ಶಿವಮೊಗ್ಗ: ಅಪ್ರಾಪ್ತ ಸ್ನೇಹಿತರ ನಡುವೆ ಕಾದಾಟ, ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕು ಇರಿತ
ಶಿವಮೊಗ್ಗದ ಬಾಪೂಜಿ ನಗರದಲ್ಲಿ ಅಪ್ರಾಪ್ತ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.
ಶಿವಮೊಗ್ಗ: ಶಿವಮೊಗ್ಗದ (Shivamogga) ಬಾಪೂಜಿ ನಗರದಲ್ಲಿ ಅಪ್ರಾಪ್ತ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಅಪ್ರಾಪ್ತ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. 17 ವರ್ಷದ ಬಾಲಕ 14 ವರ್ಷದ ಬಾಲಕನನ್ನ ಥಳಿಸಿದ್ದನು. ಗಲಾಟೆ ನೋಡಿದ 14 ವರ್ಷದ ಬಾಲಕನ ಚಿಕ್ಕಪ್ಪ ತೇಜಸ್ ಹಲ್ಲೆ ಮಾಡಿದ 17 ವರ್ಷದ ಬಾಲಕನಿಗೆ ಥಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ 17 ವರ್ಷದ ಬಾಲಕ ಮತ್ತೋರ್ವ ಯುವಕ ಆರೀಫ್ನಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾನೆ.
ಸ್ಥಳಕ್ಕೆ ಬಂದ ಆರೀಫ್ 17 ವರ್ಷದ ಬಾಲಕನೊಂದಿಗೆ ಸೇರಿ ತೇಜಸ್ ವಿರುದ್ಧ ಮುಗಿಬಿದ್ದಿದ್ದಾರೆ. ಈ ವೇಳೆ ತೇಜಸ್ಗೆ ಚಾಕು ನಿಂದ ದಾಳಿ ಮಾಡಲಾಗಿದೆ. ಹಲ್ಲೆಗೊಳಗಾದ ತೇಜಸ್ರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೆ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಲಾಟೆ ಮಾಡಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ದೇವರ ಹರಕೆ ತೀರಿಸಲು ಧರ್ಮಸ್ಥಳಕ್ಕೆ ಹೋದ ಕುಟುಂಬ: ಮನೆಯಲ್ಲಿನ ಆಭರಣ ಮಾಯ
ಕೊಪ್ಪಳ: ಕುಟುಂಬ ದೇವರ ಹರಕೆ ತೀರಿಸಲೆಂದು ಹಿಂದೆ ಧರ್ಮಸ್ಥಳಕ್ಕೆ ಹೋದಾಗ, ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿರುವ 21 ತೋಲಾ ಬಂಗಾರ ಆಭರಣ, ಸಾವಿರಾರು ರೂಪಾಯಿ ದೋಚಿರುವ ಘಟನೆಗಂಗಾವತಿ ನಗರದಲ್ಲಿ ನಡೆದಿದೆ. ಗಂಗಾವತಿ ನಗರ ಲಲಿತ ಮಹಲ ಹಿಂದುಗಡೆ ಇರುವ ಶ್ರೀನಿವಾಸ ಎಂಬುವವರಿಗೆ ಸೇರಿದ ಮನೆಯನ್ನು ಖದೀಮರು ದೋಚಿದ್ದಾರೆ.
ಶ್ರೀನಿವಾಸ ಕುಟುಂಬ ಹರಕೆ ತೀರಿಸಲೆಂದು ಮೂರು ದಿನಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದರು. ಈ ಸಮಯದಲ್ಲಿ ಕಳ್ಳರು ಬಾಗಿಲು ಮುರಿದು ಮನೆಯಲ್ಲಿರುವ ಬಂಗಾರ ಮತ್ತು ಹಣವನ್ನು ದೋಚಿದ್ದಾರೆ. ಇಂದು ವಾಪಸ್ಸು ಬಂದಿರುವ ಶ್ರೀನಿವಾಸ ಅವರಿಗೆ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಗಂಗಾವತಿ ನಗರ ಪೊಲೀಸ್ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Wed, 14 September 22