ಮಂಡ್ಯ: ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ ಬೆಂಕಿ ಫಾಲ್ಸ್!

ಮಂಡ್ಯ: ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ ಬೆಂಕಿ ಫಾಲ್ಸ್!

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 05, 2022 | 11:47 AM

ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳವಾಗಿರುವ ಗೋಸಾಯಿ ಘಾಟ್​ ಮುಳುಗಡೆ ಹಂತ ತಲುಪಿದೆ.

ಮಂಡ್ಯ: ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಹಿನ್ನೆಲೆ ಗಾಣಾಳು ಫಾಲ್ಸ್​​ನಲ್ಲಿ ಜಲ ವೈಭವ ಕಂಡುಬಂತು. ನದಿಯಲ್ಲಿ ನೀರು ಹೆಚ್ಚಾಗಿರೋದ್ರಿಂದ ಗಾಣಾಳು ಫಾಲ್ಸ್ ಕಳೆಗಟ್ಟಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್. ಶಿಂಷಾ ನದಿಯಲ್ಲಿ ನೀರು ಹೆಚ್ಚಾದ್ರೆ ಮಾತ್ರ ಗಾಣಾಳು ಫಾಲ್ಸ್ ಕಳೆಗಟ್ಟುತ್ತದೆ. ಈ ಗಾಣಾಳು ಫಾಲ್ಸ್ ಬೆಂಕಿ ಫಾಲ್ಸ್ ಎಂದೇ ಪ್ರಸಿದ್ದಿಯಾಗಿದೆ. ಮಣ್ಣು ಮಿಶ್ರಿತ ನೀರು ಬರೋದ್ರಿಂದ ಬೆಂಕಿ ಫಾಲ್ಸ್ ಎಂದು ಫೇಮಸ್ ಆಗಿದೆ. ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕಿರುವ ಬೆಂಕಿ ಫಾಲ್ಸ್​​ ಸೌಂದರ್ಯ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನೂ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳವಾಗಿರುವ ಗೋಸಾಯಿ ಘಾಟ್​ ಮುಳುಗಡೆ ಹಂತ ತಲುಪಿದೆ.

ಇದನ್ನೂ ಓದಿ: ಹಾಸನ: ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಾಲಕ ಸಾವು: ಲಕ್ಷಾಂತರ ರೂ. ಮೌಲ್ಯದ ಗುಲಾಬಿ, ಟೊಮ್ಯಾಟೊ ನಾಶ

ಧಾರ್ಮಿಕ ಸ್ಥಳ ಹಾಗೂ ಸಿನಿಮಾ ಚಿತ್ರಿಕರಣ ಸ್ಥಳವಾಗಿದ್ದರಿಂದ ಸಾಕಷ್ಟು ಹೆಸರುವಾಸಿಯಾಗಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಸದ್ಯ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಗೋಸಾಯ್ ಘಾಟ್ ಬಳಿ ಮಂಟಪ ಹಾಗೂ ದೇವಾಲಯಗಳಿಗೆ, ಮತ್ತೊಂದು‌ ಕಡೆ ನದಿ ಪಾತ್ರದ ಜಮೀನುಗಳಿಗು ನೀರು ನುಗ್ಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Aug 05, 2022 11:46 AM