AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

31 Online ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಸಿಇಎನ್ ಪೊಲೀಸರು, ಬಹುತೇಕ ಹಣವನ್ನು ಮರಳಿಸಿದ್ದಾರೆ!

Vijayapura CEN Police: ಸಿಇಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ನಡೆದಿರೋ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಜಯಪುರ ಜಿಲ್ಲಾ ಎಸ್ಪಿ ಆನಂದ ಕುಮಾರ್, ಪ್ರಕರಣ ಭೇದಿಸಿದ ತಂಡಕ್ಕೆ ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.

31 Online ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಸಿಇಎನ್ ಪೊಲೀಸರು, ಬಹುತೇಕ ಹಣವನ್ನು ಮರಳಿಸಿದ್ದಾರೆ!
31 ಆನ್ಲೈನ್ ಹಣ ವಂಚನೆ ಪ್ರಕರಣಗಳ ಭೇದಿಸಿದ ವಿಜಯಪುರ ಸಿಇಎನ್ ಪೊಲೀಸರು, ಬಹುತೇಕ ಹಣವನ್ನು ಮರಳಿಸಿದ್ದಾರೆ!
TV9 Web
| Edited By: |

Updated on: Sep 14, 2022 | 5:41 PM

Share

ವಿಜಯಪುರ ಜಿಲ್ಲಾ (Vijayapura) ಸಿಇಎನ್ ಪೊಲೀಸರು ವ್ಯವಸ್ಥಿತವಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದು, ಭಾರೀ ಪ್ರಮಾಣದ ಆನ್ಲೈನ್ ಹಣ ವಂಚನೆ (Online Fraud) ಪ್ರಕರಣಗಳನ್ನು ಭೇದಿಸಿದ್ದಾರೆ. 2022ನೇ ಸಾಲಿನಲ್ಲಿ ಇದುವರೆಗೂ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ (CEN Police Station) ಒಟ್ಟು 31 ಆನ್ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆ 31 ಪ್ರಕರಣಗಳಲ್ಲಿ ಒಟ್ಟು 39,99,854 ರೂಪಾಯಿಗಳ ವಂಚನೆ ನಡೆದಿರುವುದು ಪತ್ತೆಯಾಗಿತ್ತು. ಇದರಲ್ಲಿ ಒಟ್ಟು 24,45,729 ರೂ.ಗಳ ಮರಳಿ 31 ದೂರುದಾರರ ಖಾತೆಗಳಿಗೆ ಜಮಾವಣೆ ಮಾಡಲಾಗಿದೆ.

ಸಿಇಎನ್ ವಿಜಯಪುರ ಪೊಲೀಸ್ ಠಾಣೆಯಲ್ಲಿ 11 ವಂಚನೆ ಪ್ರಕರಣಗಳು ದಾಖಲಾಗಿದ್ದವು. 11 ಪ್ರಕರಣಗಳಲ್ಲಿ ಒಟ್ಟು 28,96,865 ರೂಪಾಯಿಗಳ ವಂಚನೆ ನಡೆದಿತ್ತು. ಈ ಪೈಕಿ 15,32,863 ರೂಪಾಯಿ ದೂರುದಾರರ ಬ್ಯಾಂಕ್ ಖಾತೆಗಳಿಗೆ ಜಮಾವಣೆಯಾಗಿದೆ. ವಂಚನೆಯಾದ 1 ತಾಸಿನಲ್ಲಿ (ಗೋಲ್ಡನ್ ಅವರ್) 2022 ರಲ್ಲಿ 10 ಪಿಟಿಶನ್ ಗಳು ದಾಖಲಾಗಿದ್ದವು. ಇದರಲ್ಲಿ ವಂಚನೆಯಾದ 6,15,156 ರೂಪಾಯಿಗಳಲ್ಲಿ 4,50,032 ರೂಪಾಯಿ ಮರಳಿ ದೂರುದಾರರ ಖಾತೆಗೆ ಜಮೆ ಮಾಡಿದ್ದಾರೆ ಸಿಇಎನ್ ಪೊಲೀಸರು.

ಇನ್ನು 2022ರಲ್ಲಿ MHA National Cyber Crime Portal Helpline No 1930 ಮೂಲಕ ಸಹ 10 ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ವಂಚನೆಯಾದ ಒಟ್ಟು 4,87,833 ರೂಪಾಯಿಗಳ ಪೈಕಿ 4,62,834 ಮರಳಿ ವಂಚನೆಗೊಳಗಾದವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಆನ್ಲೈನ್ ವಂಚನೆ ಪ್ರಕರಣಗಳ ಭೇದಿಸಿದ ಕುರಿತು ವಿಜಯಪುರ ಎಸ್ಪಿ ಎಚ್ ಡಿ ಆನಂದಕುಮಾರ್ ಮಾಹಿತಿ ನೀಡಿದ್ದಾರೆ.

ಸಿಇಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ನಡೆದಿರೋ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಆನಂದಕುಮಾರ್, ಪ್ರಕರಣ ಭೇದಿಸಿದತಂಡಕ್ಕೆ ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?