MCCTNS: ಪಾತಕಿಗಳಿಗೆ ತಪ್ಪಿಸಿಕೊಳ್ಳಲು ಇನ್ನು ಛಾನ್ಸೇ ಇಲ್ಲ! ಬೆಂಗಳೂರು ಪೊಲೀಸರ ಕೈಗೆ ಬಂದಿದೆ ಫಿಂಗರ್ ಪ್ರಿಂಟ್ ಸಂಗ್ರಹಿಸುವ ಮೊಬೈಲ್ ಆ್ಯಪ್!
Mobile Crime and Criminal tracking network and System: ತಡರಾತ್ರಿ ಅಡ್ಡಾಡೋ ಅನುಮಾನಾಸ್ಪದ ವ್ಯಕ್ತಿಗಳ ಫಿಂಗರ್ ಪ್ರಿಂಟ್ ಸಂಗ್ರಹಿಸುವ ಮೂಲಕ ಅಪರಾಧಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳ ಫಿಂಗರ್ ಪ್ರಿಂಟ್ ಪಡೆದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಟ್ರ್ಯಾಕ್ ಮಾಡಿ ಪತ್ತೆ ಹಚ್ಚುತ್ತಾರೆ. ಹಾಸನದಲ್ಲಿ ಮೊದಲ ಕೇಸ್ ಭೇದಿಸಲಾಗಿದೆ.
ಪಾತಕ ಲೋಕದಲ್ಲಿ ಅಪರಾಧ ಕುಕೃತ್ಯಗಳಲ್ಲಿ ಮುಳುಗೇಳುತ್ತಾ, ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸ್ತಾ, ತಲೆಮರೆಸಿಕೊಂಡು, ವೇಷ ಬದಲಿಸಿಕೊಂಡು, ಆದರೂ ಲೇಟ್ ನೈಟ್ ಬಿಂದಾಸ್ ಆಗಿ ಓಡಾಡೋ ಕಳ್ಳಕಾಕರು, ಪುಂಡರು, ಕ್ರಿಮಿನಲ್ ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೇಟ್ ನೈಟ್ ಅಡ್ಡಾಡ್ತಾ ಅಪರಾಧ ಕೃತ್ಯಗಳನ್ನ ನಡೆಸುವ ಕ್ರಿಮಿನಲ್ ಗಳನ್ನ ಖೆಡ್ಡಾಗೆ ಕೆಡವಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ವಿಶೇಷ ವರದಿ – ಶಿವಪ್ರಸಾದ್. ಬಿ, ಟಿವಿ 9, ಬೆಂಗಳೂರು
ಪೊಲೀಸರಿಗೆ ಕೇಂದ್ರ ಗೃಹ ಇಲಾಖೆ ಹೊಸದೊಂದು ಆ್ಯಪ್ ಅಭಿವೃದ್ದಿಪಡಿಸಿ ಕೊಟ್ಟಿದೆ. ಆ ಆ್ಯಪ್ ನಿಂದ ಕ್ರಿಮಿನಲ್‌ಗಳು ಹೇಗೆ ಸಿಕ್ಕಿಬಿಳ್ತಾರೆ ಗೊತ್ತಾ..!? ಫಿಂಗರ್ ಪ್ರಿಂಟ್ ಸಂಗ್ರಹಿಸುವ ಆ್ಯಪ್ ಆಧಾರಿತ ಮೊಬೈಲ್ ಅನ್ನು ಬೆಂಗಳೂರು ಪೊಲೀಸರ ಕೈಗೆ ನೀಡಲಾಗಿದೆ. ಲೇಟ್ ನೈಟ್ ವೇಳೆ ಅನುಮಾನಾಸ್ಪದವಾಗಿ ತಲೆಮರೆಸಿಕೊಂಡು ಅಡ್ಡಾಡುವ ಕ್ರಿಮಿನಲ್‌ಗಳನ್ನು ಖೆಡ್ಡಾ ಗೆ ಕೆಡವಲು ಸನ್ನದ್ದವಾಗಿದೆ ಬೆಂಗಳೂರು ಖಾಕಿ ಪಡೆ.
ಆದ್ರೆ ಇಲ್ಲೊಂದು ಅಪಾಯವೂ ಇದೆ. ಈ ಮೊಬೈಲ್ ಆ್ಯಪ್ ನಲ್ಲಿ ಕೇವಲ ಕ್ರಿಮಿನಲ್ ಗಳ ಫಿಂಗರ್ ಪ್ರಿಂಟ್ ಟ್ರ್ಯಾಕ್ ಮಾಡಲು, ಸಂಗ್ರಹಿಸಲು ಮಾತ್ರ ಬಳಸಲಾಗುತ್ತದೆ. ಯಾವುದೇ ವ್ಯಕ್ತಿ ಕ್ರಿಮಿನಲ್ ಅಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಪೊಲೀಸರು ತಮ್ಮ ಅನುಮಾನದ ಮೇಲೆ ಸಂಗ್ರಹಿಸಿದ ಅಂತಹ ವ್ಯಕ್ತಿಗಳ ಫಿಂಗರ್ ಪ್ರಿಂಟ್ ಮಾದರಿಗಳನ್ನ ಡಿಲೀಟ್ ಮಡುತ್ತಾರೆ, ಯಾವುದೇ ಕಾರಣಕ್ಕೂ ಉಳಿಸಿಕೊಳ್ಳುವುದಿಲ್ಲ.
ಬೆಂಗಳೂರು ರಾತ್ರಿಯಾದ್ರೂ ರಂಗೇರಿದ ಸಿಟಿಯಾಗಿ ಕಂಗೊಳಿಸುತ್ತಲೇ ಇರುತ್ತೆ ಅನ್ನೋ ಮಾತು ಜನಜನಿತ. ಇಲ್ಲಿನ ಜನರು ಹಗಲು-ರಾತ್ರಿ ಎನ್ನದೇ ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಅದರಲ್ಲೂ ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡೋರು, ತಡರಾತ್ರಿಯಾದ್ರು ಓಡಾಡ್ತಾನೆ ಇರ್ತಾರೆ. ಇದನ್ನೆ ಬಂಡವಾಳ ಮಾಡ್ಕೊಳ್ಳೊ ಕ್ರಿಮಿನಲ್‌ಗಳು, ತಡರಾತ್ರಿ ಓಂಟಿಯಾಗಿ ಓಡಾಡೋರನ್ನು ಅಡ್ಡಹಾಕಿ ಸುಲಿಗೆ ಮಾಡ್ತಾರೆ.
Fingerprint in mobile: ಇನ್ನು ಕೆಲವರು ಮನೆಗಳವು ಸೇರಿದಂತೆ ಬೇರೆ ಬೇರೆ ಗಂಭೀರ ಅಪರಾಧ ಕೃತ್ಯಗಳನ್ನು ಎಸಗಿ ಪೊಲೀಸರಿಗೆ ಯಾವುದೇ ಅನುಮಾನ ಬಾರದಂತೆ, ವೇಷ ಬದಲಿಸಿಕೊಂಡು, ಯಾಮಾರಿಸ್ತಾ ಪೊಲೀಸರ ಎದುರಿಗೇ ಎಸ್ಕೇಪ್ ಆಗಿಬಿಡ್ತಾರೆ. ಪೊಲೀಸರು ರಸ್ತೆಯಲ್ಲಿ ತಡೆದು ಪ್ರಶ್ನೆ ಮಾಡಿದ್ರೆ, ಆಸ್ಪತ್ರೆ, ಮೆಡಿಕಲ್ ಎಮೆರ್ಜೆನ್ಸಿ ಅಂತಾ ಬೇರೆ ಬೇರೆ ಕುಂಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ತಾರೆ. ಇದಕ್ಕೂ ಕೇಂದ್ರ ಗೃಹ ಇಲಾಖೆ ಹೊಸದೊಂದು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಪ್ರಾಯೋಗಿಕವಾಗಿ ಬೆಂಗಳೂರು ಪೊಲೀಸರಿಗೆ ಆ ಆ್ಯಪ್ ನೀಡಲಾಗಿದ್ದು ಪೊಲೀಸರು ಈಗಾಗಲೇ ಈ ಮೊಬೈಲ್ ಆ್ಯಪ್ ಹಿಡಿದು ಫೀಲ್ಡ್‌ಗೆ ಇಳಿದಿದ್ದಾರೆ.
ಕೇಂದ್ರ ಗೃಹ ಇಲಾಖೆಯಿಂದ ಪ್ರಾಯೋಗಿವಾಗಿ CCTNS – Crime and Criminal tracking network and System ಅನ್ನೋ ಈ ಹೊಸ ಆಪ್‌ನ್ನು ಬೆಂಗಳೂರು ಪೊಲೀಸರಿಗೆ ನೀಡಿದೆ. ನಗರದ ಪ್ರತಿ ಪೊಲೀಸ್ ಸ್ಟೇಷನ್‌ಗೆ ತಲಾ ಐದರಂತೆ ಈ ಮೊಬೈಲ್ ಆ್ಯಪ್ ಬಳಸಲು ಅವಕಾಶ ನೀಡಿದೆ. ಆಪ್‌ಗಳನ್ನು ಮೊಬೈಲ್‌ಗೆ ಇನ್ಸ್ಟಾಲ್ ಮಾಡ್ಕೊಳ್ಳೋ ಪೊಲೀಸರು, ತಡರಾತ್ರಿ ಅನುಮಾನಸ್ಪಾದವಾಗಿ ಓಡಾಡೋವವರನ್ನು ತಡೆದು ಆಪ್‌ನಲ್ಲಿ ಹೆಬ್ಬೆಟ್ಟು ಇಟ್ಟು ಸ್ಕಾನ್ ಮಾಡ್ತಾರೆ. ಆ ವ್ಯಕ್ತಿ ಈ ಹಿಂದೆ ಯಾವುದಾದ್ರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ರೆ, ಆ ಆಪ್ ನಲ್ಲಿ ಆ ವ್ಯಕ್ತಿಯ ಅಪರಾಧಗಳ ಫುಲ್ ಡಿಟೇಲ್ಸ್ ಸಮೇತ ಅಪ್ ನಲ್ಲಿ ಮಾಹಿತಿ ಲಭ್ಯವಾಗುತ್ತೆ. ಆಗ ಆ ವ್ಯಕ್ತಿ ಅಪರಾಧಿಯಾ ಅಥವಾ ಸಾಮಾನ್ಯ ವ್ಯಕ್ತಿನಾ ಅನ್ನೋ ಪರಿಶೀಲನೆ ನಂತರ ಅಪರಾಧ ಕೃತ್ಯದ ಹಿನ್ನೆಲೆ ಇದ್ದರೆ ಆತನನ್ನ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ತೀಮಾರ್ನಿಸಲಾಗುತ್ತದೆ. ಇದರಿಂದ ಯಾವುದೇ ಕ್ರಿಮಿನಲ್ ಸುಳ್ಳು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ ಅನ್ನೋದು ಪೊಲೀಸರ ಖಡಕ್ ಪ್ಲಾನ್.
ಈಗಾಗಲೇ ರಾಜ್ಯಾದ್ಯಂತ ಈ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಅಂಡ್ ಸಿಸ್ಟಮ್ ಎಂಬುದು ಮೊಬೈಲ್ ಆ್ಯಪ್ ಆಧರಿತವಾಗಿ ಮೊಬೈಲ್ ಅಪ್ಲೀಕೇಷನ್ ವರ್ಕ್ ಆಗ್ತಿದೆ. ಮೊದಲ ಬಾರಿಗೆ ಇದೇ MCCTNS ಆ್ಯಪ್ ನಿಂದ ಬೆಂಗಳೂರಿನಲ್ಲಿ ಸರಣಿ ಮೊಬೈಲ್ ಗಳನ್ನ ಕಸಿದು, ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಖತರ್ನಾಕ್ ಕ್ರಿಮಿನಲ್ ಗಳು ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ.
ಹಾಸನದ ಅರಸೀಕೆರೆಯಲ್ಲಿ ಮಿಡ್ ನೈಟ್ ಕೇಸ್ ಸ್ಟಡಿ:
ಬೆಂಗಳೂರಿನ ರಾಬರ್ಸ್ ಹಾಸನದ ಅರಸೀಕೆರೆಯಲ್ಲಿ ಮಿಡ್ ನೈಟ್ ನಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾರೆ. ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿ ಅನುಮಾನಸ್ಪಾದವಾಗಿ ಓಡಾಡ್ತಿದ್ದವನ ಫಿಂಗರ್ ಪ್ರಿಂಟ್ ಕ್ಲ್ಯೂ ಕೊಟ್ಟಿದೆ. ಬೆಂಗಳೂರಿನಲ್ಲಿ ಸರಣಿ ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನ ಮಾಡಿದ್ದ ಆರೋಪಿಗಳು ಹಾಸನದಲ್ಲಿ ಪತ್ತೆಯಾಗಿದ್ದಾರೆ! ಅರಸೀಕೆರೆ ಟೌನ್ ಪೊಲೀಸರು ರೈಲ್ವೆ ಸ್ಟೇಷನ್ ಸಮೀಪ ಅನುಮಾನಾಸ್ಪದವಾಗಿ ಓಡಾಡ್ತುದ್ದವರ ತಡೆದು MCCTNS ಮೊಬೈಲ್ ಅಪ್ಲೀಕೇಷನ್ ಮೂಲಕ ಫಿಂಗರ್ ಪ್ರಿಂಟ್ ಸಂಗ್ರಹಿಸಿದ್ದರು.
ಈ ವೇಳೆ ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ ಆನಂದ್, ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಟ್ ಬೀಟ್ ನಲ್ಲಿದ್ದ ಪೊಲೀಸರಿಗೆ ಪತ್ತೆಯಾಗಿದ್ದ. ಆನಂದ್ ಫಿಂಗರ್ ಪ್ರಿಂಟ್ ಪಡೆದು ಟ್ರ್ಯಾಕ್ ಮಾಡಿದ ಕೂಡಲೇ ಬೆಂಗಳೂರಿನಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಪತ್ತೆಯಾಗಿತ್ತು.
ಆರೋಪಿ ಆನಂದ್ ಬಂಧನದ ಬಳಿಕ ಸಹಚರ ಚಂದ್ರುನನ್ನೂ ಕರೆತಂದು ಬಂಧಿಸಿದ್ದ ಅರಸೀಕೆರೆ ಟೌನ್ ಪೊಲೀಸರು, ಬಂಧಿತ ಆನಂದ್ ಮತ್ತು ಚಂದ್ರುವಿನಿಂದ ಬರೋಬ್ಬರಿ 90 ಮೊಬೈಲ್ ಪೋನ್ ಗಳನ್ನ ರಿಕವರಿ ಮಾಡಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಣಿ ಮೊಬೈಲ್ ಸ್ನಾಚಿಂಗ್ ಸೇರಿದಂತೆ ಮನೆಗಳ್ಳತನ ಕೇಸ್ ನಲ್ಲಿ 30 ಗ್ರಾಂ ಚಿನ್ನಾಭರಣ ಕದ್ದಿದ್ದಾಗಿ ಆರೋಪಿಗಳು ಅರಸೀಕೆರೆ ಟೌನ್ ಠಾಣಾ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಬಂಧಿತ ಆರೋಪಿಗಳಿಂದ 30 ಗ್ರಾಂ. ಚಿನ್ನಾಭರಣ ಮತ್ತು 90 ಮೊಬೈಲ್ ಗಳ ವಶಕ್ಕೆ ಪಡೆದು ಅರಸೀಕೆರೆ ಟೌನ್ ಪೊಲೀಸರು ಬಂಧಿಸಿದ್ದರು.
Published On - 6:06 am, Wed, 14 September 22