ಬೆಂಗಳೂರು: ನಗರದ ಶೇಷಾದ್ರಿಪುರಂನ ನಟರಾಜ್ ಥಿಯೇಟರ್ ಬಳಿ ಇಂದು ಬೆಳಿಗ್ಗೆ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ಗಣೇಶ (40) ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಹಳೇ ದ್ವೇಷದ ಹಿನ್ನೆಲೆ ಗಣೇಶನ ಮೇಲೆ ನಾಲ್ವರು ಆಟೋದಲ್ಲಿ ಬಂದು ಲಾಂಗ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು . ಇದರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ಗಣೇಶ ಸಾವನ್ನಪ್ಪಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಸಿದ್ದಾರೆ. ಆರೋಪಿಗಳು ತಲೆಮರೆಸಿಕೊಳ್ಳಲು ಆಂಧ್ರಕ್ಕೆ ತೆರಳ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಸಾವಿನ ಮನೆಯನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಯ ಬಂಧನ
ಒಂಟಿ ಮಹಿಳೆಯರು, ವೃದ್ದರನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಎಗರಿಸ್ತಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಹೆಗ್ಗನಹಳ್ಳಿ ನಿವಾಸಿ ಆನಂದ್ ಬಂಧಿತ ಆರೋಪಿ. ಆರೋಪಿ ಆನಂದ್ ಸಾವಿನ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು, ಬುಡುಬುಡುಕೆ ಹೇಳುತ್ತೇನೆ ಅಂತ ನೆಪದಲ್ಲಿ ಮನೆ ಬಳಿ ಬಂದಿದ್ದನು.
ಆಗ ಸ್ಮಶಾನದಲ್ಲಿ ಪೂಜೆ ಮಾಡಿಸುತ್ತೇನೆ ಅಂತ ಹೇಳಿ ದಂಪತಿಗಳ ಬಳಿಯಿದ್ದ ಚಿನ್ನಾಭರಣ 50 ಗ್ರಾಂ ಚಿನ್ನಾಭರಣ ಆರೋಪಿ ದೋಚಿದ್ದನು. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಣಕಲ್ ಕೆರೆಗೆ ಬಿದ್ದು ಯುವಕ ಆತ್ಮಹತ್ಯೆ
ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಗುರುತು ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡು ಯುವಕನ ಶವ ಹೊರ ತೆಗೆದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರ್ಕಾರಿ ಬಸ್ ಪಲ್ಟಿ-10 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಹಾವೇರಿ: ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಬಳಿ ಸರ್ಕಾರಿ ಬಸ್ ಪಲ್ಟಿಯಾಗಿ 10 ಜನರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭಿರವಾಗಿದೆ. ನಡೆದಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಬೆಂಗಳೂರು: ಮಹಾನಗರದಲ್ಲಿ ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆನಂದ್ ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.
ಈ ವೇಳೆ ನೈಟ್ ಬೀಟ್ ಇದ್ದ ಅರಸೀಕೆರೆ ಪೊಲೀಸ್ ಠಾಣಾ ಪೊಲೀಸರು ಅನುಮಾನಗೊಂಡು MCCTNS ಮೊಬೈಲ್ ಅಪ್ಲೀಕೇಷನ್ ಮೂಲಕ ಫಿಂಗರ್ ಪ್ರಿಂಟ್ ಸಂಗ್ರಹಿಸಿದ್ದರು. ಆಗ ಆರೋಪಿ ಆನಂದ್ ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಗೊತ್ತಾಗಿದೆ.
ಕೂಡಲೇ ಆನಂದನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಂಧನದ ಬಳಿಕ ಅರಸೀಕೆರೆ ಟೌನ್ ಪೊಲೀಸರು ಸಹಚರ ಚಂದ್ರುನನ್ನು ಬಂಧಿಸಿದ್ದಾರೆ. ಬಂಧಿತ ಆನಂದ್ ಮತ್ತು ಚಂದ್ರು ಬೆಂಗಳೂರಿನಲ್ಲಿ ಮನೆಗಳ್ಳತನದಲ್ಲಿ 30 ಗ್ರಾಂ ಚಿನ್ನಾಭರಣ ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 30 ಗ್ರಾಂ. ಚಿನ್ನಾಭರಣ ಮತ್ತು 90 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಬಲೆಗೆ ಬಿದ್ದಿದ್ದ ಪಾಲಿಕೆ ಬಿಲ್ ಕಲೆಕ್ಟರ್ ವಜಾ
ಧಾರವಾಡ: ಹುಬ್ಬಳ್ಳಿ-ಧಾರವಾರ ಮಹಾನಗರ ಪಾಲಿಕೆ ವಲಯ-2ರ ಬಿಲ್ ಕಲೆಕ್ಟರ್ ವೆಂಕಟೇಶ್ ದಾಸರ್ನನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ವೆಂಕಟೇಶ ದಾಸರ್ ಗುರುರಾಜ್ ಎಂಬುವರ ಬಳಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ವೆಂಕಟೇಶ್ ಪಹಣಿ ಪತ್ರ ಕೊಡಲು ದಾಸರ್ ಗುರುರಾಜ್ ಎಂಬುವರ ಬಳಿ 6 ಸಾವಿರ ಲಂಚ ಕೇಳಿದ್ದನು. ವೆಂಕಟೇಶ್ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ಕರ್ತವ್ಯ ಲೋಪದ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ವರದಿ ಸಲ್ಲಿಸಿದ್ದರು. ಪಾಲಿಕೆ ಆಯುಕ್ತರ ವರದಿ ಆಧರಿಸಿ ಡಿಸಿ ಗುರುದತ್ತ ಹೆಗಡೆ ವೆಂಕಟೇಶ್ ದಾಸರ್ನನ್ನು ವಜಾಗೊಳಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Tue, 13 September 22