ಬೆಂಗಳೂರಲ್ಲಿ ವೃದ್ಧೆಯ ಬರ್ಬರ ಹತ್ಯೆ; ಡ್ರಮ್​ನಲ್ಲಿ ಮೃತದೇಹ ಇಟ್ಟು ಹಂತಕ ಪರಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2024 | 8:31 PM

ಕೆ.ಆರ್.ಪುರಂ ಪೊಲೀಸ್​ ಠಾಣಾ(KR Puram Police Station) ವ್ಯಾಪ್ತಿಯ ನಿಸರ್ಗ ಲೇಔಟ್​ನಲ್ಲಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಧಾರುಣ ಘಟನೆ ನಡೆದಿದೆ. ಬಳಿಕ ಹಂತಕರು ಮೃತದೇಹವನ್ನು ಡ್ರಮ್​ನಲ್ಲಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಲ್ಲಿ ವೃದ್ಧೆಯ ಬರ್ಬರ ಹತ್ಯೆ; ಡ್ರಮ್​ನಲ್ಲಿ ಮೃತದೇಹ ಇಟ್ಟು ಹಂತಕ ಪರಾರಿ
ಕೆಆರ್​ ಪುರಂ ಅಲ್ಲಿ ವೃದ್ದೆಯ ಬರ್ಬರ ಹತ್ಯೆ
Follow us on

ಬೆಂಗಳೂರು, ಫೆ.25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಡ್ರಮ್​ನಲ್ಲಿ ಮೃತದೇಹ ಇಟ್ಟು ಹಂತಕ ಪರಾರಿಯಾದ ಘಟನೆ ಕೆ.ಆರ್.ಪುರಂ ಪೊಲೀಸ್​ ಠಾಣಾ(KR Puram Police Station) ವ್ಯಾಪ್ತಿಯ ನಿಸರ್ಗ ಲೇಔಟ್​ನಲ್ಲಿ ನಡೆದಿದೆ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ವೃದ್ಧೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ದುರ್ವಾಸನೆ ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿಟಿ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು, ಮತ್ತೊಬ್ಬನಿಗೆ ಗಾಯ

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಬಳಿ ಟಿಟಿ ವಾಹನ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಸಿಲ್ಕಲ್‌ಪುರ ನಿವಾಸಿ ರಾಜಣ್ಣ(65) ಮೃತ ದುರ್ದೈವಿ. ಗಂಭೀರ ಗಾಯಗೊಂಡಿರುವ ಮತ್ತೊಬ್ಬ ಸವಾರನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಯುವಕನ ಕಾಟ ತಾಳಲಾರದೆ ಬಾಲಕಿ ಆತ್ಮಹತ್ಯೆ, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ

ಮಲೆ ಮಹದೇಶ್ವರಬೆಟ್ಟದಲ್ಲಿ ಕಾರು ಹರಿದು 7 ವರ್ಷದ ಬಾಲಕಿ ಸಾವು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಕಾರು ಹರಿದು ಆಟವಾಡುತ್ತಿದ್ದ ತಮಿಳುನಾಡು ಮೂಲದ  ಬಾಲಕಿ ಸಾವನ್ನಪ್ಪಿದ್ದಾಳೆ. ಸುಶ್ಮಿತಾ(7) ಮೃತ ರ್ದುದೈವಿ. ಪಾರ್ಕಿಂಗ್ ​ಲಾಟ್​ನಿಂದ ಕಾರು ಹೊರತೆಗೆಯುವಾಗ ಈ ದುರ್ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಮಲೆ ಮಹದೇಶ್ವರಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sun, 25 February 24