ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ.
ಪತಿ ಮೇಲಿನ ದ್ವೇಷಕ್ಕೆ ಪಾಯಲ್ ಸುರೇಖಾ ಅವರನ್ನ ಜಿಮ್ ಟ್ರೈನರ್ ಜೇಮ್ಸ್ ಕೊಲೆ ಮಾಡಿದ್ದ ಎಂಬ ಆರೋಪದ ಮೇಲೆ ಅಂದಿನ ಇನ್ಸ್ ಪೆಕ್ಟರ್ ಕೆ. ಉಮೇಶ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿತ್ತು.
ಆರೋಪಿಯೇ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ಕೂಡಾ ಜೇಮ್ಸ್ ವಿರುದ್ಧವೇ ಆರೋಪಪಟ್ಟಿ ದಾಖಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಶಿವಾನಂದ ಪೆರ್ಲ ವಾದಿಸಿದ್ದರು.
ಪ್ರಕರಣದ ವೃತ್ತಾಂತ:
ಜೆಪಿ ನಗರದಲ್ಲಿ 2010ರ ಡಿಸೆಂಬರ್ ನಲ್ಲಿ ನಡೆದಿದ್ದ ಕೊಲೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಕೊಲೆ ಪ್ರಕರಣಬೆಂಗಳೂರು ಪೊಲೀಸರಿಂದ ಆರೋಪಿ ಜೆಮ್ಸ್ನ ಬಂಧನಅಂದಿನ ಇನ್ಸ್ಪೆಕ್ಟರ್ ಎಸ್.ಕೆ.ಉಮೇಶ್ ಬಂಧಿಸಿದ್ದರು. ಆದ್ರೆ ಆರೋಪಿ ಆತ ಅಲ್ಲ ಎಂದು ಕೊಲೆಯಾದ ಸುರೇಖಾ ತಂದೆ ಆರೋಪ ಮಾಡಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಂದೆ ದೀನ್ದಯಾಳ್ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರ ತನಿಖೆ ಸರಿ ಇಲ್ಲವೆಂದೂ, ಸುರೇಖಾಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಸುರೇಖಾ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಡದಿಂದ ತನಿಖೆಯನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಸಿಬಿಐ ತನಿಖೆಯಿಂದ ಜೇಮ್ಸ್ ಆರೋಪಿ ಎಂದು ಸಾಬೀತಾಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ತನಿಖೆ ಸರಿ ಎಂಬುದೂ ಇದೀಗ ಸಾಬೀತಾಗಿದೆ.
Published On - 2:29 pm, Wed, 6 November 19