ಅರಣ್ಯ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ನಾಗಮಂಗಲ ಶಾಸಕ ಸುರೇಶ್ ಗೌಡ ವಿರುದ್ಧ ಆರೋಪ
ನಿರಂತರ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಹಲವು ಕಡೆ ಪ್ರವಾಹ ಭೀತಿ ಎದುರಾಗಿದೆ. ಸಂಗಮದ ಸ್ನಾನಘಟ ಮುಳುಗಡೆಯಾಗಿದ್ದು, ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಮಂಡ್ಯ: ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ಶಾಸಕ ನಿಂದಿಸಿರುವಂತಹ ಘಟನೆ ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದೆ. ನಾಗಮಂಗಲ ಶಾಸಕ ಸುರೇಶ್ ಗೌಡ (MLA Suresh Gowda) ಅಧಿಕಾರಿಗಳ ವಿರುದ್ಧ ಅಸಭ್ಯ ಪದ ಬಳಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಜಮೀನು ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಘರ್ಷಣೆ ಉಂಟಾಗಿದೆ. ಸರ್ವೆ ನಂ 135ರಲ್ಲಿ ಅರಣ್ಯ ಇಲಾಖೆ ನೆಡು ತೋಪು ಬೆಳೆಸಿದೆ. ಅದೇ ಜಮೀನಿಗಾಗಿ ರೈತರು ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿದ್ದರು. ಜಮೀನು ವಶಪಡಿಸಿಕೊಳ್ಳಲು ಬಂದ ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನಗೊಂಡಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ರೈತರನ್ನು ಅಧಿಕಾರಿಗಳು ಬೆದರಿಸಿದ್ದಾರೆ. ಅಧಿಕಾರಿಗಳ ವರ್ತನೆಗೆ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಅವಾಚ್ಯ ಶಬ್ದಗಳಿಂದ ಬೈದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ; Prostate Cancer: ಪುರುಷರಲ್ಲಿ ಈ ರೋಗ ಲಕ್ಷಣಗಳು ಪ್ರಾಸ್ಟೇಟ್ ಕ್ಯಾನ್ಸರ್ ಸಂಕೇತವಾಗಿರಬಹುದು, ಇರಲಿ ಎಚ್ಚರ
ಸಂಗಮ ಕ್ಷೇತ್ರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ನಿರಂತರ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಹಲವು ಕಡೆ ಪ್ರವಾಹ ಭೀತಿ ಎದುರಾಗಿದೆ. ಸಂಗಮದ ಸ್ನಾನಘಟ ಮುಳುಗಡೆಯಾಗಿದ್ದು, ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಕಳೆದ 15 ದಿನಗಳ ಹಿಂದೆ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ. ಈ ಕಾರಣದಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಸಂಗಮ ಸ್ಥಳಕ್ಕೆ ಬಾರದಂತೆ ಬ್ಯಾರಿಕೇಡ್ ಹಾಕಲಾಗಿದೆ. ಸಂಗಮದಲ್ಲಿ ಪ್ರತಿ ನೂರಾರು ಜನರು ಬಂದು ಅಸ್ಥಿ ವಿಸರ್ಜನೆ ಮಾಡುತ್ತಿದ್ರು. ಈ ಕಾರಣದಿಂದ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಆದರೂ ಪ್ರವಾಹದ ನಡುವೆಯು ನದಿ ಬಳಿ ಬಂದು ಅಸ್ಥಿ ವಿಸರ್ಜನೆಗೆ ಜನರು ಮುಂದಾಗಿದ್ದಾರೆ.
ಧುಮ್ಮಿಕ್ಕುತ್ತಿದೆ ಬೆಂಕಿ ಫಾಲ್ಸ್!
ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಹಿನ್ನೆಲೆ ಗಾಣಾಳು ಫಾಲ್ಸ್ನಲ್ಲಿ ಜಲ ವೈಭವ ಕಂಡುಬಂತು. ನದಿಯಲ್ಲಿ ನೀರು ಹೆಚ್ಚಾಗಿರೋದ್ರಿಂದ ಗಾಣಾಳು ಫಾಲ್ಸ್ ಕಳೆಗಟ್ಟಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್. ಶಿಂಷಾ ನದಿಯಲ್ಲಿ ನೀರು ಹೆಚ್ಚಾದ್ರೆ ಮಾತ್ರ ಗಾಣಾಳು ಫಾಲ್ಸ್ ಕಳೆಗಟ್ಟುತ್ತದೆ. ಈ ಗಾಣಾಳು ಫಾಲ್ಸ್ ಬೆಂಕಿ ಫಾಲ್ಸ್ ಎಂದೇ ಪ್ರಸಿದ್ದಿಯಾಗಿದೆ. ಮಣ್ಣು ಮಿಶ್ರಿತ ನೀರು ಬರೋದ್ರಿಂದ ಬೆಂಕಿ ಫಾಲ್ಸ್ ಎಂದು ಫೇಮಸ್ ಆಗಿದೆ. ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕಿರುವ ಬೆಂಕಿ ಫಾಲ್ಸ್ ಸೌಂದರ್ಯ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನೂ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳವಾಗಿರುವ ಗೋಸಾಯಿ ಘಾಟ್ ಮುಳುಗಡೆ ಹಂತ ತಲುಪಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.