AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು-ಬೈಕ್​ಗಳ ಮಧ್ಯೆ ಭೀಕರ ಅಪಘಾತ, ಮೂವರು ಸಾವು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ

ಆ ತಾಂಡಾದ ಮನೆಯೊಂದರಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಇಂದು(ಮೇ.16) ಬೆಳಗ್ಗೆಯೇ ಮದುವೆ ಇರೋದ್ರಿಂದ ಮನೆಗೆ ತಳಿರು ತೋರಣ ಕಟ್ಟಿ ಶೃಂಗಾರ ಮಾಡಿದ್ರು. ಸೊಸೆಯ ಅದ್ಧೂರಿ ಮದುವೆ ಮಾಡೋಕೆ ಅಂತ ಮಾವ ಕೂಡ ಗೋವಾದಿಂದ ಆಗಮಿಸಿದ್ದ. ನಿನ್ನೆ(ಮೇ.15) ಮದುವೆ ಖರೀದಿಗೆ ಬೈಕ್​ನಲ್ಲಿ ಅಳಿಯನ ಜೊತೆ ಗದಗ ನಗರಕ್ಕೆ ಆಗಮಿಸ್ತಾಯಿದ್ದರು. ಆದ್ರೆ, ದಾರಿಯಲ್ಲಿ ಕಾರು ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಕಾರು-ಬೈಕ್​ಗಳ ಮಧ್ಯೆ ಭೀಕರ ಅಪಘಾತ, ಮೂವರು ಸಾವು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ
ಗದಗ ಅಪಘಾತ
ಕಿರಣ್ ಹನುಮಂತ್​ ಮಾದಾರ್
|

Updated on: May 16, 2023 | 1:42 PM

Share

ಗದಗ: ಮಗಳ ಮದುವೆ ನಿಮಿತ್ತ ತಳಿರು ತೋರಣದಿಂದ ಶೃಂಗಾರಗೊಂಡ ಮನೆ. ಮತ್ತೊಂದಡೆ ಮನೆಯ ಮಗ, ಅಳಿಯ ಧಾರುಣ ಸಾವು. ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ. ಇಡೀ ಗ್ರಾಮವೇ ಮೌನವಾಗಿದೆ. ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಈ ಭೀಕರ ಅಪಘಾತ ನಡೆದಿದ್ದು, ಗದಗ(Gadag) ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ. ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ಇಂದು(ಮೇ.16) ಕೃಷ್ಣಪ್ಪ ಚವ್ಹಾಣ ಎಂಬುವರ ಸಹೋದರಿ ಮದುವೆ ಇತ್ತು. ಸಹೋದರಿಯ ಅದ್ಧೂರಿ ಮದುವೆಗೆ ಎಲ್ಲ ತಯ್ಯಾರಿ ನಡೆದಿತ್ತು. ತಳಿರು ತೋರಣ ಕಟ್ಟಿ ಮದುವೆ ಮನೆ ಶೃಂಗಾರ ಮಾಡಿದ್ರು. ಸೊಸೆಯ ಮದುವೆಗೆಂದು ಗೋವಾದಿಂದ ಶಿವಾನಂದ ಲಮಾಣಿ ಕೂಡ ಆಗಮಿಸಿದ್ದರು. ಇವತ್ತು ಶಿವಾನಂದ ಲಮಾಣಿ ಅಳಿಯ ಕೃಷ್ಣಪ್ಪ ಜೊತೆ ಮದುವೆ ವಸ್ತುಗಳ ಖರೀದಿಗೆಂದು ಬೈಕ್ ಮೇಲೆ ಗದಗ ನಗರಕ್ಕೆ ಆಗಮಿಸುತ್ತಿದ್ರು. ಇನ್ನೆನೂ 2 ಕಿ.ಮೀ ಗದಗ ಇರುವಾಗಲೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಹೌದು ಕಾರ್ ರೂಪದಲ್ಲಿ ಒಕ್ಕರಿಸಿದ ಜವಾರಾಯ ಇಬ್ಬರನ್ನು ಬಲಿ ಪಡೆದಿದ್ದಾನೆ. ಗದಗದಿಂದ ವೇಗದಿಂದ ಬರುತ್ತಿದ್ದ ಕಾರ್, ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಮೊದಲು ಕೃಷ್ಣಪ್ಪ ಬೈಕ್​ಗೆ ಗುದ್ದಿದ್ದು, ಅಳಿಯ ಮಾವ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಇನ್ನೊಂದು ಬೈಕ್​ಗೆ ಕಾರ್ ಡಿಕ್ಕಿಯಾಗಿದ್ದು ಶಿಂಗಟರಾಯನಕೇರಿ ತಾಂಡಾದ 50 ವರ್ಷದ ಶಿವಪ್ಪ ನಾಯಕ್ ಕೂಡ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಅಪಘಾತದ ಬಳಿಕ ಕಾರು ಚಾಲಕ ಹಾಗೂ ಕಾರಿನಲ್ಲಿದ್ದವ್ರು ಎಸ್ಕೇಪ್ ಆಗಿದ್ದಾರೆ. ಇನ್ನು ಭೀಕರ ಅಪಘಾತ ನೋಡಿದ್ದ ಅಡವಿಸೋಮಾಪುರ ಗ್ರಾಮದ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಅಪಘಾತವಾಗಿ 1 ಗಂಟೆ ಕಳೆದರೂ ಬಾರದ ಆಂಬುಲೆನ್ಸ್: ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ

ಶಿವಾನಂದ ಮೂಲತಃ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದವ್ರು. ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ಸೊಸೆಯ ಮದುವೆ ಹಿನ್ನಲೆಯಲ್ಲಿ ಊರಿಗೆ ಬಂದಿದ್ರು. ಶಿವಾನಂದಗೆ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ. ಕೃಷ್ಣಪ್ಪ ಚವ್ಹಾಣಗೆ ಮದುವೆ ಫಿಕ್ಸ್ ಆಗಿತ್ತು. ಡೋಣಿ ತಾಂಡಾದಲ್ಲಿ ಮದುವೆ ಸಂಭ್ರಮದಲ್ಲಿದ್ದ ಕೃಷ್ಣಪ್ಪ ಚವ್ಹಾಣ್​ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ. ಒಂದು ಕಡೆ ಮನೆಯ ಮಗನ ಸಾವು ಮತ್ತೊಂದೆಡೆ ಮಗಳ ಗಂಡನ ಸಾವಿನ ಸುದ್ದಿ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸಂಬಂಧಿಕರಿಂದ ತುಂಬಿ ತುಳಕಬೇಕಿದ್ದ ಮದುವೆ ಸಂಭ್ರಮದ ಮನೆಯಲ್ಲಿ ಯಾರೂ ಇಲ್ಲದೇ ಭಿಕೋ ಎನ್ನುತ್ತಿದೆ. ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಮೂವರ ಶವಗಳು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮದುವೆ ಸಂಭ್ರಮ ಇತ್ತು ಸರ್. ನಮ್ಮ ಅಣ್ಣ ಗೋವಾದಿಂದ ಮದುವೆಗೆ ಬಂದಿದ್ದ. ಅಣ್ಣ ಅಳಿಯ ಗದಗ ನಗರಕ್ಕೆ ಹೋಗುವಾಗ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಶಿವಾನಂದ ತಮ್ಮ ಕಣ್ಣೀರು ಹಾಕುತ್ತಿದ್ದಾನೆ.

ಮೃತರು ಮುಂಡರಗಿ ತಾಲೂಕಿನ ಡೋಣಿ ತಾಂಡದ ಕೃಷ್ಣಪ್ಪ ಚವ್ಹಾಣ, ಶಿರಹಟ್ಟಿ ತಾಲೂಕಿನ ಛಬ್ಬಿ ತಾಂಡಾದ ಶಿವಾನಂದ ಹಾಗೂ ಗದಗ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್ ಮೃತ ದುರ್ದೈವಿಗಳು. ಮೃತ ಶಿವಪ್ಪ ನಾಯಕ್​ಗೆ ನಾಲ್ಕು ಜನ ಮಕ್ಕಳು. ಅಪಘಾತ ಬಳಿಕ ಕಾರು ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಗದಗ ಗ್ರಾಮೀಣ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ಒಟ್ಟಾರೆಯಾಗಿ ಮದುವೆ ಸಂಭ್ರದಲ್ಲಿ ಇರಬೇಕಾದ ಅಳಿಯ ಮಾವ ಸಾವಿನ ಮನೆ ಸೇರಿದ್ರೆ. ಮದುವೆ ಸಂಭ್ರದಲ್ಲಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಇಡೀ ತಾಂಡಾದ ಜನರು ಮಮ್ಮಲ ಮರುಗುವಂತೆ ಮಾಡಿದೆ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ