CCB ಹುಡುಕುತ್ತಿರುವ ಶೇಖ್ ಫಾಝಿಲ್​ಗೆ T-10 ಕ್ರಿಕೆಟ್ ನಂಟು, ಹೇಗೆ?

|

Updated on: Sep 12, 2020 | 5:29 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ CCB ಹುಡುಕುತ್ತಿರುವ ಶೇಖ್ ಫಾಝಿಲ್‌ಗೆ ಕ್ರಿಕೆಟಿಗರ ಜೊತೆ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಕ್ರಿಕೆಟ್ ಲೀಗ್‌ನಲ್ಲೂ ಶೇಖ್ ಫಾಝಿಲ್​ನ ವ್ಯವಹಾರ ಇರುವ ಮಾಹಿತಿ ಲಭ್ಯವಾಗಿದೆ. UAEನ ಅಬುಧಾಬಿಯಲ್ಲಿ ನಡೆದ ಪ್ರತಿಷ್ಠಿತ T-10 ಕ್ರಿಕೆಟ್ ಲೀಗ್‌ನಲ್ಲಿ ಶೇಖ್ ಫಾಝಿಲ್ ಹೂಡಿಕೆ ಮಾಡಿದ್ದ ಎಂಬ ಮಾಹಿತಿ ದೊರೆತಿದೆ. ಕರ್ನಾಟಕ ಟಸ್ಕರ್ಸ್ ತಂಡದಲ್ಲಿ ಶೇಖ್ ಫಾಝಿಲ್ ಹೂಡಿಕೆ ಮಾಡಿದ್ದನಂತೆ. ಜೊತೆಗೆ, 2019ರಲ್ಲಿ ತಂಡಕ್ಕೆ ಬ್ಯಾಲಿಸ್ ಕ್ಯಾಸಿನೋ ಪ್ರಮುಖ ಸ್ಪಾನ್ಸರ್ […]

CCB ಹುಡುಕುತ್ತಿರುವ ಶೇಖ್ ಫಾಝಿಲ್​ಗೆ T-10 ಕ್ರಿಕೆಟ್ ನಂಟು, ಹೇಗೆ?
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ CCB ಹುಡುಕುತ್ತಿರುವ ಶೇಖ್ ಫಾಝಿಲ್‌ಗೆ ಕ್ರಿಕೆಟಿಗರ ಜೊತೆ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಕ್ರಿಕೆಟ್ ಲೀಗ್‌ನಲ್ಲೂ ಶೇಖ್ ಫಾಝಿಲ್​ನ ವ್ಯವಹಾರ ಇರುವ ಮಾಹಿತಿ ಲಭ್ಯವಾಗಿದೆ.

UAEನ ಅಬುಧಾಬಿಯಲ್ಲಿ ನಡೆದ ಪ್ರತಿಷ್ಠಿತ T-10 ಕ್ರಿಕೆಟ್ ಲೀಗ್‌ನಲ್ಲಿ ಶೇಖ್ ಫಾಝಿಲ್ ಹೂಡಿಕೆ ಮಾಡಿದ್ದ ಎಂಬ ಮಾಹಿತಿ ದೊರೆತಿದೆ. ಕರ್ನಾಟಕ ಟಸ್ಕರ್ಸ್ ತಂಡದಲ್ಲಿ ಶೇಖ್ ಫಾಝಿಲ್ ಹೂಡಿಕೆ ಮಾಡಿದ್ದನಂತೆ. ಜೊತೆಗೆ, 2019ರಲ್ಲಿ ತಂಡಕ್ಕೆ ಬ್ಯಾಲಿಸ್ ಕ್ಯಾಸಿನೋ ಪ್ರಮುಖ ಸ್ಪಾನ್ಸರ್ ಸಹ ಆಗಿತ್ತು ಎಂದು ತಿಳಿದುಬಂದಿದೆ.

ಅನೇಕ ಸ್ಟಾರ್ ಆಟಗಾರರನ್ನ ಹೊಂದಿದ್ದ ಕರ್ನಾಟಕ ಟಸ್ಕರ್ಸ್ ತಂಡಕ್ಕೆ ಶೇಖ್ ಫಾಝಿಲ್ ಬ್ಯಾಲಿಸ್ ಕ್ಯಾಸಿನೋದ ಪರವಾಗಿ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ. ಹಾಗಾಗಿ, ಪ್ರಮುಖ ಕ್ರಿಕೆಟಿಗರ ಜೊತೆ ನಂಟು ಹೊಂದಿದ್ದ ಫಾಝಿಲ್ ಪಂದ್ಯಾವಳಿ ಉದ್ದಕ್ಕೂ ತಂಡದ ಜೊತೆ ಗುರುತಿಸಿಕೊಂಡಿದ್ದನಂತೆ.