ಹೈದರಾಬಾದ್: ತೆಲಂಗಾಣದ (telangana) ರಂಗರೆಡ್ಡಿ ಜಿಲ್ಲೆಯ ದೋಂತನಪಾಳ್ಯದಲ್ಲಿರುವ ಹಾಸ್ಟೆಲ್ಗೆ (Hostel) ನುಗ್ಗಿ ವಿದ್ಯಾರ್ಥಿಗೆ (Student) ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡು ಒಂದನೇ ವರ್ಷದ ಎಲ್‌ಎಲ್‌ಬಿ ಓದುತ್ತಿರುವ ಹಿಮಾಂಕ್ ಬನ್ಸಾಲ್ಗೆ ಥಳಿಸಿದ್ದಾರೆ. ಅಲ್ಲದೇ “ಅಲ್ಲಾ ಹು ಅಕ್ಬರ್” ಕೂಗುವಂತೆ ಹಲ್ಲೆಕೋರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಿಮಾಂಕ್ ಬನ್ಸಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಹಲ್ಲೆಗೊಳಗಾದ ಹಿಮಾಂಕ್ ಶಂಕರಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಧೋಂತನಪಲ್ಲಿಯ ಐಬಿಎಸ್ ಕಾಲೇಜು ಹಾಸ್ಟೆಲ್‌ನಲ್ಲಿ ಇರುವಾಗ 20ಕ್ಕೂ ಹೆಚ್ಚು ಜನರು ನುಗ್ಗಿ ಬಂದು ಥಳಿಸಿದ್ದಾರೆ. ಅಲ್ಲದೇ ಅಲ್ಲಾಹು ಅಕ್ಬರ್ ಎಂದು ಕೂಗಲು ಒತ್ತಾಯಿಸಿದ್ದಾರೆ ದೂರಿನಲ್ಲಿ ಆರೋಪಿಸಿದ್ದಾರೆ.
Hyderabad: Hindu Law student Himank Bansal, Student, was brutally beaten and forced to chant ‘Allah Hu Akbar” in IBS campus by Muslims.
Will this be covered as #Islamophobia_in_india by @AJEnglish @BBCWorld @trtworld ?pic.twitter.com/LVaJnELxz9
— Arun Pudur ?? (@arunpudur) November 12, 2022
ಹಿಮಾಂಕ್ ಬನ್ಸಾಲ್ ನೀಡಿದ ದೂರಿನ ಅನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 342, 450, 323 ಮತ್ತು 506 (ಬೆದರಿಕೆ), ಸೆಕ್ಷನ್ 149 ಮತ್ತು ಸೆಕ್ಷನ್ 4(4) I), (II), ಮತ್ತು (III) ರ್ಯಾಗಿಂಗ್ ನಿಷೇಧ ಕಾಯಿದೆ 2011 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
A case was registered on 11.11.2022 by Shankarpally PS, agansit the culprits under the provisions of 307, 342, 450, 323, 506, R/W 149, IPC and Sec 4(I), (II), and (III) of the Prohibition of Raising Act of 2011. The action is being taken.
No illegal acts are tolerated.
— Cyberabad Police (@cyberabadpolice) November 12, 2022
ದೂರುದಾರ (ಹಿಮಾಂಕ್ ಬನ್ಸಾಲ್) ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್ನಲ್ಲಿ ಅವಮಾನಿಸಿದ್ದಾನೆ. ಅವಳು ಈ ಬಗ್ಗೆ ತನ್ನ ಸ್ನೇಹಿತರಿಗೆ ತಿಳಿಸಿದ್ದಾಳೆ. ಇದರಿಂದ ಗುಂಪುಗೂಡಿ ಬಂದು ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರ ಪೈಕಿ ಈಗಾಗಲೇ 10 ಮಂದಿಯನ್ನು ನಮ್ಮ ಪೊಲೀಸರು ಗುರುತಿಸಿದ್ದು, ತನಿಖೆ ಆರಂಭಿಸಿದ್ದಾರೆ. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:50 pm, Sat, 12 November 22