ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ

| Updated By: ಸಾಧು ಶ್ರೀನಾಥ್​

Updated on: Feb 27, 2021 | 12:02 PM

ನನ್ನ ಮುಂಬೈ ಗೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆಯೂ ಸುಳ್ಳು ಕೇಸ್ ಹಾಕಿ ಮಾನ ಮರ್ಯಾದೆ ತೆಗೆಯೋದಾಗಿ ಬೆದರಿಸಿ ಒಬ್ಬರಿಂದ 35 ಲಕ್ಷ ಮತ್ತು ಇನ್ನೊಬ್ಬರಿಂದ 25 ಲಕ್ಷ ಪಡೆದಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ
CCB PSI ಕಬ್ಬಾಳ್ ರಾಜ್
Follow us on

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರ ಅಕ್ರಮಗಳು ಬಗೆದಷ್ಟೂ ಹೊರಬರುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಯನ್ನು ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ದಾಳಿ ಮಾಡಿದ್ದರು. ಆಗ ಅವರಿಂದ ಸಿಸಿಬಿ ಪಿಎಸ್​ಐ ಕಬ್ಬಾಳ್ ರಾಜ್ 55 ಲಕ್ಷ ಹಣ ಪಡೆದಿದ್ದರು. ನನ್ನ ಮುಂಬೈ ಗೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆಯೂ ಸುಳ್ಳು ಕೇಸ್ ಹಾಕಿ ಮಾನ ಮರ್ಯಾದೆ ತೆಗೆಯೋದಾಗಿ ಬೆದರಿಸಿ ಒಬ್ಬರಿಂದ 35 ಲಕ್ಷ ಮತ್ತು ಇನ್ನೊಬ್ಬರಿಂದ 25 ಲಕ್ಷ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಹರೀಶ್ ಮತ್ತು ವಿಶ್ವಾಸ್ ಎಂಬವರಿಂದಲೂ ಬೆದರಿಸಿ ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಇವರೆಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದಾರೆ. ಸದ್ಯ ಇವರೆಲ್ಲರೂ ಬಂದು ಸಿಐಡಿ ಪೊಲೀಸರ ಎದುರು ಮಾಹಿತಿ ಕೊಡಲು ತಯಾರಿದ್ದಾರೆ ಎಂದು ಟಿವಿ9ಗೆ ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ನೈಜೀರಿಯನ್ ಡ್ರಗ್​ ಪೆಡ್ಲರ್ಸ್ ಸೆರೆ.. ಬಂಧಿತರಿಂದ 15 ಲಕ್ಷ ಮೌಲ್ಯದ ಡ್ರಗ್ಸ್ ವಶ..!

Published On - 12:01 pm, Sat, 27 February 21