ಬೆಂಗಳೂರು: ನಗರದ ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ಕಟಾವ್ಕರ್(53) ಶವ (dead body) ಪತ್ತೆಯಾಗಿದೆ. ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಇದ್ದರು. ಫೋನ್ ರಿಸೀವ್ ಮಾಡದ ಕಾರಣ ಮನೆಯವರು ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿಗೆ ಎಸ್.ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ, ಕಲಬುರಗಿಯ ಪಿಟಿಸಿ ಉಪ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದೆ.
ಅಂದರ್ ಬಾಹರ್ ಆಡುತ್ತಿದ್ದ ಗ್ಯಾಂಗ್ ಅಂದರ್!
ಆನೇಕಲ್: ಚಂದಾಪುರದ ಲಕ್ಷ್ಮಿಸಾಗರದ ಬಳಿ ಜೂಜಾಟ ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ಮಾಡಿ ಹೆಬ್ಬಗೋಡಿಯ ನಾಗರಾಜ್, ಅತ್ತಿಬೆಲೆ ಗೋಪಿ, ಶ್ರೀನಿವಾಸ್, ಶಂಕರ್ ಸೇರಿದಂತೆ ಹಲವರ ಬಂಧನ ಮಾಡಲಾಗಿದೆ. ಬಂಧಿತರಿಂದ 5 ಲಕ್ಷ ನಗದು, 5 ಮೊಬೈಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಕರಾಮತ್ತು; ಹಾಡಹಗಲೇ ಸೀರೆ ಅಂಗಡಿಯಲ್ಲಿ ಕಳ್ಳತನ:
ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. ಹಾಡಹಗಲೇ ಸೀರೆ ಅಂಗಡಿಯಲ್ಲಿ ಲಾಕರ್ ನಲ್ಲಿದ್ದ 10 ಲಕ್ಷ ನಗದು, ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ. ಪ್ರತಾಪ್ ರಾಮ್ ಎಂಬುವವರ ಮಾಲೀಕತ್ವದ ಹನುಮಾನ್ ಸಿಲ್ಕ್ಸ್ ಶಾಪ್ನನಲ್ಲಿ ಈ ಕಳವು ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಶಾಂತ್ ಕಾಂಪೆಕ್ಸ್ ನಲ್ಲಿ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಕೆಲಸಗಾರ ಅಂಗಡಿಗೆ ಬೀಗ ಹಾಕಿ, ಊಟಕ್ಕೆ ತೆರಳಿದ್ದ. ಆ ವೇಳೆ ರಾಡ್ ನಿಂದ ಶಟರ್ ಮುರಿದು ಕಳ್ಳತನ ಮಾಡಲಾಗಿದೆ. ಲಾಕರ್ ನಲ್ಲಿದ್ದ 10 ಲಕ್ಷ ನಗದು ಮತ್ತು ಬೆಳ್ಳಿ ಆಭರಣ ಕಳವು ಮಾಡಲಾಗಿದೆ. ಪರಿಚಯಸ್ಥರೇ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಶೀಘ್ರದಲ್ಲೇ ಭಾರತೀಯ ರಸ್ತೆಗಳಲ್ಲಿ ಓಡಾಡಲಿದೆ ಒಲೆಕ್ಟ್ರಾ ಹೆವಿ-ಡ್ಯೂಟಿ ಎಲೆಕ್ಟ್ರಿಕ್ ಟ್ರಕ್
ಜಮ್ಮು ಕಾಶ್ಮೀರದಲ್ಲಿ ಸರಪಂಚ್ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಉಗ್ರರು