ಬೆಂಗಳೂರು: ರಾಜ್ಯದಲ್ಲಿ ಶಂಕಿತ ಉಗ್ರರಿಬ್ಬನ್ನು ಬಂಧಿಸಿದ ನಂತರ ಮೂರನೇ ಶಂಕಿತ ತೀರ್ಥಹಳ್ಳಿಯ ಶಾರಿಕ್ ಬಂಧನ ಮಾಡುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಏಕೆಂದರೆ ಎರಡು ವರ್ಷಗಳಿಂದ ಸುಳಿವೇ ಸಿಗದಂತೆ ನಾಪತ್ತೆಯಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಮತೀನ್ ಹಾದಿಯನ್ನು ಹಿಡಿದನೇ ತೀರ್ಥಹಳ್ಳಿಯ ಶಾರಿಕ್ ತುಳಿದಿರುವ ಶಂಕೆ ವ್ಯಕ್ತವಾಗಿದೆ. ಉಗ್ರ ಸಂಘಟನೆಯಲ್ಲಿ ಕೈಜೋಡಿಸಿರುವ ಆರೋಪ ಹೊತ್ತಿರುವ ಶಾರಿಕ್ ಕೂಡ ನಾಪತ್ತೆಯಾಗಿದ್ದಾನೆ. ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ಜಬಿ ಪೊಲೀಸರ ಬಲೆಗೆ ಬೀಳುತಿದ್ದಂತೆ ಎಚ್ಚೆತ್ತಿದ್ದ ಶಾರಿಖ್, ಬಟ್ಟೆ ಖರೀದಿಸಲು ದೆಹಲಿಗೆ ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾನೆ. ಶಾರಿಕ್ ಎಲ್ಲಿಗೆ ಹೋಗಿದ್ದಾನೆ ಎಂಬ ಮಾಹಿತಿ ಯಾರೊಬ್ಬರಿಗೂ ಗೊತ್ತಿಲ್ಲ. ಹೀಗಾಗಿ ಮತೀನ್ನಂತೆಯೇ ಶಾರಿಕ್ ಕೂಡ ಭೂಗತನಾದನೆ ಎಂಬ ಅನುಮಾನ ಪೊಲೀಸರಿಗೆ ಕಾಡತೊಡಗಿದೆ.
ನಾಪತ್ತೆಯಾಗಿರುವ ಶಾರಿಕ್ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಶಾರಿಕ್ ಉಪಯೋಗಿಸುತ್ತಿದ್ದ ಕಾರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಅದನ್ನು ಜಪ್ತಿ ಮಾಡಿದ್ದಾರೆ. ಜಬೀ ಬಂಧನದ ನಂತರ ತನ್ನು ಮನೆ ಮುಂದೆ ಪೊಲೀಸ್ ಜೀಬ್ ಬಂದು ನಿಲ್ಲತ್ತದೆ ಎಂಬುದನ್ನು ಅರಿತ ಶಾರಿಕ್, ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ದೆಹಲಿ, ಕೇರಳ ಅಥವಾ ಗಲ್ಫ್ ರಾಷ್ಟ್ರಗಳಿಗೆ ಹೋಗಿರು ಸಾಧ್ಯತೆ ಇದೆ.
ತರಬೇತಿ, ವಿಧ್ವಂಸಕ ಕೃತ್ಯಗಳಿಗೆ ಕಾರು ಬಳಕೆ
ಪೊಲೀಸರು ಜಪ್ತಿ ಮಾಡುತ್ತಿದ್ದ ಕಾರನ್ನು ಕೇವಲ ಶಾರಿಕ್ ಮಾತ್ರವಲ್ಲದೆ ಬಂಧಿತ ಶಂಕಿತರ ಉಗ್ರರಾದ ಮಾಜ್, ಯಾಸಿನ್ ಕೂಡ ಬಳಕೆ ಮಾಡುತ್ತಿದ್ದರು. ಅದರಂತೆ ಉಗ್ರ ತರಬೇತಿ, ವಿಧ್ವಂಸಕ ಕೃತ್ಯ ಇತರೆ ಚಟುವಟಿಕೆಗಳಿಗೆ ಶಂಕಿತರ ಉಗ್ರರು ಇದೇ ಕಾರನ್ನು ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಸಿಪಿಐ ಅಭಯ್ ಪ್ರಕಾಶ್ ನೇತೃತ್ವದಲ್ಲಿ ಇಬ್ಬರು ಶಂಕಿತ ಉಗ್ರರರನ್ನು ಠಾಣೆ ಹೊರಗೆ ಕರೆದು ಸಸ್ಥಳ ಮಹಜರು ಮಾಡಲಾಗುತ್ತಿದೆ.
ಡಾರ್ಕ್ ವೆಬ್ ಬಳಕೆಯಲ್ಲಿ ಮತೀನ್ ಪಂಟರ್
ಮೋಸ್ಟ್ ವಾಂಟೆಡಡ್ ಉಗ್ರ ಮತೀನ್ ವಿವಿಧ ದೇಶಗಳ ಉಗ್ರರನ್ನು, ವಿವಿಧ ರಾಜ್ಯದಲ್ಲಿನ ಉಗ್ರರನ್ನು ಹಾಗೂ ಸಹಚರರನ್ನು ಸಂಪರ್ಕ ಸಾಧಿಸಲು ಕರಾಳ ಡಾರ್ಕ್ ವೆಬ್ ಅನ್ನು ಬಳಕೆ ಮಾಡುತ್ತಿದ್ದನು ಎಂಬ ಅನುಮಾನ ಪೊಲೀಸರಿಗೆ ದಟ್ಟವಾಗಿದೆ. ಎರಡು ವರ್ಷದಿಂದ ನಾಪತ್ತೆಯಾಗಿರುವ ಮತೀನ್ ಯಾರನ್ನೂ ಸಂಪರ್ಕ ಮಾಡದೆ ಇರಲು ಸಾಧ್ಯವಿಲ್ಲ. ಹೀಗಾಗಿ ಡಾರ್ಕ್ ವೆಬ್ ಬಳಕೆ ಅನುಮಾನ ಹುಟ್ಟುಹಾಕಿದೆ. ಮಲೆನಾಡಿನ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿರುವ ಮತೀನ್ ಡಾರ್ಕ್ ವೆಬ್ ಮೂಲಕವೇ ಸಂಪರ್ಕ ಸಾಧಿಸಿ ಸಂಘಟನೆ ಬಲಪಡಿಸುತ್ತಿರಬಹದು ಎಂಬ ಅನುಮಾನ ಕೂಡ ಇದೆ. ಅಷ್ಟೇ ಅಲ್ಲದೆ ಉಗ್ರ ಸಂಘಟನೆಗೆ ಸೇರುವ ಯುವಕರಿಗೆ ಮನೀನ್ ಡಾರ್ಕ್ ವೆಬ್ ಬಳಕೆ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾನೆ ಎನ್ನಲಾಗುತ್ತಿದೆ.
ಪಾಕ್ ಬಗ್ಗೆ ಹೆಚ್ಚು ಸರ್ಚ್ ಮಾಡಿದ ಯಾಸೀನ್
ಶಿವಮೊಗ್ಗ ಪೊಲೀಸರು ಶಂಕಿತ ಉಗ್ರ ಯಾಸೀನ್ನನ್ನು ಬಂಧಿಸಿದ ಕೂಡಲೇ ಆತ ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಂಧಿತ ಯಾಸೀನ್ ಪಾಕ್ಗೆ ಹೋಗಿ ಬಂದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅಲ್ಲದೆ ಅತಿ ಹೆಚ್ಚು ಬಾರಿ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಬಗ್ಗೆ ಹುಡುಕಾಟ ನಡೆಸಿದ್ದಾನೆ. ಅದರಂತೆ ಯಾಸೀನ್ ಪಾಕ್ ದೇಶಕ್ಕೆ ಹೋಗಿದ್ದರೆ ಯಾವ ಉದ್ದೇಶಕ್ಕೆ ಹೋಗಿದ್ದ? ಅಲ್ಲಿ ಯಾರನ್ನು ಭೇಟಿಯಾಗಿದ್ದ? ಭೇಟಿಯಾಗಿದ್ದರೆ ಅವರಿಗೂ ಯಾಸೀನ್ಗೂ ಏನು ಸಂಬಂಧ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಬೇರೆ ದೇಶದ ಸರ್ವರ್ ಹೊಂದಿದ್ದ ಆ್ಯಪ್ ಬಳಕೆ
ಶಂಕಿತ ಉಗ್ರರು ಬೇರೆ ದೇಶದ ಸರ್ವರ್ ಹೊಂದಿದ್ದ ಆ್ಯಪ್ ಬಳಸುತ್ತಿದ್ದ ಬಗ್ಗೆ ವಿಚಾರ ತಿಳಿದುಬಂದಿದೆ. ಶಂಕಿತ ಉಗ್ರರಾದ ಮಾಜ್, ಯಾಸೀನ್ ಮೊಬೈಲ್ನಲ್ಲಿ ಈ ಆ್ಯಪ್ ಪತ್ತೆಯಾಗಿದ್ದು, 12ಕ್ಕೂ ಹೆಚ್ಚು ಮೆಸೆಂಜರ್ ಆ್ಯಪ್ಗಳನ್ನು ಉಗ್ರರು ಬಳಕೆ ಮಾಡುತ್ತಿದ್ದರು. ಇದರಲ್ಲಿ ವೈರ್, ಸಿಗ್ನಲ್ ಆ್ಯಪ್ಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಇತರರನ್ನು ಸಂಪರ್ಕ ಸಾಧಿಸಲು ಈ ಆ್ಯಪ್ಗಳ ಮೂಲವೇ ಸಾಧಿಸುತ್ತಿದ್ದರು. ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಬೇರೆ ದೇಶದ ಸರ್ವರ್ ಹೊಂದಿರುವ ಮೆಸೆಂಜರ್ ಆ್ಯಪ್ಗಳನ್ನು ಶಂಕಿತ ಉಗ್ರರು ಬಳಸುತ್ತಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Fri, 23 September 22