AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್: ವೇಶ್ಯೆಯನ್ನು ಪ್ರೀತಿಸಿ ಆದ ಸೈಕೋ‌ ಕಿಲ್ಲರ್..!

ಅಪರಿಚಿತ ಮಹಿಳೆಯರಿಬ್ಬರ ಮೃತದೇಹ  ಪತ್ತೆ ಪ್ರಕರಣ ಹಿನ್ನೆಲೆ ಶವಗುರುತು ಪತ್ತೆ ಹಚ್ಚಿ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಈ ಹಿಂದೆ ಮಂಡ್ಯ ಪೊಲೀಸರಿಂದ ಜನರಿಗೆ ಬಂಪರ್ ಆಫರ್ ನೀಡಲಾಗಿತ್ತು.

Mandya News: ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್: ವೇಶ್ಯೆಯನ್ನು ಪ್ರೀತಿಸಿ ಆದ ಸೈಕೋ‌ ಕಿಲ್ಲರ್..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2022 | 7:53 AM

ಮಂಡ್ಯ: ಜಿಲ್ಲೆಯಲ್ಲಿ ರುಂಡವಿಲ್ಲದ ಮೃತದೇಹ (Dead Body) ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದ್ದು, 2 ತಿಂಗಳ ಬಳಿಕ ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ ಬಯಲಾಗಿದೆ. ಸಿಕ್ಕಿದ್ದು 2 ಮೃತದೇಹ ಆದರೆ ಹಂತಕರು ಮಾಡಿದ್ದು 3 ಕೊಲೆ. ವೇಶ್ಯೆ ಪ್ರೀತಿಗೆ ಬಿದ್ದಿದ್ದ ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಪತ್ನಿ ಸಂಬಂಧಿ ಚಂದ್ರಕಲಾ ಜೊತೆ ಲವ್ವಿ ಡವ್ವಿ ನಡೆಸಿದ್ದ. ಪ್ರೇಯಸಿ ಜೊತೆ ವೇಶ್ಯಾವಟಿಕೆ ಲಿಂಕ್‌ನಲ್ಲಿದ್ದು, ಮಹಿಳೆಯರೇ ಈತನ ಟಾರ್ಗೆಟ್. ಚಂದ್ರಕಲಾಗೆ ಹಣ, ಚಿನ್ನಾಭರಣ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆ ಮಾಡಿದ್ದು, ಜೂ.6 ರಂದು ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ  ಮಹಿಳೆಯರಿಬ್ಬರ ಮೃತದೇಹ ಪತ್ತೆಯಾಗಿದ್ದವು. ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರು ಸುಳಿವು ಸಿಕ್ಕಿರಲಿಲ್ಲ. ಸದ್ಯ ಮಂಡ್ಯದ ಶ್ರೀರಂಗಪಟ್ಟಣ ಪೊಲೀಸರಿಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಲಾಗಿದೆ.

ಇದನ್ನೂ ಓದಿ: Crime News: ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ ಶಿಕ್ಷಕನಿಗೆ 79 ವರ್ಷಗಳ ಜೈಲು ಶಿಕ್ಷೆ..!

ಇತ್ತ ದೇಹದ ಮೇಲ್ಭಾಗ ಸಿಗದೆ, ಮೃತರ ನಾಪತ್ತೆ ಪ್ರಕರಣವೂ ದಾಖಲಾಗದೆ ಕೇಸ್ ಕಗ್ಗಂಟಾಗಿತ್ತು. ಈ ಪ್ರಕರಣ ಭೇದಿಸುವದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜು.25 ರಂದು ಚಾಮರಾಜನಗರದಲ್ಲಿ ದಾಖಲಾದ ಮಿಸ್ಸಿಂಗ್‌ ಕೇಸ್​ನಿಂದ ಸದ್ಯ ಪ್ರಕರಣ ಬಯಲಾಗಿದೆ. ಜು.3 ರಂದು ನಾಪತ್ತೆಯಾದ ಮಹಿಳೆ ಕುರಿತು ಜು.25 ರಂದು ದೂರು ನೀಡಲಾಗಿದೆ. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ. ಮೇ 30 ರಂದು ಚಿತ್ರದುರ್ಗ ಮೂಲದ ಮಹಿಳೆ ಕೊಲೆಯಾಗಿದ್ದು, ಜು.3 ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯನ್ನು ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿದೆ. ರುಂಡ ಮುಂಡ ಬೇರ್ಪಡಿಸಿ ಹಂತಕರು ಎಸೆದಿದ್ದರು. ಚಾಮರಾಜನಗರ ಮೂಲದ ಮಹಿಳೆ ನಾಪತ್ತೆ ಪ್ರಕರಣ ಬಳಿಕ ಕೊಲೆ ರಹಸ್ಯ ಬಯಲಾಗಿದೆ. 2 ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಓರ್ವ ಮಹಿಳೆಯನ್ನು ರಾಕ್ಷಸರು ಕೊಲೆಗೈದಿದ್ದರು. ವಿಚಾರಣೆಯಲ್ಲಿ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್ ಬಗ್ಗೆ ಪಾಪಿಗಳು ಬಾಯ್ಬಿಟ್ಟಿದ್ದಾರೆ.

ಸುಳಿವು ಕೊಟ್ಟವರಿಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಹುಮಾನ 

ಅಪರಿಚಿತ ಮಹಿಳೆಯರಿಬ್ಬರ ಮೃತದೇಹ  ಪತ್ತೆ ಪ್ರಕರಣ ಹಿನ್ನೆಲೆ ಶವಗುರುತು ಪತ್ತೆ ಹಚ್ಚಿ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಈ ಹಿಂದೆ ಮಂಡ್ಯ ಪೊಲೀಸರಿಂದ ಜನರಿಗೆ ಬಂಪರ್ ಆಫರ್ ನೀಡಲಾಗಿತ್ತು. ಪ್ರತ್ಯೇಕ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಶವ ಪತ್ತೆಯಾಗಿತ್ತು. ಪಾಂಡವಪುರ ವ್ಯಾಪ್ತಿಯ ಬೇಬಿ ಗ್ರಾಮದ ನಾಲೆಯಲ್ಲಿ ಒಂದು ಶವ ಪತ್ತೆಯಾದರೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಇನ್ನೊಂದು ಶವ ಪತ್ತೆಯಾಗಿತ್ತು. ಎರಡು ಮೃತದೇಹಗಳು ಒಂದೇ ಮಾದರಿಯಲ್ಲಿ ಪತ್ತೆಯಾಗಿದ್ದು, ಒಂದೇ ರೀತಿ ಹತ್ಯೆಗೈದು ಮೃತದೇಹ ಪ್ರತ್ಯೇಕವಾಗಿ ಎಸೆಯಲಾಗಿತ್ತು. ಎಷ್ಟೇ ಹುಡುಕಾಡಿದರು ಶವಗಳ ಗುರುತು ಪತ್ತೆಯಾಗದ ಹಿನ್ನೆಲೆ ಜಿಲ್ಲೆಯ ಜನತೆಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಂಪರ್ ಆಫರ್ ಘೋಷಣೆ ಮಾಡಲಾಗಿತ್ತು.

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ