ಶಿವಮೊಗ್ಗ: ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ
ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಬಳಿ ಬಂಧಿಸಲಾಗಿದೆ. 29 ಗಾಂಜಾ ಪ್ಯಾಕೆಟ್, 1 ಮೊಬೈಲ್, 2 ಚಾರ್ಜರ್ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ, ಡಿಸೆಂಬರ್ 29: ಕೈದಿಗಳಿಗೆ ಗಾಂಜಾ (Ganja), ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಬಳಿ ಬಂಧಿಸಲಾಗಿದೆ. 29 ಗಾಂಜಾ ಪ್ಯಾಕೆಟ್, 1 ಮೊಬೈಲ್, 2 ಚಾರ್ಜರ್ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಗಾಂಜಾ, ಮೊಬೈಲ್ ಪ್ಯಾಕ್ ಮಾಡಿ ಹೊರಗಿನಿಂದ ಎಸೆಯಲು ಯತ್ನಿಸಿದ್ದರು.
ಸಿಸಿಕ್ಯಾಮರಾದಲ್ಲಿ ಆರೋಪಿಗಳ ಚಲನವಲನಗಳನ್ನು ಜೈಲು ಸಿಬ್ಬಂದಿ ಗಮನಿಸಿದ್ದರು. ಕೂಡಲೇ ಇಬ್ಬರು ಆರೋಪಿಗಳ ಬೆನ್ನತ್ತಿದ್ದ ಸೆಂಟ್ರಲ್ ಜೈಲಿನ ಸಿಬ್ಬಂದಿ, 2 ಕಿಲೋಮೀಟರ್ ಬೆನ್ನಟ್ಟಿ ಆರೋಪಿಗಳನ್ನು ಹಿಡಿದಿದ್ದಾರೆ.
ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ಮ್ಯಾನ್ ದುರ್ಮರಣ
ಬೆಳಗಾವಿ: ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ಮ್ಯಾನ್ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಕೆಇಬಿ ಆವರಣದಲ್ಲಿ ನಡೆದಿದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್ಮ್ಯಾನ್ ಮೃತ ಆರೋಪ ಮಾಡಲಾಗಿದೆ. ಹುಲಿಕಟ್ಟಿ ಗ್ರಾಮದ ಪ್ರೇಮಾನಂದ ಎಮ್ಮಿ(25) ಮೃತಪಟ್ಟವರು.
ಇದನ್ನೂ ಓದಿ; ಮಂಗಳೂರು: ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲು: ಓರ್ವನ ರಕ್ಷಣೆ
ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೆ ಕಂಬ ಹತ್ತಿಸಿದ್ದರೆಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರೇಮಾನಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆ ಬಳಿ ಲೈನ್ಮ್ಯಾನ್ ಪ್ರೇಮಾನಂದ ಕುಟುಂಬಸ್ಥರ ಜಮಾವಣೆಗೊಂಡಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ: ಗಂಭೀರ ಗಾಯ
ಮಂಡ್ಯ: ಕೆಎಸ್ಆರ್ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಟೆಂಪೋ ಡ್ರೈವರ್ಗೆ ಗಂಭೀರ ಗಾಯವಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮದ ಎಲೆಕೆರೆ ಹ್ಯಾಂಡ್ ಫೋಸ್ಟ್ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು
ಮೈಸೂರು: ತಾಲೂಕಿನ ಹೆಚ್.ಡಿ.ಕೋಟೆ ರಸ್ತೆ ಬಳಿ KSRTC ಬಸ್ಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ. ಕಾರಿನಲ್ಲಿದ್ದ ಬೆಂಗಳೂರಿನ ನಿವಾಸಿಗಳು ಬಚಾವ್ ಆಗಿದ್ದು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.