ಬೆಂಗಳೂರು: ನಗರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ ಪ್ರಕರಣ (Suspected Talib detention case) ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ (VHP) ದೂರು (complaint) ನೀಡಿದೆ. ತಾಲೀಬ್ ಹುಸೇನ್ ನೆಲೆಸಿದ್ದ ಮಸೀದಿಯನ್ನು ಸೀಜ್ ಮಾಡಬೇಕು, ಸಿಮ್ ಕಾರ್ಡ್ ನೀಡಿದವರಿಗೆ ಹಾಗೂ ಆತನಿಗೆ ಆಶ್ರಯ ಕಲ್ಪಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವಿಎಚ್ಪಿ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗೂ ಶಿವಕುಮಾರ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿದ್ದ ಆರೋಪ: ಶಂಕಿತ ಉಗ್ರ ತಾಲಿಬ್ ನಡೆಸಿದ್ದ ಉಗ್ರಗಾಮಿ ಚಟುವಟಿಕೆಗಳ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಏನೇನು ಭಯೋತ್ಪಾದಕ ಚಟುವಟಿಕೆಗಳು ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು. ಹಿಂದೂಗಳ ಹಬ್ಬದಲ್ಲಿ ಅನುಮತಿ ಪಡೆಯಲು ಸಾಕಷ್ಟು ಒದ್ದಾಡಬೇಕು. ಆದರೆ ಮುಸ್ಲಿಮರ ಹಬ್ಬಗಳಲ್ಲಿ ಯಾವುದೇ ಅನುಮತಿ ಪಡೆಯದೆ ಆಚರಣೆ ಮಾಡಲಾಗುತ್ತಿದೆ. ರಂಜಾನ್ ಹಬ್ಬದಂದು ನಿಯಮ ಉಲ್ಲಂಘನೆ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಮನಿವಿ ಮಾಡಿದ್ದಾರೆ.
ನಮಾಜ್ ಮಾಡಬೇಡಿ ಎಂದು ಹೇಳುತ್ತಿಲ್ಲ, ಅದೆಲ್ಲವೂ ನಿಗದಿತ ಸ್ಥಳಗಳಲ್ಲಿ ಮಾಡಿಕೊಳ್ಳಲಿ. ಸಾರ್ವಜನಿಕರಿಗೆ ತೊಂದರೆ ನೀಡಿ ಹಬ್ಬ ಆಚರಣೆ ಮಾಡುವುದು ಬೇಡ. ರಂಜಾನ್ ದಿನವೂ ಕೂಡ ಯಾವುದೆ ಅನುಮತಿ ಪಡೆಯದೆ ರಸ್ತೆಗಳನ್ನ ಬ್ಲಾಕ್ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ತಿಂಗಳ ಬಕ್ರೀದ್ ವೇಳೆ ಅನುಮತಿ ಇಲ್ಲದೆ ರಸ್ತೆಗಳನ್ನ ಬ್ಲಾಕ್ ಮಾಡಿಸಬೇಡಿ ಎಂದು ಹಿಂದೂ ಸಂಘಟನೆಯ ಮುಖಂಡ ಗೋವರ್ಧನ್ ಹೇಳಿಕೆ ನೀಡಿದ್ದಾರೆ.
ಲೌಡ್ ಸ್ಪೀಕರ್ಗೆ ಅನುಮತಿ ಕೊಡಬೇಡಿ. ಕಾಯ್ದೆಯಲ್ಲಿ ಏನಿದೆಯೋ ಹಾಗೆ ಅನಮತಿ ನೀಡಬೇಕು. ಈಗಾಗಲೆ ಧ್ವನಿವರ್ಧಕಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿದೆ. ಆದೇಶದ ಪ್ರಕಾರ ಅನುಮತಿಯನ್ನ ನೀಡಲಿ. ಡೆಸಿಬಲ್ ಎಷ್ಟಿರಬೇಕು ಅದರ ಎತ್ತರ ಎಷ್ಟು ಎಂಬುದರ ಬಗ್ಗೆ ಈಗಾಗಲೆ ನ್ಯಾಯಾಲಯ ಸೂಚನೆ ನೀಡಿದೆ. ಅದರಂತೆ ಅನುಮತಿ ನೀಡಲಿ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಜಮ್ಮು ಕಾಶ್ಮೀರದಿಂದ ಬೆಂಗಳೂರಿನ ಶ್ರೀರಾಮಪುರಕ್ಕೆ ಬಂದ ತಾಲಿಬ್, ತನ್ನ ಹೆಸರು ಬದಲಾಯಿಸಿಕೊಂಡು ಮಸೀದಿ ಪಕ್ಕ ಯಾರಿಗೂ ಅನುಮಾನ ಬಾರದಂತೆ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿದ್ದನು. ಈತ ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಶಂಕೆಯೂ ವ್ಯಕ್ತವಾಗಿದ್ದು, ಓಕಳಿಪುರಂ ನಿವಾಸಿಯಾದ ಮೌಸೀನ್ ಎಂಬಾತ ತಾಲೀಬ್ಗೆ ಸಿಮ್ ಕಾರ್ಡ್ ಕೊಡಿಸಿದ್ದಾನೆ ಎನ್ನಲಾಗುತ್ತಿದೆ. ಮಂಗಳವಾರ ಜಮ್ಮು ಕಾಶ್ಮೀರದ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ