ಬಟಾಲಾ, ಆ.17: ಮಗಳು ಮತ್ತು ಅಳಿಯನ್ನು ಕೊಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ ವ್ಯಕ್ತಿಯನ್ನೇ ರೌಡಿಗಳು ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಬಟಾಲಾದಲ್ಲಿ ನಡೆದಿದೆ. ಆ.10ರಂದು ಮೈಕ್ ಹಳ್ಳಿಯ ಇಬ್ಬರು ದಂಪತಿಗಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಹಂತಕನ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಹಂತಕರನ್ನು ಮಾಂಡ್ ಗ್ರಾಮದ ಸರ್ವಾನ್ ಸಿಂಗ್, ಡಕೋಹಾ ಗ್ರಾಮದ ಬಲರಾಜ್ ಸಿಂಗ್ ಮತ್ತು ಮಾಡ್ಯಾಲ ಉಪ ಪೊಲೀಸ್ ಠಾಣೆಯ ಗುರ್ವಿಂದರ್ ಸಿಂಗ್ ಅಲಿಯಾಸ್ ಗಿಂಡಾ ನಿವಾಸಿ ಘುಮಾನ್ ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ಸರ್ವಾನ್ ಸಿಂಗ್ ಮತ್ತು ಬಲರಾಜ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದು, ಗುರ್ವಿಂದರ್ ಸಿಂಗ್ ಅಲಿಯಾಸ್ ಗಿಂಡಾ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಲಷ್ಕರ್ ಸಿಂಗ್ ಎಂದು ಹೇಳಲಾಗಿದೆ. ಇತನಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದು, ಮಗ ದುಬೈಯಲ್ಲಿ ಕೆಲಸದಲ್ಲಿದ್ದು. ಇನ್ನು ಮಗಳು ತನಗೆ ಇಷ್ಟವಿಲ್ಲ ವ್ಯಕ್ತಿಯ ಜತೆಗೆ ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕೋಪಕ್ಕೆ ಆಕೆಯನ್ನು ಕೊಲೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದ ಎಂದು ಹೇಳಲಾಗಿದೆ. ಈ ರೌಡಿಗಳಿಗೆ ಮಗಳು ಮತ್ತು ಅಳಿಯನನ್ನು ಹತ್ಯೆ ಮಾಡಲು 2 ಲಕ್ಷ 70 ಸಾವಿರ ರೂಪಾಯಿ ನೀಡಿದ್ದ ಎಂದು ಆರೋಪಿಗಳು ಪೊಲೀಸ್ ತನಿಖೆ ವೇಳೆ ಬಾಯಿಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳ ವಿದೇಶದ ಕನಸು; ಡಾಲರ್ ಆಸೆಗೆ ಸಾಲದ ಸುಳಿಗೆ ಸಿಲುಕಿದ ಪಂಜಾಬ್ ರೈತರು
ಲಷ್ಕರ್ ಸಿಂಗ್ನಿಂದ ಹಣ ತೆಗೆದುಕೊಂಡು ಮಗಳು ಮತ್ತು ಅಳಿಯನನ್ನು ಕೊಂದಿಲ್ಲ. ಇದರಿಂದ ಕೋಪಗೊಂಡ ಲಷ್ಕರ್ ಸಿಂಗ್ ತನ್ನ ಹಣವನ್ನು ಹಿಂದಿರುಗಿಸುವಂತೆ ಈ ಹಂತಕರ ಜತೆಗೆ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ರೌಡಿಗಳು ಲಷ್ಕರ್ ಸಿಂಗ್ ಮತ್ತು ಆತನ ಪತ್ನಿ ಅಮರಿಕ್ ಕೌರ್ ಅವರನ್ನು ಕೊಲೆ ಮಾಡಿದ್ದಾರೆ. ಆದರೆ ಲಷ್ಕರ್ ಸಿಂಗ್ ಮತ್ತು ಆತನ ಪತ್ನಿಯ ಮೃತದೇಹವು ಆ.10ರಂದು ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Thu, 17 August 23