ಪ್ರತ್ಯೇಕ ಘಟನೆ: ಕಾಫಿ‌ ಎಸ್ಟೇಟ್ ಮ್ಯಾನೇಜರ್ ಅನುಮಾನಾಸ್ಪದ ಸಾವು, ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ

ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ ಮ್ಯಾನೇಜರ್​​ ಶವವಾಗಿ ಪತ್ತೆಯಾಗಿದ್ದಾರೆ. ಮತ್ತೊಂದೆಡೆ ಮಗಳಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನೆ ಮಾಡಲು ಬಂದಿದ್ದ ವ್ಯಕ್ತಿ ಕೊಲೆಯಾಗಿದ್ದಾನೆ. ಇನ್ನು ಚಳ್ಳಕೆರೆಯ ಬಿಇಓ ಕಚೇರಿ ಬಳಿ ಮರಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಮೂರು ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ.

ಪ್ರತ್ಯೇಕ ಘಟನೆ: ಕಾಫಿ‌ ಎಸ್ಟೇಟ್ ಮ್ಯಾನೇಜರ್  ಅನುಮಾನಾಸ್ಪದ ಸಾವು, ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Aug 17, 2023 | 10:03 AM

ಚಿಕ್ಕಮಗಳೂರು, (ಆಗಸ್ಟ್ 17): ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾನ್ಗುಡ್ಡ ಕಾಫಿ ಎಸ್ಟೇಟ್(coffee estate) ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದಾರೆ. N.R ಪುರ ತಾಲೂಕಿನ ಬಾಳೆಹೊನ್ನೂರಿನ ನಿರ್ಜನ ಪ್ರದೇಶದ ಕೆರೆಯೊಂದರಲ್ಲಿ ಕಾಫಿ‌ ಎಸ್ಟೇಟ್ ಮ್ಯಾನೇಜರ್ ಶವ ಪತ್ತೆಯಾಗಿದೆ. ಕಾಶಿ ಬೊಪ್ಪಯ್ಯ(59) ಎನ್ನುವವರ ಶವ ಕರೆಯಲ್ಲಿ ಪತ್ತೆಯಾಗಿದೆ. ಕೆರೆಯ ಬಳಿ ಕಾಶಿ ಬೊಪ್ಪಯ್ಯ ಚಪ್ಪಲಿ ,ಪರ್ಸ್ ಪತ್ತೆ ಜೀಪ್ ಇದ್ದು, ಇದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಕೊಡಗು ಸಮೀಪದ ಟಿ. ಶೆಟ್ಟಿಗೇರಿ ಗ್ರಾಮದವರಾದ ಕಾಶಿ ಬೊಪ್ಪಯ್ಯ. ಕಳೆದ ಮೂರು ವರ್ಷಗಳಿಂದ ಬಾಳೆಹೊನ್ನೂರು ಸಮೀಪದ ಖಾನ್ಗುಡ್ಡ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಮೃತಪಟ್ಟಿದ್ದು, ಅಚ್ಚರಿಗೆ ಕಾರಣವಾಗಿದೆ. ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಕಾಶಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೋಲಾರ: ಅಳಿಯನಿಂದ ಮಾವನ ಕೊಲೆ

ಕೋಲಾರ: ಅಳಿಯನೇ ಹೆಣ್ಣು ಕೊಟ್ಟ ಮಾವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದ ಷಹಿದ್ ನಗರದಲ್ಲಿ ನಡೆದಿದೆ. ಷಹಿದ್ ನಗರದ ಬಾಬು ಷರೀಫ್ ಕೊಲೆಯಾದ ವ್ಯಕ್ತಿ. ಅಳಿಯ ತಬರೇಜ್ ಪಾಷಾ ಹಾಗೂ ಜಬೀನಾ ತಾಜ್ ಸೇರಿಕೊಂಡು ಬಾಬು ಷರೀಫ್​ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಬು ಷರೀಫ್ ತನ್ನಮಗಳನ್ನು ತಬರೇಜ್ ಪಾಷಾಗೆ ಕೊಟ್ಟು ಮದುವೆ ಮಾಡಿದ್ದ. ಆದ್ರೆ, ತಬರೇಜ್ ಪಾಷಾ ಹೆಂಡ್ತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಮಗಳಿಗೆ ಆಗುತ್ತಿರುವ ಕಿರುಕುಳವನ್ನು ನೋಡಲಾಗದೇ ತಂದೆ ಬಾಬು ಷರೀಫ್ ಈ ಬಗ್ಗೆ ಅಳಿಯನಿಗೆ ಪ್ರಶ್ನೆ ಮಾಡಲು ಹೋಗಿದ್ದಾನೆ. ಆ ವೇಳೆ ಅಳಿಯ ತಬರೇಜ್ ಪಾಷಾ ಕೊಲೆ ಮಾಡಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವೃದ್ಧೆಗೆ ವಂಚಿಸಿ ಮೂರುವರೆ ಕೋಟಿ ರೂ. ದೋಚಿದ್ದ ಖದೀಮರ ಗ್ಯಾಂಗ್ ಅರೆಸ್ಟ್

ಚಳ್ಳಕೆರೆ ಬಿಇಓ ಕಚೇರಿ ಬಳಿ ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಬಿಇಒ ಕಚೇರಿ ಆವರಣದಲ್ಲಿ ವ್ಯಕ್ತಿಯೋರ್ವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರವಿಕುಮಾರ್(40) ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ. ಮೃತ ರವಿಕುಮಾರ್ ದಾವಣಗೆರೆ ಜಿಲ್ಲೆ‌ಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ನಿವಾಸಿಯಾಗಿದ್ದು, ಚಳ್ಳಕೆರೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಅದೇನಾಗಿತ್ತೋ ಏನೋ ರವಿಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರವಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:02 am, Thu, 17 August 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು