ಚೆನ್ನೈನ ಕೆರೆಯೊಂದರಲ್ಲಿ ರುಂಡವಿಲ್ಲದ ದೇಹ, ಕೈಕಾಲುಗಳು ಪತ್ತೆ

ತಮಿಳುನಾಡಿನ ಕೆರೆಯೊಂದರಲ್ಲಿ ರುಂಡವಿಲ್ಲದ ದೇಹ ಹಾಗೂ ಕೈಕಾಲುಗಳು ಪತ್ತೆಯಾಗಿವೆ. ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರರು ಚೆಂಬರಂಬಕ್ಕಂ ಕೆರೆಯಲ್ಲಿ ಶವವನ್ನು ಕಂಡಿದ್ದಾರೆ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಚೆನ್ನೈ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಸಾಕಷ್ಟು ಹುಡುಕಾಡಿದ ಬಳಿಕ ಕಾಲು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿದೆ.

ಚೆನ್ನೈನ ಕೆರೆಯೊಂದರಲ್ಲಿ ರುಂಡವಿಲ್ಲದ ದೇಹ, ಕೈಕಾಲುಗಳು ಪತ್ತೆ
ಕೆರೆ
Image Credit source: India Today

Updated on: Dec 31, 2023 | 2:09 PM

ತಮಿಳುನಾಡಿನ ಕೆರೆಯೊಂದರಲ್ಲಿ ರುಂಡವಿಲ್ಲದ ದೇಹ ಹಾಗೂ ಕೈಕಾಲುಗಳು ಪತ್ತೆಯಾಗಿವೆ. ಮೀನುಗಾರಿಕೆಗೆಂದು ತೆರಳಿದ್ದ ಮೀನುಗಾರರು ಚೆಂಬರಂಬಕ್ಕಂ ಕೆರೆಯಲ್ಲಿ ಶವವನ್ನು ಕಂಡಿದ್ದಾರೆ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಚೆನ್ನೈ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಸಾಕಷ್ಟು ಹುಡುಕಾಡಿದ ಬಳಿಕ ಕಾಲು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿ ಸುಮಾರು 30 ವರ್ಷ ವಯಸ್ಸಿನವನಾಗಿದ್ದು, ಹೊಟ್ಟೆಯಲ್ಲಿ ಇರಿತದ ಗಾಯವಿದೆ ಎಂದು ತನಿಖೆಯ ಪರಿಚಿತ ಮೂಲಗಳು ತಿಳಿಸಿವೆ.
ಮೃತದೇಹವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಬಂಡೆಗೆ ಕಟ್ಟಿ ಕೆರೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆಗಳು ನಡೆಯುತ್ತಿದ್ದವು.

ಮತ್ತೊಂದು ಘಟನೆ,  ರುಂಡವಿಲ್ಲದ ದೇಹ ಪತ್ತೆ
ಉತ್ತರ ಪ್ರದೇಶದ ಮೀರತ್​ನ ಚರಂಡಿಯೊಂದರಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ತಲೆ ಇಲ್ಲದ ದೇಹ ಕೊಳೆತ ಸ್ಥಿತಿಯಲ್ಲಿತ್ತು.

Mandya News: ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್: ವೇಶ್ಯೆಯನ್ನು ಪ್ರೀತಿಸಿ ಆದ ಸೈಕೋ‌ ಕಿಲ್ಲರ್..!

ಮೀರತ್​ನ ದೌರಾಲಾ ಪೊಲೀಸ್ ಠಾಣೆ ವ್ಯಪ್ತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದ ಹಿಂಭಾಗದ ಚರಂಡಿಯಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿ 20 ವರ್ಷ ಆಸುಪಾಸಿನವರು ಎಂದು ಹೇಳಲಾಗಿತ್ತು. ಸೆಪ್ಟೆಂಬರ್ 10ರಂದು ಘಟನೆ ನಡೆದಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ