ಬೀಗಹಾಕಿದ್ದ ಮನೆಗಳೇ ಈ ಕಳ್ಳರ ಟಾರ್ಗೆಟ್​; 49 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸ್

| Updated By: ಗಂಗಾಧರ​ ಬ. ಸಾಬೋಜಿ

Updated on: May 21, 2022 | 11:02 AM

ಬೈಕ್‌ ಸ್ಕಿಡ್ ಆಗಿ ಬಿದ್ದು ಸವಾರ‌ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಕೊಟಗೇರ ಬಳಿ ನಡೆದಿದೆ.

ಬೀಗಹಾಕಿದ್ದ ಮನೆಗಳೇ ಈ ಕಳ್ಳರ ಟಾರ್ಗೆಟ್​; 49 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸ್
49 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸ್
Follow us on

ಬೆಂಗಳೂರು: ಬೀಗಹಾಕಿದ್ದ ಮನೆ ಗುರುತಿಸಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ನಗರದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಮನೆಗಳ್ಳರಿಂದ 49 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 26 ಬಾರಿ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದರೂ ಮತ್ತದೇ ಕಸುಬು ಮುಂದುವರೆಸಿದ್ದರು. ಶ್ರೀನಿವಾಸ ಅಲಿಯಾಸ್ ಕರಾಟೆ ಸೀನ, ಸತೀಶ ಅಲಿಯಾಸ್ ಕೊಕ್ಕರೆ, ರಾಜಣ್ಣ ಅಲಿಯಾಸ್ ಕರಡಿ ಬಂಧಿತರು. ಬೀಗಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​, ಓರ್ವ ಮನೆ ಹೊರಗೆ ನಿಂತು ನೋಡಿಕೊಳ್ಳುತ್ತಿದ್ದರೆ ಇಬ್ಬರಿಂದ ಕೃತ್ಯ ಎಸಗಲಾಗುತ್ತಿತ್ತು. ಕದ್ದ ಚಿನ್ನಾಭರಣ ಮಾರಾಟಮಾಡಿ ಬಂದ ಹಣದಲ್ಲಿ ಮೋಜುಮಸ್ತಿ ಮಾಡುತ್ತಿದ್ದರು. ಸಂಜಯನಗರ, ಕೊಡಿಗೆಹಳ್ಳಿ, ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

ಬೈಕ್‌ ಸ್ಕಿಡ್ ಆಗಿ ಬಿದ್ದು ಸವಾರ‌ ಸ್ಥಳದಲ್ಲೇ ಸಾವು

ಯಾದಗಿರಿ: ಬೈಕ್‌ ಸ್ಕಿಡ್ ಆಗಿ ಬಿದ್ದು ಸವಾರ‌ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಕೊಟಗೇರ ಬಳಿ ನಡೆದಿದೆ. ಗುರುಮಠಕಲ್‌ ತಾಲೂಕಿನ ಚಿಂತಗುಂಟಾ ಗ್ರಾಮದ ಮಹೇಶ್ (22) ಮೃತ ವ್ಯಕ್ತಿ. ಗಂಭೀರವಾಗಿ ಗಾಯಗೊಂಡ ಹಿಂಬದಿ ಸವಾರನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುರುಮಠಕಲ್‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಒಡವೆ ದರೋಡೆ

ಚಿತ್ರದುರ್ಗ: ಮದ್ಯರಾತ್ರಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಒಡವೆ ದರೋಡೆ ಮಾಡಿರುವಂತಹ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದಲ್ಲಿ ನಡೆದಿದೆ. ನಾಲ್ಕು ಜನ ದರೋಡೆಕೋರರಿಂದ ಚಂದ್ರಶೇಖರ್ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಲಾಗಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಲೆಯಲ್ಲಿ ಅಂತ್ಯವಾದ ಗೆಳೆಯರ ಗಲಾಟೆ

ಚಿತ್ರದುರ್ಗ: ಕೂಲಿ ಹಣದ ವಿಚಾರದಲ್ಲಿ ಗೆಳೆಯರಿಬ್ಬರ ನಡುವೆ ಗಲಾಟೆಯಾಗಿದ್ದು, ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಕಾಮನಬಾವಿ ಬಡಾವಣೆಯಲ್ಲಿ ನಡೆದಿದೆ. ಮಹ್ಮದ್ ಅಲಿ(30) ಮೇಲೆ ಇಟ್ಟಿಗೆಯಿಂದ ತೀವ್ರ ಹಲ್ಲೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಹ್ಮದ್ ಅಲಿ ಸಾವನ್ನಪ್ಪಿದ್ದಾನೆ. ನಾಪತ್ತೆಯಾದ ಆರೋಪಿ ಖಾದರ್ ಭಾಷಾ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:41 am, Sat, 21 May 22