ಸಂಸತ್ ಭವನದಲ್ಲಿ ಕೋಲಾಹಲ ಸೃಷ್ಟಿಸಿದ ಯುವಕ ತನ್ನ ಶೂನಲ್ಲಿ ಹೊಗೆಯುಗುಳುವ ವಸ್ತು ಬಚ್ಚಿಟ್ಟುಕೊಂಡಿದ್ದ: ಪ್ರತ್ಯಕ್ಷದರ್ಶಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಬೆಂಗಳೂರಲ್ಲಿ ಮೊದಲ ವಿಧಾನ ಸಭಾ ಅಧಿವೇಶನದ ಕಾರ್ಯಕಲಾಪ ನಡೆಯುವಾಗಲೂ ದೊಡ್ಡ ಪ್ರಮಾಣದ ಭದ್ರತಾ ಲೋಪ ಸಂಭವಿಸಿತ್ತು. ವ್ಯಕ್ತಿಯೊಬ್ಬರು ಸದನ ಪ್ರವೇಶಿಸಿ ಶಾಸಕರಿಗೆ ಮೀಸಲಾದ ಆಸನದಲ್ಲಿ ಕುಳಿತುಬಿಟ್ಟಿದ್ದರು. ಆದರೆ ಆ ವ್ಯಕ್ತಿ ಅಮಾಯಕ, ಗೊತ್ತಾಗದೆ ಸದನ ಪ್ರವೇಶಿಸಿಬಿಟ್ಟಿದ್ದರು. ಆದರೆ ಇವತ್ತು ದೆಹಲಿಯಲ್ಲಿ ಸಂಸತ್ ಭವನ ನುಗ್ಗಿದವರು ಅಮಾಯಕರಲ್ಲ, ಯಾವುದೋ ಉದ್ದೇಶ ಅವರಲ್ಲಿತ್ತು.
ದೆಹಲಿ: ಸಂಸತ್ ಭವನಕ್ಕೆ ನುಗ್ಗಿ ಇಬ್ಬರು ಯುವಕರು ಕೋಲಾಹಲ ಸೃಷ್ಟಿಸಿದಾಗ ಗ್ಯಾಲರಿಗಳಲ್ಲಿದ್ದ ಜನರ ಪೈಕಿ ಕೆಲ ಕನ್ನಡಿಗರಾಗಿದ್ದರು. ತಮ್ಮ ಕಣ್ಣೆದುರು ನಡೆದ ಘಟನೆಯನ್ನು ಮೋಹನ್ ದಾನಪ್ಪ ಹೆಸರಿನ ಒಬ್ಬ ಕನ್ನಡಿಗ ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನಿಗೆ ವಿವರಿಸಿದ್ದಾರೆ. ಮೋಹನ್ ಒಂದನೇ ಗ್ಯಾಲರಿಯಲ್ಲಿದ್ದರೆ, ದುಷ್ಕರ್ಮಿ (miscreant) ಎರಡನೇ ಗ್ಯಾಲರಿಯಲ್ಲಿದ್ದನಂತೆ. ಮಧ್ಯಪ್ರದೇಶದ ಸಂಸದರೊಬ್ಬರು ಸಂಸತ್ತಿನಲ್ಲಿ ಮಾತಾಡುತ್ತಿದ್ದಾಗ ಅವನು, ಗ್ಯಾಲರಿಯಿಂದ ಸಂಸದರು ಕೂರುವ ಸ್ಥಳದ ಮೇಲೆ ಜಿಗಿದಿದ್ದಾನೆ. ಆದರೆ ಜಿಗಿಯುವಾಗ ಕೆಳಗೆ ಬಿದ್ದ ಅವನನ್ನು ಹತ್ತಿರದಲ್ಲೇ ಇದ್ದ ಸಂಸದರಾದ ರಾಹುಲ್ ಗಾಂಧಿ (Rahul Gandhi), ಎಸ್ ಮುನಿಸ್ವಾಮಿ (S Muniswamy) ಮತ್ತು ಸಂಗಣ್ಣ ಕರಡಿ (Sanganna Karadi) ಹಿಡಿದು ಥಳಿಸಿದರು ಎಂದು ಮೋಹನ್ ಹೇಳುತ್ತಾರೆ. ಅವನು ತನ್ನ ಶೂನಲ್ಲಿ ಹೊಗೆಯುಗುಳುವ ವಸ್ತುವೊಂದನ್ನು ಇಟ್ಟಿಕೊಂಡಿದ್ದ ಮತ್ತು ಅದನ್ನು ಬಳಸಿ ಹೊಗೆಯೇಳುವಂತೆ ಮಾಡಿದ ಎಂದು ಅವರು ಹೇಳುತ್ತಾರೆ. ಅಷ್ಟರಲ್ಲಿ ಸದನದೊಳಗೆ ಬಂದ ಸಿಐಎಸ್ ಎಫ್ ಸಿಬ್ಬಂದಿ ಅವನನ್ನು ವಶಕ್ಕೆ ಪಡೆದು ಅಲ್ಲಿಂದ ಎಳೆದೊಯ್ದರು. ಘಟನೆ ನಡೆದಾಗ ಸಂಸದರು ಅದರಲ್ಲೂ ವಿಶೇಷವಾಗಿ ಮಹಿಳಾ ಸದಸ್ಯರು ವಿಪರೀತ ಆತಂಕದಲ್ಲಿದ್ದರು ಎಂದು ಮೋಹನ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ