ನಿಗೂಢ ಪ್ರೇಮ, ಸಾವು: ಅಕ್ಕಪಕ್ಕದ ಊರಿನ ಹದಿಹರೆಯದ ಪ್ರೇಮಿಗಳ ಆತ್ಮಹತ್ಯೆ: ಕುಟುಂಬಸ್ಥರ ಆಕ್ರಂದನ

ಆತ್ಮಹತ್ಯೆಗೂ ಮುನ್ನ ಆಕಾಶ್, ತನ್ನ ತಾಯಿಗೆ ಕಾಲ್ ಮಾಡಿ ನನ್ನ ಬಳಿ‌ ನಾನು ಪ್ರೀತಿಸುತ್ತಿರೋ ರಾಧಿಕ ಬಂದಿದ್ದಾಳೆ. ಇಬ್ಬರೂ ವಿಷ ಸೇವಿಸಿದ್ದೇವೆ ಅಂತಾ ಹೇಳಿ ಕಾಲ್ ಕಟ್ ಮಾಡಿದ್ದಾನೆ.‌ ತಕ್ಷಣ ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ.‌ ಸ್ಥಳಕ್ಕೆ ಹೋಗಿ ನೋಡೊದ್ರೊಳಗೆ...

ನಿಗೂಢ ಪ್ರೇಮ, ಸಾವು: ಅಕ್ಕಪಕ್ಕದ ಊರಿನ ಹದಿಹರೆಯದ ಪ್ರೇಮಿಗಳ ಆತ್ಮಹತ್ಯೆ: ಕುಟುಂಬಸ್ಥರ ಆಕ್ರಂದನ
ಅಕ್ಕಪಕ್ಕದ ಊರಿನ ಹದಿಹರೆಯದ ಪ್ರೇಮಿಗಳ ಆತ್ಮಹತ್ಯೆ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​

Updated on: Dec 13, 2023 | 4:24 PM

ಅದು ಪ್ರೀತಿಸೋ ವಯಸ್ಸೂ ಅಲ್ಲ; ಅದು ಸಾಯೋ ವಯಸ್ಸು ಕೂಡಾ ಅಲ್ಲ. ಆದ್ರೂ ಆ ಪ್ರೇಮಿಗಳು ಪ್ರೀತಿಯಲ್ಲಿ ಮುಳುಗಿದ್ರು. ಹೆಚ್ಚು ಕಡಿಮೆ ಒಂದೂವರೆ ವರ್ಷದ ಲವ್ ಇರ್ಬೇಕು.. ಆದ್ರೆ ಅದೇನಾಯ್ತೋ ಗೊತ್ತಿಲ್ಲ… ರಾತೋರಾತ್ರಿ ಓಡಿಹೋಗಿ ವಿಷಸೇವಿಸಿ ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ.. ಇಂತಹದೊಂದು ಟ್ರಾಜಿಡಿ ಲವ್ ಸ್ಟೋರಿ ನಡೆದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ… ಮತ್ತೊಂದೆಡೆ ಪೊಲೀಸರಿಂದ ತನಿಖೆ.. ಅಷ್ಟಕ್ಕೂ ಈ ವಿದ್ಯಮಾನಗಳು ಕಂಡು ಬಂದಿದ್ದು ಕಲಬುರಗಿಯಲ್ಲಿ.

ಹೌದು.. ಫೋಟೊದಲ್ಲಿ ಕಾಣ್ತಾಯಿರೋ ಈಕೆಯ ಹೆಸರು ರಾಧಿಕ – ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಗ್ರಾಮದ 15 ವರ್ಷದ ಬಾಲಕಿ. ಮತ್ತು ಆಕಾಶ್ -ಕೊಲ್ಲೂರ್ ಗ್ರಾಮದ 18 ವರ್ಷದವ. ಯಾದಗಿರಿ ನಗರದಲ್ಲಿ ಐಟಿಐ ಮಾಡ್ತಿದ್ದ ಆಕಾಶ್ ಮತ್ತು ಎಂಟನೆ ತರಗತಿಯಲ್ಲಿ ಓದುತ್ತಿದ್ದ ರಾಧಿಕ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು.

ಪರಸ್ಪರ ಭೇಟಿಯಾಗೋದು, ವಾಟ್ಸಪ್‌ ಚಾಟ್ ಮಾಡ್ತಾ ಮಾಡ್ತಾ… ತಮ್ಮ ಪ್ರೀತಿಯನ್ನ ಹೆಮ್ಮರವಾಗಿ ಬೆಳೆಸೊಕೆ ಮುಂದಾಗಿದ್ದರು. ಆದರೆ ಮಂಗಳವಾರ ರಾತ್ರಿ ಅದೆನಾಯೀತೋ ಏನೋ.. ಇದ್ದಕ್ಕಿದ್ದಂತೆ ಮನೆಯಿಂದ ಓಡಿಹೋದ ರಾಧಿಕ ಮತ್ತು ಆಕಾಶ್, ಚೌಕಿತಾಂಡಾದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಆತ್ಮಹತ್ಯೆಗೂ ಮುನ್ನ ಆಕಾಶ್, ತನ್ನ ತಾಯಿಗೆ ಕಾಲ್ ಮಾಡಿ ನನ್ನ ಬಳಿ‌ ನಾನು ಪ್ರೀತಿಸುತ್ತಿರೋ ರಾಧಿಕ ಬಂದಿದ್ದಾಳೆ. ಇಬ್ಬರೂ ವಿಷ ಸೇವಿಸಿದ್ದೇವೆ ಅಂತಾ ಹೇಳಿ ಕಾಲ್ ಕಟ್ ಮಾಡಿದ್ದಾನೆ.‌ ತಕ್ಷಣ ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ.‌ ಸ್ಥಳಕ್ಕೆ ಹೋಗಿ ನೋಡೊದ್ರೊಳಗೆ ಅರೆಬರೆ ಜೀವ ಇದ್ದಿದ್ದನ್ನ ಕಂಡು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಇನ್ನು ರಾಧಿಕ ಮತ್ತು ಆಕಾಶ್ ಇಬ್ಬರೂ ಅಕ್ಕಪಕ್ಕದ ಊರಿನವರೇ.. ಐಟಿಐ ಮಾಡ್ತಾ ಮಾಡ್ತಾನೆ ಆಕಾಶ್, ದುಡಿಯೋಕೆ ಅಂತಾ ಬೆಂಗಳೂರಿಗೆ ಹೋಗಿದ್ದನು. ಆದರೆ ಸಪ್ಲಿಮೆಂಟರಿ ಪರೀಕ್ಷೆ ನಿಮಿತ್ತ ಆಕಾಶ್ ಊರಿಗೆ ಬಂದಿದ್ದನು.. ಇಬ್ಬರು ಪ್ರೀತಿ ಮಾಡೋ ವಿಷ್ಯ ಎರಡು ಕುಟುಂಬಸ್ಥರಿಗೆ ಗೊತ್ತೆ ಇರಲಿಲ್ಲ.

ಇತ್ತ ರಾಧಿಕ ತಮ್ಮ ಮನೆಯವರಿಗೆ ಗೊತ್ತಿಲ್ಲದೇ ಮೊಬೈಲ್ ಬಳಕೆ ಮಾಡ್ತಾ ಆಕಾಶ್ ಜೊತೆ ಚಾಟ್ ಮಾಡ್ತಾ ಮಾತಾಡ್ತಾ ಇದ್ದಳು. ಅದಲ್ಲದೇ ರಾಧಿಕ ತನ್ನ ತಾಯಿ ಮೊಬೈಲ್‌ನಲ್ಲಿ ಆಕಾಶ್‌ನ ನಂಬರ್‌ನ್ನ ತಾಯಿಗೆ ಗೊತ್ತಿಲ್ಲದೇ ಎಮ್‌ಆರ್ ಅಂತಾ ಸೆವ್ ಮಾಡಿದ್ದಳು. ಕಳೆದ ರಾತ್ರಿ ರಾಧಿಕಾಗೆ ಕರೆ ಮಾಡಿ ಚೌಕಿ ತಾಂಡಾದ ಬಳಿ ಕರೆಯಿಸಿಕೊಂಡು ಅದೇನು ಚರ್ಚೆ ಮಾಡಿದ್ದಾರೋ ಏನೋ.. ಇಬ್ಬರೂ ಸಾವಿನ ಮನೆ ಕದತಟ್ಟಿದ್ದಾರೆ.

ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಭೇಟಿ ನೀಡಿರೋ ವಾಡಿ ಠಾಣೆ ಪೊಲೀಸರು, ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.. ಒಟ್ಟಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿಮ ಬಾಳಿಬದುಕಬೇಕಾದ ಇಬ್ಬರು ಪ್ರೇಮಿಗಳು ದಾರುಣ ಅಂತ್ಯ ಕಂಡಿರೋದು ದುರಂತವೇ ಸರಿ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ