ್ಯಾಪ್‌ಟಾಪ್ ಕದ್ದು ನೀಡಿದ್ರೆ ಹಣ ನೀಡುವುದಾಗಿ ಹೇಳಿದ್ದನಂತೆ. ಹೀಗಾಗಿ, ಮುಬಾರಕ್ ಹೇಳಿದಂತೆ ಋಷಿಕೇಶ್​ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ.

ಆದರೆ, ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿ ವಿಚಾರಣೆ ನಡೆಸಿದರು. ಈ ವೇಳೆ, ತಪ್ಪಿಸಿಕೊಳ್ಳಲು ಋಷಿಕೇಶ್ ಕಟ್ಟಡದಿಂದ ಹಾರಿದ್ದಾನೆ. ಗಾಯಾಳು ಸೆಕ್ಯೂರಿಟಿಗಾರ್ಡ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸದ್ಯ, ಪೊಲೀಸರು ಆರೋಪಿಯಿಂದ 20 ಲಕ್ಷ ಮೌಲ್ಯದ 38 ಲ್ಯಾಪ್‌ಟಾಪ್​ಗಳನ್ನು ಜಪ್ತಿಮಾಡಿದ್ದಾರೆ. ಪ್ರಕರಣ ಸಂಬಂಧ ಮುಬಾರಕ್‌ನನ್ನು ಸಹ ಬಂಧಿಸಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಾಂತರಾಜು

ಇಂಡ್ಲವಾಡಿ ಬಳಿ ತೆಂಗಿನ ಮರದಿಂದ ಬಿದ್ದು ಯುವಕ ಸಾವು
ಇಂಡ್ಲವಾಡಿ ಬಳಿ ತೆಂಗಿನ ಮರದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಆನೇಕಲ್ ತಾಲೂಕಿನ ಇಂಡ್ಲವಾಡಿಯಲ್ಲಿ ಘಟನೆ ನಡೆದಿದೆ. ಕೋಣನಕುಂಟೆ ನಿವಾಸಿ ಕಾಂತರಾಜು(28) ಮೃತ ಯುವಕ.

ತೆಂಗಿನ ಮರದಲ್ಲಿ ಗರಿಗಳನ್ನು ಕತ್ತರಿಸಲು ಬಂದಿದ್ದಾಗ ಘಟನೆ ಸಂಭವಿಸಿದೆ. ಸುಮಾರು 50 ಅಡಿ ಎತ್ತರದಿಂದ ಕೆಳಗೆಬಿದ್ದು ಕಾಂತರಾಜು ಸ್ಥಳದಲ್ಲೇ ಅಸುನೀಗಿದ್ದಾನೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಫೈಬರ್​ ಕೇಬಲ್ ಅಳವಡಿಕೆಯಲ್ಲಿ ಅಕ್ರಮ ಆರೋಪ: ವಿಜಯಪುರದ BSNL ಕಚೇರಿ ಮೇಲೆ CBI ದಾಳಿ

Published On - 10:14 pm, Fri, 19 March 21