ಛತ್ರಾ, ಮೇ22: ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬೇರೆ ಜಾತಿಯ ಯುವಕನನ್ನು ಪ್ರೀತಿ ಮಾಡಿದಕ್ಕಾಗಿ, ಯುವತಿಯ ಸಹೋದರರು ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬುಡಕಟ್ಟು ಯುವಕನ ಜೊತೆಗಿನ ಪ್ರೇಮ ಸಂಬಂಧಕ್ಕೆ 18 ವರ್ಷದ ದಲಿತ ಯುವತಿಯನ್ನು ಆಕೆ ಅಣ್ಣಂದಿರೇ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಇಬ್ಬರು ಸಹೋದರರು ಕೂಡ ಅಲ್ಲಿಂದ ಪರಾರಿಯಾಗಿದ್ದಾರೆ.
ಯುವತಿಯೂ ತಾನು ಪ್ರೀತಿಸಿದ ಯುವಕನ ಜತೆಗೆ ಇದ್ದ ಸಮಯದಲ್ಲಿ ಸಹೋದರರು ಆಕೆಯನ್ನು ಹಿಡಿದು ಥಳಿಸಿದ್ದಾರೆ. ನಂತರ ಅಲ್ಲಿಂದ ಸೆಹ್ದಾ ಗ್ರಾಮದ ಬಳಿಯ ಅರಣ್ಯಕ್ಕೆ ಎಳೆದೊಯ್ದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಬಿಪಿನ್ ಕುಮಾರ್ ಹೇಳಿದ್ದಾರೆ. ಇಬ್ಬರು ಆರೋಪಿಗಳು ಕೂಡ ಈಗ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಯಾರು ಇಲ್ಲದಿದ್ದಾಗ ಅಣ್ಣ-ತಂಗಿ ಲೈಂಗಿಕ ಕ್ರಿಯೆ: ಗರ್ಭಿಣಿಯಾದ ಸಹೋದರಿ!
ಈ ಬಗ್ಗೆ ಯುವತಿಯಲ್ಲಿ ಹಳ್ಳಿ ಜನರು ಈ ಬಗ್ಗೆ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಯುವಕನ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ತಲೆಮರೆಸಿಕೊಂಡಿರುವ ಸಹೋದರರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ