ಬೆಂಗಳೂರು: ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರಿಂದ ನೊಂದು ತಾಯಿಯನ್ನೇ ಚಾಕು ಇರಿದು ರಾಕ್ಷಸಿ ಮಗಳು ಹತ್ಯೆ ಮಾಡಿರುವ ಘಟನೆ ಕೆ.ಆರ್.ಪುರಂನ ಅಕ್ಷಯ್ ನಗರದಲ್ಲಿ ನಡೆದಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮೃತಾ ಫೆಬ್ರವರಿ2ರಂದು ಬೆಳಗ್ಗೆ 4 ಗಂಟೆಗೆ ಮಲಗಿದ್ದ ತನ್ನ ತಾಯಿ ನಿರ್ಮಲಾರಿಗೆ ಚಾಕು ಇರಿದು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ತನ್ನ ಸಹೋದರ ಹರೀಶ್ಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸಹೋದರಿ ಅಮೃತಾಳನ್ನು ಏಕೆ ಈ ರೀತಿ ಮಾಡಿದೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಅಮೃತಾ ನಾನು ₹15 ಲಕ್ಷ ಸಾಲ ಮಾಡಿದ್ದೀನಿ. ನಾನು ಹೈದರಾಬಾದ್ಗೆ ಹೋದಾಗ ಸಾಲಗಾರರು ಮನೆಗೆ ಬರ್ತಾರೆ. ಅದಕ್ಕೆ ತಾಯಿಯನ್ನು ಕೊಲೆ ಮಾಡಿದ್ದೇನೆ, ನಿನ್ನನ್ನು ಕೊಲ್ಲುತ್ತೇನೆ ಎಂದು ಉತ್ತರಿಸಿ ಪರಾರಿಯಾಗಿದ್ದಾಳೆ.
ಆದರೆ ಅಮೃತಾಳ ಪ್ರೀತಿಗೆ ಮನೆಯವರ ವಿರೋಧ ವಿತ್ತು. ಹೀಗಾಗಿ ಕೊಲೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಮೃತಗಾಗಿ ಶೋಧ ಮುಂದುವರಿದಿದೆ.
Published On - 9:30 am, Tue, 4 February 20