ತೆಲಂಗಾಣ: 4 ವರ್ಷ, ಮೂರು ರಾಜ್ಯಗಳಲ್ಲಿ 11 ಜನರನ್ನು ಕೊಂದಿದ್ದ ಸೀರಿಯಲ್ ಕಿಲ್ಲರ್ ಬಂಧನ

|

Updated on: Dec 13, 2023 | 7:40 PM

ನಾಲ್ಕು ವರ್ಷಗಳಲ್ಲಿ ಮೂರು ರಾಜ್ಯಗಳಲ್ಲಿ 11 ಮಂದಿಯನ್ನು ಹತ್ಯೆ ಮಾಡಿದ್ದ ಸೀರಿಯಲ್​ ಕಿಲ್ಲರ್​ನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಮೊದಲು 2020ರಲ್ಲಿ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬನನ್ನು ಆ್ಯಸಿಡ್ ಹಾಗೂ ವಿಷದ ಸಹಾಯದಿಂದ ಹತ್ಯೆ ಮಾಡಿದ್ದ. ಅದಾದ ಹೀಗೆಯೇ ಸತತ ನಾಲ್ಕು ವರ್ಷಗಳ ಕಾಲ, ತೆಲಂಗಾಣ, ಆಂಧ್ರಪ್ರದೇಶ ಮತ್ತು ನೂರಾರು ಕಿಲೋಮೀಟರ್ ದೂರದ ಕರ್ನಾಟಕದಲ್ಲಿ ಅದೇ ರೀತಿಯಲ್ಲಿ 10 ಜನರ ಮೃತದೇಹಗಳು ಪತ್ತೆಯಾಗಿತ್ತು ಮತ್ತು ಈ ದೇಹಗಳ ಮೇಲೆ ಅದೇ ರೀತಿಯ ಗುರುತುಗಳು ಕಂಡುಬಂದಿದ್ದವು.

ತೆಲಂಗಾಣ: 4 ವರ್ಷ, ಮೂರು ರಾಜ್ಯಗಳಲ್ಲಿ 11 ಜನರನ್ನು ಕೊಂದಿದ್ದ ಸೀರಿಯಲ್ ಕಿಲ್ಲರ್ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ನಾಲ್ಕು ವರ್ಷಗಳಲ್ಲಿ ಮೂರು ರಾಜ್ಯಗಳಲ್ಲಿ 11 ಮಂದಿಯನ್ನು ಹತ್ಯೆ ಮಾಡಿದ್ದ ಸೀರಿಯಲ್​ ಕಿಲ್ಲರ್​ನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಮೊದಲು 2020ರಲ್ಲಿ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬನನ್ನು ಆ್ಯಸಿಡ್ ಹಾಗೂ ವಿಷದ ಸಹಾಯದಿಂದ ಹತ್ಯೆ ಮಾಡಿದ್ದ. ಅದಾದ ಹೀಗೆಯೇ ಸತತ ನಾಲ್ಕು ವರ್ಷಗಳ ಕಾಲ, ತೆಲಂಗಾಣ, ಆಂಧ್ರಪ್ರದೇಶ ಮತ್ತು ನೂರಾರು ಕಿಲೋಮೀಟರ್ ದೂರದ ಕರ್ನಾಟಕದಲ್ಲಿ ಅದೇ ರೀತಿಯಲ್ಲಿ 10 ಜನರ ಮೃತದೇಹಗಳು ಪತ್ತೆಯಾಗಿತ್ತು ಮತ್ತು ಈ ದೇಹಗಳ ಮೇಲೆ ಅದೇ ರೀತಿಯ ಗುರುತುಗಳು ಕಂಡುಬಂದಿದ್ದವು.

ಇದು ಯಾವುದೇ ಸಿನಿಮಾದಂತೆ ಕಂಡರೂ ನಿಜ ಘಟನೆಯಾಗಿದೆ, ನಾಲ್ಕು ವರ್ಷಗಳಲ್ಲಿ ಮೂರು ವಿವಿಧ ರಾಜ್ಯಗಳಲ್ಲಿ 11 ಜನರನ್ನು ಕೊಂದ ಸರಣಿ ಹಂತಕನನ್ನು ತೆಲಂಗಾಣದಲ್ಲಿ ಬಂಧಿಸಲಾಗಿದೆ. ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ತನ್ನನ್ನು ನಿಧಿ ಹುಡುಕುವವನಾಗಿ ಘೋಷಿಸಿಕೊಂಡಿದ್ದ. ಮನೆ, ಜಮೀನಿನೊಳಗೆ ಹುದುಗಿರುವ ನಿಧಿಯನ್ನು ಹೊರತೆಗೆಯಲು ಜನರಿಗೆ ಆಮಿಷವೊಡ್ಡುತ್ತಿದ್ದ ಆತ ಅದಕ್ಕೆ ಪ್ರತಿಯಾಗಿ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿದ್ದ ನಂತರ ಅವರನ್ನು ಹತ್ಯೆ ಮಾಡುತ್ತಿದ್ದ.

ಕಾಣೆಯಾದ ಹೈದರಾಬಾದ್ ನಿವಾಸಿ ಎ ವೆಂಕಟೇಶ್ (32) ಅವರ ಪತ್ನಿ ನವೆಂಬರ್ 28 ರಂದು ಪೊಲೀಸ್ ದೂರು ನೀಡಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 47 ವರ್ಷದ ಆರ್ ಸತ್ಯನಾರಾಯಣ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ವೇಳೆ ಸತ್ಯನಾರಾಯಣ್ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ 11 ಕೊಲೆಗಳ ಭಯಾನಕ ಕಥೆಯನ್ನು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ನಾಗರ್‌ಕರ್ನೂಲ್ ಮತ್ತು ವನಪರ್ತಿ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಮೂಲಕ ವೆಂಕಟೇಶ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ. ವನಪರ್ತಿ ಮೂಲದ ವೆಂಕಟೇಶ್ ಅವರು ಕೊಲ್ಲಾಪುರದ ತಮ್ಮ ಜಮೀನಿನಲ್ಲಿ ನಿಧಿಯನ್ನು ಹೊರತೆಗೆಯಲು ಸತ್ಯನಾರಾಯಣ ಅವರ ನೆರವು ಕೋರಿದರು. ಇದಕ್ಕಾಗಿ ಮುಂಗಡವಾಗಿ 10 ಲಕ್ಷ ರೂ. ಕೇಳಿದ್ದ.

ಸತ್ಯನಾರಾಯಣ ಮೂರು ಗರ್ಭಿಣಿಯರನ್ನು ಬಲಿಕೊಡುವಂತೆ ಕೇಳಿದ್ದ, ಆಗ ವೆಂಕಟೇಶ್ ನಿರಾಕರಿಸಿ ಒಡವೆ ತೆಗೆಯಲು 10 ಲಕ್ಷ ರೂ. ಮುಂಗಡ ಹಣ ನೀಡುತ್ತೇನೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: ಮಂಡ್ಯ: ಮಗಳ ಮುಂದೆಯೇ ತಾಯಿಯ ಬರ್ಬರ ಹತ್ಯೆ; ಪೂಜೆ ಮುಗಿಸಿಕೊಂಡು ಬರುವಾಗ ನಡುರಾತ್ರಿ ಕೊಲೆ

ಸತ್ಯನಾರಾಯಣ ಅವರು ವೆಂಕಟೇಶ್‌ಗೆ ಹಣದ ಆಮಿಷವೊಡ್ಡಿ ನ.4ರಂದು ನಾಗರಕರ್ನೂಲ್‌ನ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ವಿಷಕಾರಿ ಪದಾರ್ಥ ನೀಡಿ ಪ್ರಜ್ಞೆ ತಪ್ಪಿದ ಬಳಿಕ ಹಂತಕ ವೆಂಕಟೇಶ್ ಬಾಯಿ ಹಾಗೂ ದೇಹದ ಮೇಲೆ ಆ್ಯಸಿಡ್ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘೋರ ಕೃತ್ಯಗಳ ಕಥೆ ಇಲ್ಲಿಗೆ ನಿಂತಿಲ್ಲ, ಸತ್ಯನಾರಾಯಣ 2020 ರಿಂದ ಏಳು ಅಪರಾಧಗಳಲ್ಲಿ 10 ಜನರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

2020 ರಲ್ಲಿ ವನಪರ್ತಿಯ ರೇವಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದಿದ್ದಾರೆ, 2021ರಲ್ಲಿ ನಾಗರಕರ್ನೂಲ್ ನಗರ ಮತ್ತು ಕೊಲ್ಲಾಪುರದಲ್ಲಿ ತಲಾ ಒಬ್ಬರನ್ನು ಹತ್ಯೆ ಮಾಡಿದ್ದಾರೆ. ನಾಗರಕರ್ನೂಲ್‌ನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಅದೇ ರೀತಿಯಲ್ಲಿ ಹತ್ಯೆ ಮಾಡಲಾಗಿದೆ.

2023ರಲ್ಲಿ ಕರ್ನಾಟಕದ ರಾಯಚೂರು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಡುಗೂರು ಬಳಿ ಇದೇ ರೀತಿ ಇಬ್ಬರು ಸಾವನ್ನಪ್ಪಿದ್ದರು. ಅವರ ಮನೆಯಲ್ಲಿ ಹೂತಿಟ್ಟ ನಿಧಿಯನ್ನು ಹಿಂಪಡೆಯಲು ಪ್ರತಿಯೊಬ್ಬರೂ ಅವರನ್ನು ಸಂಪರ್ಕಿಸಿದ್ದರು ಮತ್ತು ನಂತರ ಮಾರಣಾಂತಿಕ ವಿಷದಿಂದ ಸತ್ತಿರುವುದು ಕಂಡುಬಂದಿದೆ. ಇದೀಗ ಅವರನ್ನು ವಿಚಾರಣೆಗೊಳಪಡಿಸುವ ಮೂಲಕ ಈ ಘಟನೆಗಳನ್ನು ಮತ್ತೆ ತನಿಖೆ ಮಾಡಲು ತೀರ್ಮಾನಿಸಲಾಗಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ