ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ದರೋಡೆಕೋರರು ಅರೆಸ್ಟ್

[lazy-load-videos-and-sticky-control id=”2-ATdNH9wgw”]ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಕಾಂತ್(20), ಆನಂದ್(20), ರಾಕೇಶ್(21) ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳಾದ ಚಂದ್ರಕಾಂತ್, ಸತೀಶ್ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ 7 ಗಂಟೆ ಸಮಯಕ್ಕೆ ಹೆಸರಘಟ್ಟ ಕೆರೆ ಸಮೀಪ ಈ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸೋಲದೇವನಹಳ್ಳಿ ಠಾಣೆಯ PSI, ಕಾನ್ಸ್‌ಟೇಬಲ್ ಸ್ಥಳಕ್ಕೆ ತೆರಳಿದ್ರು. ಇವರನ್ನು ಬಂಧಿಸಲು ಮುಂದಾದ್ರು. ಆಗ ಸ್ಥಳಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಲಾಂಗ್, ಡ್ಯಾಗರ್, ಚಾಕು ಹಾಗೂ ದೊಣ್ಣೆಗಳನ್ನು […]

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ದರೋಡೆಕೋರರು ಅರೆಸ್ಟ್
Edited By:

Updated on: Jul 09, 2020 | 12:50 PM

[lazy-load-videos-and-sticky-control id=”2-ATdNH9wgw”]ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಕಾಂತ್(20), ಆನಂದ್(20), ರಾಕೇಶ್(21) ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳಾದ ಚಂದ್ರಕಾಂತ್, ಸತೀಶ್ ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ 7 ಗಂಟೆ ಸಮಯಕ್ಕೆ ಹೆಸರಘಟ್ಟ ಕೆರೆ ಸಮೀಪ ಈ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸೋಲದೇವನಹಳ್ಳಿ ಠಾಣೆಯ PSI, ಕಾನ್ಸ್‌ಟೇಬಲ್ ಸ್ಥಳಕ್ಕೆ ತೆರಳಿದ್ರು. ಇವರನ್ನು ಬಂಧಿಸಲು ಮುಂದಾದ್ರು. ಆಗ ಸ್ಥಳಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಲಾಂಗ್, ಡ್ಯಾಗರ್, ಚಾಕು ಹಾಗೂ ದೊಣ್ಣೆಗಳನ್ನು ಹಿಡಿದಿದ್ದ ಈ ಗ್ಯಾಂಗ್ ಹಲ್ಲೆಗೆ ಯತ್ನಿಸಿದೆ.

PSI ವಸಂತ್ ಕುಮಾರ್ ಮತ್ತು ಪೇದೆ ಇಮಾಮ್ ಸಾಬ್ ಮೇಲೆ ಹಲ್ಲೆಗೆ ಮುಂದಾಗಿದೆ. ಆರೋಪಿ ಆನಂದ್ ಎಂಬಾತ ಕಾನ್ಸ್‌ಟೇಬಲ್ ಇಮಾಮ್ ಸಾಬ್ ಮೇಲೆ ಲಾಂಗ್ ಬೀಸಿದ್ದ. ಅದೃಷ್ಟವಶಾತ್ ಕಾನ್ಸ್‌ಟೇಬಲ್ ಬಚಾವ್ ಆಗಿದ್ದಾರೆ. ನಂತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:35 am, Thu, 9 July 20