ಇನ್​ಸ್ಟಾಗ್ರಾಂ ತ್ರಿಕೋನ ಪ್ರೇಮ: ಪ್ರೇಯಸಿಗಾಗಿ ಮತ್ತೋರ್ವ ಯುವಕನನ್ನು 50 ಬಾರಿ ಇರಿದು ಕೊಲೆ ಮಾಡಿದ ವ್ಯಕ್ತಿ

ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ದೆಹಲಿಯ ಭಾಗೀರಥಿ ವಿಹಾರದಲ್ಲಿ ನಡೆದಿದೆ. ಇದಕ್ಕೆಲ್ಲಾ ತ್ರಿಕೋನ ಪ್ರೇಮವೇ ಕಾರಣ ಎನ್ನಲಾಗಿದೆ. ಒಂದೇ ಯುವತಿಯನ್ನು  ಇಬ್ಬರು ಪ್ರೀತಿಸುತ್ತಿದ್ದರು. ಮೃತರನ್ನು ಮಾಹಿರ್ ಅಲಿಯಾಸ್ ಇಮ್ರಾನ್ ಎಂದು ಗುರುತಿಸಲಾಗಿದೆ. ಹಾಗೂ ಆರೋಪಿ ಅರ್ಮಾನ್ ಖಾನ್ ಇನ್​ಸ್ಟಾಗ್ರಾಂನಲ್ಲಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ಮಾಹಿರ್ ಕೊಲೆಗೆ ಕಾರಣವಾಯಿತು.

ಪೊಲೀಸ್​Image Credit source: News 18
Follow us
ನಯನಾ ರಾಜೀವ್
|

Updated on: Dec 31, 2023 | 10:32 AM

ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ದೆಹಲಿಯ ಭಾಗೀರಥಿ ವಿಹಾರದಲ್ಲಿ ನಡೆದಿದೆ. ಇದಕ್ಕೆಲ್ಲಾ ತ್ರಿಕೋನ ಪ್ರೇಮವೇ ಕಾರಣ ಎನ್ನಲಾಗಿದೆ. ಒಂದೇ ಯುವತಿಯನ್ನು  ಇಬ್ಬರು ಪ್ರೀತಿಸುತ್ತಿದ್ದರು. ಮೃತರನ್ನು ಮಾಹಿರ್ ಅಲಿಯಾಸ್ ಇಮ್ರಾನ್ ಎಂದು ಗುರುತಿಸಲಾಗಿದೆ. ಹಾಗೂ ಆರೋಪಿ ಅರ್ಮಾನ್ ಖಾನ್ ಇನ್​ಸ್ಟಾಗ್ರಾಂನಲ್ಲಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ಮಾಹಿರ್ ಕೊಲೆಗೆ ಕಾರಣವಾಯಿತು.

ದೆಹಲಿಯ ಪಹರ್‌ಗಂಜ್‌ನಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ 21 ವರ್ಷದ ಯುವತಿಯೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ್ದರು. ಇಬ್ಬರ ನಡುವಿನ ಸ್ನೇಹವು ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಅರ್ಮಾನ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

ವೀಡಿಯೊ ಕರೆಯಲ್ಲಿ ಇಬ್ಬರನ್ನು ಕಂಡು ಅರ್ಮಾನ್‌ನ ಅಸೂಯೆ ಉತ್ತುಂಗಕ್ಕೇರಿತು. ಕರೆಯಿಂದ ಕೋಪಗೊಂಡ ಆರೋಪಿ ಮಹಿಳೆಯ ಫೋನ್ ಕಿತ್ತುಕೊಂಡು, ಮಾಹಿರ್​ನನ್ನು ಭೇಟಿಯಾಗದಂತೆ ತಾಕೀತು ಹಾಕಿದ್ದ.

ಇನ್ನಿಬ್ಬರು ಆರೋಪಿಗಳಾದ ಫೈಸಲ್ (21) ಮತ್ತು ಸಮೀರ್ (19) ಜೊತೆ ಸೇರಿ ಮೂವರು ಮಾಹಿರ್ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದರು.

ಮತ್ತಷ್ಟು ಓದಿ:ಶಿವಮೊಗ್ಗ: ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ನಂತರ ಯಾರೋ ನೋಡಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹೊಟ್ಟೆಯ ಮೇಲೆ ಚಾಕುವಿನಿಂದ ಇರಿದ ಗಾಯಗಳಿದ್ದವು. ಸ್ಥಳದಲ್ಲಿ ರಕ್ತಸಿಕ್ತವಾದ ಚಾಕು ಕೂಡ ಪತ್ತೆಯಾಗಿದೆ.

ಖಾನ್ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಮಹಿರ್ ಹತ್ಯೆಯಲ್ಲಿ ಪ್ರಮುಖ ಶಂಕಿತನೆಂದು ಪರಿಗಣಿಸಲಾಗಿದೆ. ಈತ ಮಾಹಿರ್‌ಗೆ ಕನಿಷ್ಠ 50 ಬಾರಿ ಇರಿದಿದ್ದಾನೆ ಎಂದು ಪೊಲೀಸರು ನಂಬಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ