ಶೇಖ್ ಫಾಝಿಲ್‌ನ ಸರೆಂಡರ್ ಮಾಡಿಸ್ತೇವೆ, ಆದರೆ.. -CCB ಅಧಿಕಾರಿಗಳಿಗೆ ಕುಟುಂಬಸ್ಥರ ಷರತ್ತು
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶೇಖ್ ಫಾಝಿಲ್ನನ್ನು ಸರೆಂಡರ್ ಮಾಡಿಸಲು ಆತನ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಫಾಝಿಲ್ನನ್ನು ಸರೆಂಡರ್ ಮಾಡಿಸುವುದಾಗಿ ಕುಟುಂಬಸ್ಥರು ಹೇಳಿದ್ದು ಜೊತೆಗೆ ಆತನನ್ನು ಹೇಗೆ ನೋಡಿಕೊಳ್ಳಬೇಕೆಂದು ಷರತ್ತು ಸಹ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶೇಖ್ ಫಾಝಿಲ್ ಬಂಧನಕ್ಕೆ CCB ಅಧಿಕಾರಿಗಳು ಎಲ್ಲೆಡೆ ಶೋಧಕಾರ್ಯ ನಡೆಸುತ್ತಾ ಇದ್ದಾರೆ. ಹೀಗಾಗಿ, ಈ ಕುರಿತು ಶೇಖ್ ಫಾಝಿಲ್ ಕುಟುಂಬಸ್ಥರನ್ನ ಕರೆಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ಸಂದರ್ಭದಲ್ಲಿ ಫಾಝಿಲ್ನನ್ನು ಸರೆಂಡರ್ ಮಾಡಿಸುವುದಾಗಿ ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶೇಖ್ ಫಾಝಿಲ್ನನ್ನು ಸರೆಂಡರ್ ಮಾಡಿಸಲು ಆತನ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಫಾಝಿಲ್ನನ್ನು ಸರೆಂಡರ್ ಮಾಡಿಸುವುದಾಗಿ ಕುಟುಂಬಸ್ಥರು ಹೇಳಿದ್ದು ಜೊತೆಗೆ ಆತನನ್ನು ಹೇಗೆ ನೋಡಿಕೊಳ್ಳಬೇಕೆಂದು ಷರತ್ತು ಸಹ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶೇಖ್ ಫಾಝಿಲ್ ಬಂಧನಕ್ಕೆ CCB ಅಧಿಕಾರಿಗಳು ಎಲ್ಲೆಡೆ ಶೋಧಕಾರ್ಯ ನಡೆಸುತ್ತಾ ಇದ್ದಾರೆ. ಹೀಗಾಗಿ, ಈ ಕುರಿತು ಶೇಖ್ ಫಾಝಿಲ್ ಕುಟುಂಬಸ್ಥರನ್ನ ಕರೆಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ಸಂದರ್ಭದಲ್ಲಿ ಫಾಝಿಲ್ನನ್ನು ಸರೆಂಡರ್ ಮಾಡಿಸುವುದಾಗಿ ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಆದರೆ, ಆತನನ್ನ ಪೊಲೀಸ್ ಶೈಲಿಯಲ್ಲಿ ವಿಚಾರಣೆ ಮಾಡಬಾರದು. ಹೊಡೆದು ವಿಚಾರಣೆ ಮಾಡದಂತೆ ಕುಟುಂಬಸ್ಥರು ಷರತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಶೇಖ್ ಫಾಝಿಲ್ ಸರೆಂಡರ್ ಆಗೋದಕ್ಕೆ ಸಿಸಿಬಿ ಅಧಿಕಾರಿಗಳು ಒಪ್ಪಿಲ್ಲವಂತೆ. ಅನವು ಎಲ್ಲೇ ಹೋದರೂ ನಾವು ಬಿಡುವುದಿಲ್ಲ ಎಂದು ಕುಟುಂಬಸ್ಥರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಶೇಖ್ ಫಾಝಿಲ್ ಬಂಧನಕ್ಕೆ ಒಂದು ತಂಡ ರಚಿಸಿರುವ ಸಿಸಿಬಿ ಆದಷ್ಟು ಬೇಗ ಆತನನ್ನು ಬಂಧಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಪಾರ್ಟಿಗಳಿಗೆ ಸ್ಟಾರ್ ನಟಿಯರಿಂದ ಆಹ್ವಾನದ ಜಾಹೀರಾತು ಇನ್ನು ಶೇಖ್ ಫಾಝಿಲ್ ತನ್ನ ಕ್ಯಾಸಿನೋ ಪಾರ್ಟಿಗಳಿಗೆ ಸ್ಟಾರ್ ನಟಿಯರ ಮೂಲಕ ಜಾಹೀರಾತು ಕೊಡಿಸುತ್ತಿದ್ದ. ನಾವು ಪಾರ್ಟಿಯಲ್ಲಿ ಭಾಗಿಯಾಗುತ್ತೇವೆ. ನೀವು ಕೂಡ ಬನ್ನಿ ಎಂದು ಕ್ಯಾಸಿನೋಗೆ ಬರುವಂತೆ ಸ್ಟಾರ್ ನಟಿಯರ ಮೂಲಕ ಅಹ್ವಾನ ನೀಡುವ ಪ್ರೋಮೋಗಳನ್ನು ಶೂಟ್ ಮಾಡಿಸುತ್ತಿದ್ದನಂತೆ.
ಇವುಗಳ ಮುಖಾಂತರ ರಾಜಕಾರಣಿಗಳ ಮತ್ತು ಶ್ರೀಮಂತರ ಮಕ್ಕಳನ್ನ ಪಾರ್ಟಿಗೆ ಸೆಳೆಯಲು ಮುಂದಾಗಿದ್ದ. ಬಾಲಿವುಡ್ ನಟಿಯರಾದ ತಾಪ್ಸಿ ಪನ್ನು ಹಾಗೂ ಊರ್ವಶಿ ರೌಟೇಲಾ ಸೇರಿದಂತೆ ಕನ್ನಡ ನಟಿ ಐಂದ್ರಿತಾ ರೇರಿಂದ ಶೇಖ್ ಫಾಝಿಲ್ ತಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಜಾಹೀರಾತು ಮಾಡಿಸಿದ್ದನಂತೆ.
ಕ್ಯಾಸಿನೋ ಮಾಲೀಕರಿಂದ ಹಣ ಪಡೆದು, ಪಾರ್ಟಿ ಆಯೋಜನೆ ಮಾಡಿ ನಂತರ ಆ ಹಣವನ್ನ ನಟ, ನಟಿಯರಿಗೆ ನೀಡಿ ಪಾರ್ಟಿಗೆ ಕರೆತರುತ್ತಿದ್ದನಂತೆ. ಯಾವುದೇ ಪಾರ್ಟಿ ಇದ್ದರೂ ಶೇಖ್ ಫಾಝಿಲ್ ಹಾಜರಾಗ್ತಿದ್ದ. ಇದೇ ರೀತಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದ. ಅಲ್ಲದೆ ನಟಿಯರ ಜೊತೆಗೆ ಮಾಡೆಲ್‌ಗಳನ್ನೂ ಪಾರ್ಟಿಗೆ ಕರೆತರುತ್ತಿದ್ದನಂತೆ.